– ಸರಿಯಾಗಿ ವಸ್ತುಗಳನ್ನು ಕೊಡಲಿಲ್ಲ ಎಂದ್ರೆ ಶ್ವಾನ ಕಚ್ಚುತ್ತೆಂದು ಪತ್ರ
ವಾಷಿಂಗ್ಟನ್: ಗೃಹಬಂಧನದಲ್ಲಿದ್ದ ಮೆಕ್ಸಿಕೋದ ವ್ಯಕ್ತಿಯೊಬ್ಬ ತನ್ನ ಶ್ವಾನದ ಮೂಲಕ ಆಹಾರವನ್ನು ತರಿಸಿಕೊಂಡಿದ್ದಾನೆ.
ಆಂಟೋನಿಯೊ ಮುನೊಜ್ ಎಂಬವನು ಮೂರನೇ ದಿನ ಮನೆಯಲ್ಲಿಯೇ ಇದ್ದನು. ಈ ವೇಳೆ ಆತನಿಗೆ ಚಿಟೋಸ್ ತಿನ್ನುವ ಆಸೆಯಾಗಿದೆ. ಮುನೊಜ್ ಮನೆಯಿಂದ ಹೊರಬಂದು ಚಿಟೋಸ್ ಖರೀದಿಸಲು ಸಾಧ್ಯವಿಲ್ಲ. ಹಾಗಾಗಿ ಆತ ತನ್ನ ಶ್ವಾನ ಚಿಹೋವಾ ಮೂಲಕ ಚಿಟೋಸ್ ತರಿಸಿಕೊಂಡಿದ್ದಾನೆ.
Advertisement
Advertisement
ಮುನೋಜ್ ತನ್ನ ಶ್ವಾನದ ಮೇಲೆ ಚೀಟಿವೊಂದನ್ನು ಅಂಟಿಸಿದ್ದನು. ಆ ಚೀಟಿಯಲ್ಲಿ ವಸ್ತುಗಳ ಲಿಸ್ಟ್ ಅನ್ನು ಬರೆದಿದ್ದನು. ಜೊತೆಗೆ ಶ್ವಾನದ ಕಾಲರಿನಲ್ಲಿ(ಬೆಲ್ಟ್) 20 ಡಾಲರ್ ನೋಟ್ ಕೂಡ ಅಂಟಿಸಿದ್ದನು.
Advertisement
ಚೀಟಿಯಲ್ಲಿ, ಹೆಲೋ ಮಿಸ್ಟರ್ ಶಾಪ್ ಕೀಪರ್, ದಯವಿಟ್ಟು ಚೀಟಿಯಲ್ಲಿ ಬರೆದಿರುವ ವಸ್ತುಗಳನ್ನು ನನ್ನ ಶ್ವಾನಗೆ ಕೊಡಿ. ಶ್ವಾನದ ಕಾಲರಿನಲ್ಲಿ 20 ಡಾಲರ್ ಇಟ್ಟಿದ್ದೇನೆ. ನೀವೇನಾದರೂ ಸರಿಯಾದ ವಸ್ತುಗಳನ್ನು ನೀಡಲಿಲ್ಲ ಎಂದರೆ ನನ್ನ ಶ್ವಾನ ನಿಮ್ಮನ್ನು ಕಚ್ಚುತ್ತದೆ ಎಂದು ಬರೆದಿದ್ದನು.
Advertisement
ಅಂಗಡಿ ಮಾಲೀಕ ಚೀಟಿಯಲ್ಲಿ ಬರೆದಿದ್ದನು ಓದಿ ಆ ವಸ್ತುಗಳನ್ನು ಶ್ವಾನಗೆ ನೀಡಿದ್ದನು. ಮಾಲೀಕ ನೀಡಿದ ವಸ್ತುಗಳನ್ನು ಶ್ವಾನ ತೆಗೆದುಕೊಂಡು ಸುರಕ್ಷಿತವಾಗಿ ಮನೆಗೆ ತಲುಪಿತು. ಸದ್ಯ ಮುನೋಜ್‍ನ ಈ ಐಡಿಯಾಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.