– 462 ಸ್ಥಳದಲ್ಲಿ ಮೊಬೈಲ್ ಟ್ಯಾಂಕರ್, 41 ಕೆರೆಗಳ ಗುರುತಿಸಿದ ಪಾಲಿಕೆ
ಬೆಂಗಳೂರು: ಗಣೇಶನ ವಿಸರ್ಜನೆ ಮಾಹಿತಿಗೆ ಬಿಬಿಎಂಪಿಯು (BBMP) ವಿನೂತನ ಪ್ಲ್ಯಾನ್ ಒಂದು ಮಾಡಿದ್ದು, ಸಾರ್ವಜನಿಕರು ಕ್ಯೂಆರ್ ಕೋಡ್ (QR Code) ಬಳಸುವ ಮೂಲಕ ಗಣೇಶನ ವಿಸರ್ಜನೆ ಸ್ಥಳದ ವಿವರ ಪಡೆಯಬಹುದಾಗಿದೆ.
Advertisement
ಗಣಪತಿ ವಿಸರ್ಜನೆ (Ganapati Dissolution) ಯಾವ ಸ್ಥಳದಲ್ಲಿ ಮಾಡಬೇಕು ಎನ್ನುವ ಸಂಪೂರ್ಣ ಮಾಹಿತಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪಡೆಯಬಹುದಾಗಿದೆ. ಗಣೇಶ ವಿಸರ್ಜನೆಗಾಗಿಯೇ 41 ಕೆರೆಗಳ ಶಾಶ್ವತ ಕಲ್ಯಾಣಿ ಸೇರಿದಂತೆ ಒಟ್ಟು 462 ಸ್ಥಳದಲ್ಲಿ ಮೊಬೈಲ್ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಶಾಶ್ವತ ಕಲ್ಯಾಣಿಯಿಲ್ಲದ ಕೆರೆಯ ಅಂಗಳದಲ್ಲಿ ತಾತ್ಕಾಲಿಕ ಕಲ್ಯಾಣಿಗಳನ್ನು ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ‘ಮಿಸ್ಟರ್ ಬಚ್ಚನ್’ ಸೋತಿದ್ದಕ್ಕೆ 4 ಕೋಟಿ ಸಂಭಾವನೆ ಹಿಂದಿರುಗಿಸಿದ ರವಿತೇಜ
Advertisement
Advertisement
ಗಣೇಶ ವಿಸರ್ಜನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಬಿಬಿಎಂಪಿಯು ಪ್ರತಿ ವಾರ್ಡಿಗೆ ಒಬ್ಬರು ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಿದೆ. ಸಾರ್ವಜನಿಕರು ಕ್ಯೂಆರ್ ಕೋಡ್ ಬಳಸುವ ಮೂಲಕ ಆಯಾ ವಾರ್ಡ್ ನೋಡಲ್ ಅಧಿಕಾರಿಗಳ ವಿವರಗಳನ್ನೂ ಸಹ ಪಡೆಯಬಹುದಾಗಿದೆ.
Advertisement
ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಚತುರ್ಥಿ ಹಿನ್ನೆಲೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಕಂದಾಯ ಉಪಕಚೇರಿಯಲ್ಲಿ 63 ಏಕಗವಾಕ್ಷಿ ಕೇಂದ್ರಗಳು ತೆರೆಯಲಾಗಿದೆ. ಎಲ್ಲಾ ವಾರ್ಡ್‌ಗಳಲ್ಲಿ ಒಟ್ಟು 462 ತಾತ್ಕಾಲಿಕ ಮೊಬೈಲ್ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಲಾಗಿದೆ.
ಗಣೇಶ ವಿಸರ್ಜನೆ ವೇಳೆ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಬಿಬಿಎಂಪಿ ಅಧಿಕಾರಿಗಳು ಸುರಕ್ಷತಾ ಕ್ರಮ ಕೈಗೊಂಡಿದ್ದಾರೆ. ಕೆರೆ ಹಾಗೂ ಕಲ್ಯಾಣಿ ಬಳಿ ಪೊಲೀಸ್, ಬ್ಯಾರಿಕೇಡ್, ಅಗ್ನಿಶಾಮಕ, ಬೆಸ್ಕಾಂ, ವಿದ್ಯುತ್ ದೀಪದ ವ್ಯವಸ್ಥೆ, ಈಜುಗಾರರು, ಧ್ವನಿವರ್ಧಕ ಜೊತೆಗೆ ಎನ್‌ಡಿಆರ್‌ಎಫ್ (NDRF) ತಂಡ ನಿಯೋಜನೆ ಮಾಡಲಾಗಿದೆ.
ದುರ್ಘಟನೆಯ ಮುನ್ನೆಚ್ಚರಿಕಾ ಕ್ರಮವಾಗಿ ಅಂಬುಲೆನ್ಸ್, ವ್ಯೆದ್ಯರು ಮತ್ತು ಪ್ರಾಥಮಿಕ ಚಿಕಿತ್ಸೆ ನೀಡಲು ಶುಶ್ರೂಕಿಯರನ್ನು ನೇಮಕ ಮಾಡಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಹೆಚ್ಚುವರಿಯಾಗಿ ಅಂಬುಲೆನ್ಸ್ ಮತ್ತು ವೈದ್ಯರ ವ್ಯವಸ್ಥೆ ಮಾಡಿದೆ.ಇದನ್ನೂ ಓದಿ: Duleep Trophy | ಮುಶೀರ್ ಕೈತಪ್ಪಿದ ದ್ವಿಶತಕ – ಕೊನೇ 3 ವಿಕೆಟ್‌ಗೆ 227 ರನ್ ಪೇರಿಸಿದ ಭಾರತ-ಬಿ ತಂಡ!
ಸಂಪೂರ್ಣ ವಿವರಗಳಿಗಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ. https://apps.bbmpgov.in/ganesh2024/ ಪಾಲಿಕೆ ವೆಬ್‌ಸೈಟ್ ಲಿಂಕ್ ಮೂಲಕ ಮಾಹಿತಿ ಪಡೆಯಲು ಅವಕಾಶ ಇದೆ.
ವಲಯವಾರು ಗಣೇಶ ಮೂರ್ತಿ ವಿಸರ್ಜನಾ ಸ್ಥಳಗಳ ವಿವರ
ವಲಯ ಮೊಬೈಲ ಟ್ಯಾಂಕರ್ ಕಲ್ಯಾಣಿ
ಪೂರ್ವ 138 01
ಪಶ್ಚಿಮ 84 01
ದಕ್ಷಿಣ 43 02
ಬೊಮ್ಮನಹಳ್ಳಿ 60 05
ಆರ್‌ಆರ್ ನಗರ 74 07
ಮಹದೇವಪುರ 40 14
ದಾಸರಹಳ್ಳಿ 19 01
ಯಲಹಂಕ 4 10
ಒಟ್ಟು 462 41