ಬೆಂಗಳೂರು: ಎಷ್ಟೋ ಬಾರಿ ಕೆಲ ಆಟೋ ಚಾಲಕರು ಮೀಟರ್ (Meter) ಬಳಸದೆಯೇ ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಾರೆ. ಅಲ್ಲದೆ ದಾರಿ ಮಧ್ಯೆ ಅನುಚಿತ ವರ್ತನೆ, ಕಿರಿಕಿರಿ ಉಂಟು ಮಾಡಿದರೆ, ಸಾರ್ವಜನಿಕರಿಗೆ ದೂರು ನೀಡಲು ಸಹಾಯವಾಗುವ ಕ್ಯೂಆರ್ ಕೋಡ್ (QR Code) ಅನ್ನು ತರಲು ನಗರ ಸಂಚಾರ ಪೊಲೀಸರು ಸಜ್ಜಾಗಿದ್ದಾರೆ. ಅದೂ ಇನ್ನು ಕೇವಲ ಎರಡೇ ತಿಂಗಳಲ್ಲಿ ಆ ಕ್ಯೂ ಆರ್ ಕೋಡ್ ಜಾರಿಗೆ ತರಲು ಬೆಂಗಳೂರು ಪೊಲೀಸರು ಸಜ್ಜಾಗಿದ್ದಾರೆ.
Advertisement
ಆಟೋಗಳಲ್ಲಿ ದುಪ್ಪಟ್ಟು ದರ ವಸೂಲಿ, ಪ್ರಯಾಣಿಕರ ಜೊತೆ ಜಗಳಕ್ಕೆ ಕಡಿವಾಣ ಹಾಗೂ ಪ್ರಯಾಣಿಕರ ನೆರವಿಗೆ ಹೊಸ ಯೋಜನೆ ರೂಪಿಸಲು ಮುಂದಾಗಿದ್ದ ನಗರ ಸಂಚಾರ ಪೊಲೀಸರು, ಈಗ ಅದರ ಕಡೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆಟೋಗಳಲ್ಲಿ ಇಲ್ಲಿಯವರೆಗೆ ಬಳಸುತ್ತಿದ್ದ ಚಾಲಕರ ಅಥವಾ ಮಾಲೀಕರ ಡಿಸ್ಪ್ಲೇ ಕಾರ್ಡ್ಗಳ ಬದಲಿಗೆ ಕ್ಯೂಆರ್ ಕೋಡ್ ಅಳವಡಿಸಲು ಮುಂದಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಆಪ್ ಡೆವಲಪ್ ಮಾಡಲಾಗಿದ್ಯಂತೆ. ಇನ್ನೇನು ಕೆಲ ದಿನಗಳಲ್ಲಿ ಇದನ್ನ ಲಾಂಚ್ ಮಾಡಿ, ಎಲ್ಲಾ ಆಟೋಗಳೂ ಡಿಸ್ಪ್ಲೇ ಕಾರ್ಡ್ ಬದಲಿಗೆ ಈ ಕ್ಯೂ ಆರ್ ಕೋಡ್ ಬಳಸಲೇಬೇಕಂತೆ. ಇದನ್ನೂ ಓದಿ: ಮಂಡ್ಯಕ್ಕೆ ಮೋದಿ ಭೇಟಿಗೂ ಮುನ್ನವೇ ಶಾಕ್- ನಾರಾಯಣ ಗೌಡರಿಂದ ಪಕ್ಷಾಂತರದ ಸುಳಿವು!
Advertisement
Advertisement
ಇಷ್ಟು ದಿನ ಆಟೋ (Auto Meter) ಚಾಲಕರ ಬೇಸಿಕ್ ಮಾಹಿತಿಯ ಫಲಕ ಆಟೋದಲ್ಲಿರ್ತಿತ್ತು. ಇನ್ಮುಂದೆ ಆಟೋಗಳಿಗೆ ಕ್ಯೂ ಆರ್ ಕೋಡ್ ಐಡೆಂಟಿಟಿ ಜಾರಿಗೆ ತರಲು ಟ್ರಾಫಿಕ್ ಪೊಲೀಸರು ಮುಂದಾಗಿದ್ರು. ಅದರ ಕೆಲಸಗಳನ್ನೂ ಶುರು ಮಾಡಿ, ಹೊಸದಾಗಿ ಯಾವುದೇ ಡಿಸ್ಪ್ಲೇ ಕಾರ್ಡ್ ನೀಡಿರಲಿಲ್ಲ. ಈಗ ಸಂಪೂರ್ಣ ಡಿಜಿಟಲ್ ಆಗಿ ಆಪ್ ಹಾಗೂ ಕ್ಯೂ ಆರ್ ಕೋಡ್ ಮೂಲಕ ತಂತ್ರಜ್ಞಾನದ ಮೊರೆ ಹೋಗಿದ್ದಾರೆ ಟ್ರಾಫಿಕ್ ಪೊಲೀಸ್ ಇಲಾಖೆ. ಇದರಲ್ಲಿ ಚಾಲಕನ ಲೈಸೆನ್ಸ್ ನಿಂದ ಹಿಡಿದು ಪ್ರತಿಯೊಂದು ಮಾಹಿತಿಯೂ ಲಭ್ಯವಿರುತ್ತೆ. ಕೆಲ ಆಟೋ ಚಾಲಕರಿಂದ ಸಮಸ್ಯೆ ಆದರೆ ಕೂಡಲೇ ಕ್ಯೂರ್ ಆರ್ ಕೋಡ್ ದಾಖಲೆ ಪಡೆದು ದೂರು ದಾಖಲಿಸೋ ವ್ಯವಸ್ಥೆಯನ್ನ ಈ ಆಪ್ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಮೇ ಮೊದಲ ವಾರದಲ್ಲಿ ಆಟೋ ಕ್ಯೂ ಆರ್ ಕೋಡ್ ಸಿಸ್ಟಂ ಜಾರಿಯಾಗುವ ಮಾಹಿತಿ ಲಭಿಸಿದೆ.
Advertisement
ಡಿಸ್ಪ್ಲೇ ಬೋರ್ಡ್ಗೆ ಬದಲಾಗಿ ಕ್ಯೂ ಆರ್ ಕೋಡ್ ಹಾಗೂ ಆಪ್ ಬಗ್ಗೆ ಆಟೋ ಚಾಲಕರು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಆಟೋ ದರ ಹೆಚ್ಚಳ, ಮೀಟರ್ ಹಾಕಲ್ಲ, ಅದೂ ಇದೂ ಅನ್ನೋ ದೂರುಗಳಿಗೆ ಕಡಿವಾಣ ಹಾಕಲು ಸಂಚಾರ ಪೊಲೀಸ್ ಇಲಾಖೆ ಮುಂದಾಗಿದೆ.