ಮಂಡ್ಯ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆಗೆ ಮಾರ್ಚ್ 12ರಂದು ನರೇಂದ್ರ ಮೋದಿ (Narendra Modi) ಸಕ್ಕರೆ ನಾಡಿಗೆ ಆಗಮಿಸಲಿದ್ದು, ಇದಕ್ಕೂ ಮುನ್ನವೇ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಮಂಡ್ಯದಲ್ಲಿ ಬೇರು ಬಿಡುವ ಉತ್ಸಾಹದಲ್ಲಿದ್ದ ಬಿಜೆಪಿಗೆ ಮರ್ಮಾಘಾತ ಎದುರಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
ಹೌದು. ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಮಲ ಬಾವುಟ ಹಾರಿಸಿದವರೇ ಕಾಂಗ್ರೆಸ್ (Congress) ನತ್ತ ಮುಖಮಾಡಲು ಸಜ್ಜಾಗಿದ್ದಾರೆ. ಸಚಿವ ನಾರಾಯಣಗೌಡ (Narayana Gowda) ಅವರು ಪಕ್ಷಾಂತರದ ಸುಳಿವು ನೀಡಿದ್ದು, ಈ ಮೂಲಕ ಅವರು ಕಾಂಗ್ರೆಸ್‍ಗೆ ಸೇರ್ಪಡೆಯಗುವುದು ಬಹುತೇಕ ಫಿಕ್ಸ್ ಆದಂತಿದೆ. ಇದನ್ನೂ ಓದಿ: ಮಾ. 5ರಂದು ಶಿವಲಿಂಗೇಗೌಡ ಕಾಂಗ್ರೆಸ್‍ಗೆ ಸೇರ್ಪಡೆ
Advertisement
Advertisement
ಸುಳಿವು ಏನು..?: ಮಂಡ್ಯದ ಕೆ.ಆರ್.ಪೇಟೆ (K.R Pete) ಯಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ನಿಂದ ಆಹ್ವಾನ ಬಂದಿರೋದು ನಿಜ. ಆದರೆ ಸೇರ್ಪಡೆ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಆಪ್ತರು ಹಾಗೂ ಹಿತೈಷಿಗಳ ಜೊತೆ ಚರ್ಚಿಸಿ ಅಭಿಪ್ರಾಯ ಕೇಳಬೇಕು. ಅಭಿಪ್ರಾಯ ಕೇಳಿದ ಬಳಿಕ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ ಮಾಡುವುದು ಎಂದಿದ್ದಾರೆ.
Advertisement
ಕೆ.ಆರ್.ಪೇಟೆ ಕಾಂಗ್ರೆಸ್‍ನಲ್ಲಿ ನಾಯಕತ್ವದ ಕೊರತೆ ಇದೆ. ಅದಕ್ಕಾಗಿ ಪಕ್ಷಕ್ಕೆ ಬರುವಂತೆ ಒತ್ತಾಯ ಇದೆ. ಯಾವುದೇ ನಿರ್ಧಾರ ಮಾಡಿದ್ರೂ ಮಾಧ್ಯಮಗಳ ಮೂಲಕವೇ ತಿಳಿಸುತ್ತೇನೆ. ಈ ರೀತಿ ಹೇಳುವ ಮೂಲಕ ಕಾಂಗ್ರೆಸ್ ಸೇರುವ ಬಗ್ಗೆ ಸಚಿವರು ಸುಳಿವು ನೀಡಿದ್ದಾರೆ.