ನವದೆಹಲಿ: ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಫಿಫಾ ವಿಶ್ವಕಪ್ (FIFA World Cup) ಈ ಬಾರಿ ಕತಾರ್‌ನಲ್ಲಿ ಆರಂಭಗೊಂಡಿದೆ. ಡಿಸೆಂಬರ್ 18ರವರೆಗೂ ಪಂದ್ಯಗಳು ನಡೆಯಲಿದ್ದು, ಎಂಟು ಕ್ರೀಡಾಂಗಣದಲ್ಲಿ 64 ಪಂದ್ಯಗಳು ಆಯೋಜನೆಗೊಂಡಿದೆ.
Advertisement
ಈ ಬಾರಿ ಫಿಫಾ ವಿಶ್ವಕಪ್‍ನಿಂದ ಬರುವ ಆದಾಯ ನಿರೀಕ್ಷೆಯ ಪ್ರಮಾಣ ಮೀರಲಿದೆ ಎಂದು ಹೇಳಲಾಗುತ್ತಿದೆ. ಜಾಗತಿಕ ಹಣಕಾಸು ಮಾಹಿತಿ ಮತ್ತು ವಿಶ್ಲೇಷಣಾ ಸೇವೆಗಳ ಪೂರೈಕೆದಾರ ಎಸ್ ಆ್ಯಂಡ್ ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್‌ನ ಹೊಸ ವಿಶ್ಲೇಷಣೆಯ ಪ್ರಕಾರ, ಜಾಗತಿಕ ಪ್ರೇಕ್ಷಕರು ಈ ಬಾರಿ ಮೈದಾನದಲ್ಲಿ ಭಾರೀ ಪ್ರಮಾಣದಲ್ಲಿ ನೆರೆಯಲಿದ್ದಾರೆ. ಇತ್ತ ಮೈದಾನದ ಹೊರಗೆ ಇಡೀ ತಂತ್ರಜ್ಞಾನ, ಮಾಧ್ಯಮ ಮತ್ತು ದೂರಸಂಪರ್ಕ ವಲಯದಲ್ಲಿ ಹೆಚ್ಚು ಆದಾಯದ ಅವಕಾಶಗಳಿದೆ ಎಂದು ಹೇಳಿದೆ. ಇದನ್ನೂ ಓದಿ: ಶ್ರದ್ಧಾ ವಾಕರ್ ಹತ್ಯೆ ಕೇಸ್ – CBIಗೆ ವರ್ಗಾಯಿಸುವಂತೆ ದೆಹಲಿ ಹೈಕೋರ್ಟ್‌ಗೆ ಅರ್ಜಿ
Advertisement
Advertisement
ವಿಶ್ಲೇಷಣೆಯ ಪ್ರಕಾರ ಕತಾರ್ ಫಿಫಾ ವಿಶ್ವಕಪ್ USD 6.5 ಶತಕೋಟಿ ಗಳಿಸುವ ನಿರೀಕ್ಷೆಯಿದೆ. ಇದು ಹಿಂದಿನ ಎಲ್ಲಾ ಪಂದ್ಯಾವಳಿಗಳನ್ನು ಮೀರಿಸುತ್ತದೆ ಮತ್ತು 2002ರಲ್ಲಿ ಕೊರಿಯಾ ಮತ್ತು ಜಪಾನ್‍ನಲ್ಲಿ ಕಂಡುಬಂದ ಅಂಕಿ ಅಂಶಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. ರಷ್ಯಾದಲ್ಲಿ 2018ರಲ್ಲಿ ನಡೆದ ಫುಟ್ಬಾಲ್ ವಿಶ್ವಕಪ್ ಸಮಯದಲ್ಲಿ, USD 5.2 ಶತಕೋಟಿ ಮೌಲ್ಯದ ಆದಾಯವನ್ನು ಗಳಿಸಿತ್ತು, ಫಿಫಾದ ಆದಾಯದ ಅರ್ಧದಷ್ಟು ಆದಾಯವು ಪ್ರಸಾರ ಹಕ್ಕುಗಳ ಶುಲ್ಕದಿಂದ ಬಂದಿತ್ತು. ಇದನ್ನೂ ಓದಿ: ಚುನಾವಣಾ ಅಭ್ಯರ್ಥಿಗಳನ್ನ ಘೋಷಣೆ ಮಾಡೋ ಹಕ್ಕು ಸಿದ್ದರಾಮಯ್ಯಗಿಲ್ಲ: ಡಿಕೆಶಿ
Advertisement
ಈ ಬಾರಿಯ ವಿಶ್ವಕಪ್ ಪಂದ್ಯಗಳನ್ನು ಜೂನ್ ಜುಲೈನಲ್ಲಿ ನಡೆಸಬೇಕಿತ್ತು. ಆದರೆ ಹವಾಮಾನ ವೈಫರಿತ್ಯಗಳಿಂದ ನವೆಂಬರ್‌ನಲ್ಲಿ ನಡೆಸಲಾಗುತ್ತಿದೆ. ವರ್ಷದ ಕೊನೆಯಲ್ಲಿ ಪಂದ್ಯಗಳು ನಡೆಯುತ್ತಿರುವ ಹಿನ್ನೆಲೆ ಜಾಹೀರಾತು ದರದಲ್ಲಿ ಭಾರೀ ಏರಿಕೆ ಇರಲಿದೆ. ಇದರಿಂದ ಫಿಫಾ ವಿಶ್ವ ಕಪ್ ಆದಾಯ ಹೆಚ್ಚಲಿದೆ ಎಂದು ವಿಶ್ಲೇಷಿಸಿದೆ.