ನವದೆಹಲಿ: ದೇಶದ ಜಿಡಿಪಿ ದರ ನಿಧಾನವಾಗಿ ಚೇತರಿಸಿಕೊಳ್ತಿದೆ. 3ನೇ ತ್ರೈಮಾಸಿಕ ವರದಿಯಲ್ಲಿ ಶೇ. 4.5 ರಿಂದ 4.7ಕ್ಕೆ ಏರಿಕೆ ಕಂಡಿದೆ. ಆದರೆ, ಉತ್ಪಾದನಾ ವಲಯ ಪಾತಾಳಕ್ಕೆ ಕುಸಿದಿದೆ.
ಕಳೆದ ಬಾರಿ ಇದೇ ಅವಧಿಗೆ ಶೇ. 5.6ರಷ್ಟಿದ್ದ ಉತ್ಪಾದನಾ ವಲಯದ ದರ ಈಗ 0.2ಕ್ಕೆ ಕುಸಿದಿದೆ. ಇನ್ನು, ನೋಟ್‍ಬ್ಯಾನ್ ದಿನ ರಾತ್ರಿ 11.55ರವರೆಗೆ ಭರ್ಜರಿ ವ್ಯಾಪಾರ ನಡೆಸಿದ್ದ ಚಿನ್ನದಂಗಡಿ ಮಾಲೀಕರು ಹಾಗೂ ಮಿಡ್‍ನೈಟ್ ಗೋಲ್ಡ್ ಬೇಟೆ ನಡೆಸಿ ಕೆಜಿಗಟ್ಲೆ ಚಿನ್ನ ಖರೀದಿಸಿದ್ದವರಿಗೆ ಈಗ ನಡುಕ ಶುರುವಾಗಿದೆ.
Advertisement
Advertisement
ಅಂದು ಬೆಂಗಳೂರಿನಲ್ಲಿ ಮಿಡ್‍ನೈಟ್‍ವರೆಗೆ ಬ್ಯುಸಿನೆಸ್ ನಡೆಸಿದ್ದ ಬೆಂಗಳೂರಿನ ಚಿನ್ನದ ವ್ಯಾಪಾರಿಗಳ ಮೇಲೆ ಐಟಿ ಹದ್ದಿನಗಣ್ಣಿಟ್ಟಿದೆ. ಅಂದಿನ ವ್ಯಾಪಾರದ ಸಂಪೂರ್ಣ ಮಾಹಿತಿ ನೀಡುವಂತೆ ಕೆಲ ವ್ಯಾಪಾರಿಗಳಿಗೆ ನೋಟಿಸ್ ನೀಡಿದೆ.
Advertisement
ನೋಟ್ ಬ್ಯಾನ್ ದಿನ ಬೆಂಗಳೂರಿನ ಚಿನ್ನದ ಮಳಿಗೆಗಳಲ್ಲಿ ಜನಸಾಗರವೇ ನೆರೆದಿತ್ತು. ರಾತ್ರಿ 11.55 ರವರೆಗೆ ನಡೆದಿತ್ತು ಭರ್ಜರಿ ವ್ಯಾಪಾರ ನಡೆದಿತ್ತು.