ನವದೆಹಲಿ: ನೋಟ್ ಬ್ಯಾನ್ ಮತ್ತು ತರಾತುರಿಯಲ್ಲಿ ಸರಕು ಮತ್ತು ಸೇವಾ ತೆರಿಗೆ ಜಾರಿಗೊಳಿಸಿದ್ದರಿಂದ ದೇಶದ ಆರ್ಥಿಕ ಬೆಳವಣಿಗೆ ದರ(ಜಿಡಿಪಿ) ಕುಸಿದಿದೆ ಎನ್ನುವ ಮಂದಿ ಉತ್ತರ ಎನ್ನುವಂತೆ ಸೆಪ್ಟೆಂಬರ್ ಅಂತ್ಯಕ್ಕೆ ಮುಕ್ತಾಯವಾದ ಎರಡನೇ ತ್ರೈಮಾಸಿಕದಲ್ಲಿ ಏರಿಕೆಯಾಗಿದೆ.
ಜುಲೈ, ಅಗಸ್ಟ್, ಸೆಪ್ಟೆಂಬರ್ ಅವಧಿಯ ಜಿಡಿಪಿ ದರ 6.3% ಏರಿಕೆಯಾಗಿದೆ ಎಂದು ಕೇಂದ್ರ ಸಾಂಖ್ಯಿಕ ಕಚೇರಿ ತಿಳಿಸಿದೆ. ಏಪ್ರಿಲ್ ನಿಂದ ಜೂನ್ ವರೆಗೆ ಅಂತ್ಯಗೊಂಡ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ದರ 5.7% ದಾಖಲಿಸುವ ಮೂಲಕ ಕುಸಿದಿತ್ತು. ನೋಟು ರದ್ದತಿಯ ಬಳಿಕ ಜಿಡಿಪಿ ಪ್ರಗತಿ ಶೇ 1.3 ರಷ್ಟು ಇಳಿಕೆ ಕಂಡಿತ್ತು.
Advertisement
ಜಿಡಿಪಿ ದರ ಏರಿಕೆಯಾಗಿರುವ ವಿಚಾರ ಪ್ರಕಟವಾದ ಬಳಿಕ ಬಿಜೆಪಿ ನಾಯಕರು ಟ್ವೀಟ್ ಮಾಡಿ ಸರ್ಕಾರದ ಸಾಧನೆಯನ್ನು ಹೊಗಳುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಹಿಂದೆ ಟೀಕಿಸಿದ್ದ ಮಂದಿ ಎಲ್ಲಿದ್ದೀರಿ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. (ಇದನ್ನೂ ಓದಿ: 13 ವರ್ಷದ ಬಳಿಕ ಏರಿಕೆ ಕಂಡಿತು ಭಾರತದ ಮೂಡೀಸ್ ರೇಟಿಂಗ್)
Advertisement
ಜಿಡಿಪಿ ದರ ಇಳಿಕೆ ತಾತ್ಕಾಲಿಕ ಮುಂದಿನ ದಿನಗಳಲ್ಲಿ ಏರಿಕೆಯಾಗಲಿದೆ ಎಂದು ಈ ಹಿಂದೆ ವಿಶ್ವಬ್ಯಾಂಕ್ ಹೇಳಿತ್ತು.(ಇದನ್ನೂ ಓದಿ:ನೋಟು ಬ್ಯಾನ್ ಆದ್ರೂ ಆರ್ಥಿಕ ಅಭಿವೃದ್ಧಿ ದರದಲ್ಲಿ ವಿಶ್ವದಲ್ಲಿ ಭಾರತವೇ ನಂಬರ್ ಒನ್)
Advertisement
ನವೆಂಬರ್ 8ರಂದು 500, 1 ಸಾವಿರ ರೂ. ಮುಖಬೆಲೆ ನೋಟುಗಳನ್ನು ನಿಷೇಧಿಸಿದ ಬಳಿಕ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಭಾರತದ ಜಿಡಿಪಿ ಇಳಿಕೆಯಾಗಲಿದೆ ಎಂದು ಹೇಳಿತ್ತು. 2015 -16ರಲ್ಲಿ ಶೇ. 7.6 ರಷ್ಟಿದ್ದ ಜಿಡಿಪಿ ದರ 2016- 17ರಲ್ಲಿ ಶೇ 6.6 ರಷ್ಟು ಕಡಿಮೆ ಮಟ್ಟದಲ್ಲಿರಲಿದೆ ಎಂದು ಅದು ತಿಳಿಸಿತ್ತು.
Advertisement
ಮಮತಾ ಟೀಕೆ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕೆ ಮಾಡಿ ಈ ಹಿಂದೆ ಈ ಅವಧಿಯಲ್ಲಿ 7.5% ದಾಖಲಾಗಿತ್ತು. ಆದರೆ ಈಗ 6.3% ದಾಖಲಾಗಿದೆ. ಈ ಸರ್ಕಾರ ಕೇವಲ ಭಾಷಣ ಮಾತ್ರ ಮಾಡುತ್ತಿದೆ ಹೊರತು ಯಾವುದೇ ಕೆಲಸ ಮಾಡುವುದಿಲ್ಲ .ಉದ್ಯೋಗದಲ್ಲಿ ಯಾವುದೇ ಪ್ರಗತಿ ಆಗಿಲ್ಲ ಎಂದು ಸರಣಿ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದ್ದಾರೆ.
ಯಾವ ಅವಧಿಯಲ್ಲಿ ಎಷ್ಟಿತ್ತು?
ಮಾರ್ಚ್ 2016 – 9.2%
ಜೂನ್ 2016 – 7.9%
ಸೆಪ್ಟೆಂಬರ್ 2016 – 7.5%
ಡಿಸೆಂಬರ್ 2016 – 7%
ಮಾರ್ಚ್ 2017 – 6.1%
ಜೂನ್ 2017 – 5.7%
ಸೆಪ್ಟೆಂಬರ್ 2017 – 6.3%
Government’s reforms to push economic growth are working can be seen from that manufacturing has shown robust growth of 7% in Q2 and services at 7.1%. Gross fixed capital formation has increased from 1.6% in Q1 to 4.7% in Q2.
— Arun Jaitley (@arunjaitley) November 30, 2017
2017-18ರ ಎರಡನೇ ತ್ರೈಮಾಸಿಕದಲ್ಲಿ ಭಾರತದ ನಿವ್ವಳ ದೇಶೀಯ ಉತ್ಪನ್ನ(ಜಿಡಿಪಿ) ಶೇ. 6.3ಕ್ಕೆ ಏರಿಕೆಯಾಗಿದೆ. ಇದು ನರೇಂದ್ರ ಮೋದಿಯವರು ತೆಗೆದುಕೊಂಡ ರಚನಾತ್ಮಕ ಮತ್ತು ಸಾಂಸ್ಥಿಕ ಸುಧಾರಣೆಗಳಿಗೆ ಹಿಡಿದ ಕನ್ನಡಿ.#IndiaUnstoppable #NewIndia
— B.S.Yediyurappa (@BSYBJP) November 30, 2017
Today’s GDP numbers reiterate the #IndiaUnstoppable story under PM @narendramodi. The strong rebound in growth is a reflection of solid economic management by the Modi Government.
— Amit Shah (@AmitShah) November 30, 2017
GDP figures out. Again no growth. No jobs.Effects of note ban scam & unplanned GST continue to damage economy. Only talking. No performance
— Mamata Banerjee (@MamataOfficial) November 30, 2017
Last year Q2 GDP growth was 7.5% and this year it is 6.3%. This Govt only bhashan, no action
— Mamata Banerjee (@MamataOfficial) November 30, 2017
Where are the Critics of last quarter ?
GDP growth rate during the second quarter of 2017-18 at 6.3%, up from 5.7% last quarter. #IndiaUnstoppable under PM @narendramodi . Kudos FM @arunjaitley .
— Dr Jitendra Singh (@DrJitendraSingh) November 30, 2017
#IndiaUnstoppable : India's GDP grows at 6.3% in second quarter of 2017-18 (July-September), up from 5.7% in previous quarter (April-June), as Modi government sets in the transformational reforms. pic.twitter.com/B0zvPQef7a
— BJP (@BJP4India) November 30, 2017
Q2 GDP growth is an outcome of bold reforms such as GST & DeMo, sound economic policies, prudent fiscal management, and overall development under the leadership of PM @narendramodi ji. #IndiaUnstoppable
— Manohar Parrikar Memorial (@manoharparrikar) November 30, 2017
India's GDP growth rate shows upward trend in 2nd quarter of 2017-18 and registers a growth rate of 6.3%. This coupled with strong fundamentals hold promise for a great future of Indian economy under the leadership of @PMOIndia @narendramodi #IndiaUnstoppable
— Ravi Shankar Prasad (@rsprasad) November 30, 2017