ನವದೆಹಲಿ: ನೋಟ್ ಬ್ಯಾನ್ ಬಳಿಕ ದೇಶದ ಆಂತರಿಕ ಉತ್ಪನ್ನ(ಜಿಡಿಪಿ) ಶೇ.6.6 ಕುಸಿಯಲಿದೆ ಎಂದು ವಿಶ್ಲೇಷಣೆ ನಡೆದ್ದರೂ ಅಕ್ಟೋಬರ್ ಡಿಸೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಪ್ರಗತಿ ಶೇ.7.0ರಷ್ಟು ದಾಖಲಿಸಿದೆ. ಈ ಮೂಲಕ ಆರ್ಥಿಕ ಅಭಿವೃದ್ಧಿ ದರದಲ್ಲಿ ವಿಶ್ವದಲ್ಲಿ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದೆ. ಈ ಅವಧಿಯಲ್ಲಿ ಚೀನಾ ಜಿಡಿಪಿ ದರ ಶೇ.6.8 ಸಾಧಿಸಿದ್ದು, ಎರಡನೇ ಸ್ಥಾನದಲ್ಲಿ ಮುಂದುವರಿದಿದೆ.
ಕೇಂದ್ರಿಯ ಅಂಕಿ ಅಂಶ ಕಾರ್ಯಾಲಯ(ಸಿಎಸ್‍ಒ) ಜಿಡಿಪಿ ಮಾಹಿತಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. 2017ರ ಮಾರ್ಚ್ ನಲ್ಲಿ ಅಂತ್ಯವಾಗುವ ಹಣಕಾಸು ವರ್ಷಕ್ಕೆ ಜಿಡಿಪಿ ದರ ಶೇ.7.1 ರಷ್ಟು ದಾಖಲಾಗಲಿದೆ ಎಂದು ಸಿಎಸ್‍ಒ ಅಂದಾಜಿಸಿದೆ.
Advertisement
2016-17 ಹಣಕಾಸು ವರ್ಷದ ಏಪ್ರಿಲ್- ಜೂನ್‍ನಲ್ಲಿ ಶೇ.7.2, ಜುಲೈ- ಸೆಪ್ಟೆಂಬರ್‍ನಲ್ಲಿ ಶೇ.7.4 ರಷ್ಟು ಜಿಡಿಪಿ ಪ್ರಗತಿ ಸಾಧಿಸಿತ್ತು.
Advertisement
2017-18ರ ಅವಧಿಯಲ್ಲಿ ಭಾರತವು ಶೇ.6.75ರಿಂದ 7.5ವರೆಗಿನ ಜಿಡಿಪಿ ದಾಖಲಿಸಲಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿತ್ತು. ನವೆಂಬರ್ 8ರಂದು 500, 1 ಸಾವಿರ ರೂ. ಮುಖಬೆಲೆ ನೋಟುಗಳನ್ನು ನಿಷೇಧಿಸಿದ ಬಳಿಕ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಭಾರತದ ಜಿಡಿಪಿ ಇಳಿಕೆಯಾಗಲಿದೆ ಎಂದು ಹೇಳಿತ್ತು. 2015 -16ರಲ್ಲಿ ಶೇ. 7.6 ರಷ್ಟಿದ್ದ ಜಿಡಿಪಿ ದರ 2016- 17ರಲ್ಲಿ ಶೇ 6.6 ರಷ್ಟು ಕಡಿಮೆ ಮಟ್ಟದಲ್ಲಿರಲಿದೆ ಎಂದು ಅದು ತಿಳಿಸಿತ್ತು.
Advertisement
LIVE: GDP growth rates for 2016-17 and Q1, Q2, Q3 of 2016-17 at constant (2011-12) and current prices: https://t.co/bAA4s6t1eu pic.twitter.com/62GQpeV1MT
— PIB India (@PIB_India) February 28, 2017
Advertisement
LIVE:The national income (at current prices) is likely to be 134.86 lakh Cr during 2016-17, as against 120.83 lakh Cr for 2015-16 pic.twitter.com/oRF2Gu8S3C
— PIB India (@PIB_India) February 28, 2017