ನವದೆಹಲಿ: ಕೇಂದ್ರ ಎನ್‍ಡಿಎ ಸರ್ಕಾರ ಕೈಗೊಂಡಿರುವ ಆರ್ಥಿಕ ಸುಧಾರಣೆಗಳ ಪರಿಣಾಮವಾಗಿ ದೇಶದ ಆಂತರಿಕ ಉತ್ಪನ್ನ ದರ (ಜಿಡಿಪಿ) ಜೂನ್ ಅಂತ್ಯಕ್ಕೆ ಮುಕ್ತಾಯವಾದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ಶೇ. 8.2 ಪ್ರಗತಿ ದಾಖಲಿಸಿದೆ.
ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ 5.59 ರಷ್ಟಿದ್ದ ಜಿಡಿಪಿ ಬೆಳವಣಿಗೆ ದರ ಅಂತಿಮ ತ್ರೈಮಾಸಿಕದ ವೇಳೆಗೆ ಶೇ.7.7 ಕ್ಕೆ ಏರಿಕೆ ಆಗಿತ್ತು. ಎನ್‍ಡಿಎ ಸರ್ಕಾರ ಕೈಗೊಂಡ ಆರ್ಥಿಕ ಕ್ರಮಗಳ ಬಳಿಕ ಕುಸಿತಗೊಂಡಿದ್ದ ದೇಶದ ಜಿಡಿಪಿ ದರ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಮೊದಲ ಬಾರಿಗೆ ಭಾರೀ ಏರಿಕೆ ಆಗಿದ್ದು, ಕೇಂದ್ರ ಸಾಂಖ್ಯಿಕ ಕಚೇರಿ ಮಾಹಿತಿ ನೀಡಿದೆ.
Advertisement
ದೇಶದ ಉತ್ಪಾದನಾ ಕ್ಷೇತ್ರ ಹಾಗೂ ಸೇವಾ ಕ್ಷೇತ್ರಗಳಲ್ಲಿ ಉಂಟಾಗಿರುವ ಪ್ರಗತಿಯ ಕಾರಣ ಜಿಡಿಪಿ ದರ ಏರಿಕೆ ಆಗಿದ್ದು, ಪ್ರಮುಖವಾಗಿ ಉತ್ಪಾದನಾ ಕ್ಷೇತ್ರದಲ್ಲಿ 13.5% ಬೆಳವಣಿಗೆ ದಾಖಲಾಗಿದೆ. ಈ ಹಿಂದಿನ ವರ್ಷದ ಈ ತ್ರೈಮಾಸಿಕದ ಅವಧಿ ವೇಳೆ ಈ ಕ್ಷೇತ್ರದಲ್ಲಿ ಶೇ.1.8 ರಷ್ಟು ನಕಾರಾತ್ಮಕ ಬೆಳವಣಿಗೆ ದಾಖಲಾಗಿತ್ತು.
Advertisement
ಯಾವ ಅವಧಿಯಲ್ಲಿ ಎಷ್ಟಿತ್ತು?
ಮಾರ್ಚ್ 2016 – 9.2%
ಜೂನ್ 2016 – 7.9%
ಸೆಪ್ಟೆಂಬರ್ 2016 – 7.5%
ಡಿಸೆಂಬರ್ 2016 – 7%
ಮಾರ್ಚ್ 2017 – 6.1%
ಜೂನ್ 2017 – 5.6%
ಸೆಪ್ಟೆಂಬರ್ 2017 – 6.3%
ಡಿಸೆಂಬರ್ 2017 – 7.0%
ಮಾರ್ಚ್ 2018 – 7.7%
ಜೂನ್ 2018 – 8.2%
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Advertisement
Estimates of Gross Domestic Product for the First quarter (April-June) of 2018-19
▶️ https://t.co/W8XCvFFQ0p pic.twitter.com/zQeNERcjno
— PIB India (@PIB_India) August 31, 2018
Agriculture, forestry and fishing sector grows at the rate of 5.3% in the first quarter of 2018-19 compared to 3.1% in 2017-18. #NewIndiaNewMomentum pic.twitter.com/UoBfVvGiY1
— BJP (@BJP4India) August 31, 2018
India's manufacturing sector registers the growth rate of 13.5% in the first quarter of 2018-19. #NewIndiaNewMomentum pic.twitter.com/EZkPZEadHz
— BJP (@BJP4India) August 31, 2018
Growth in the sale of commercial vehicles actually indicates vibrancy in the overall economy. A sharp increase is notable in the first quarter of ‘18-‘19. #NewIndiaNewMomentum push by @PMOIndia @narendramodi leads to a buoyant economy. pic.twitter.com/5EPgCZTg1d
— Nirmala Sitharaman (@nsitharaman) August 31, 2018