ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಡಬದಲ್ಲಿ ನರಿಯನ್ನು ಕಾಡಿನಿಂದ ಅಟ್ಟಿಸಿಕೊಂಡು ಬಂದ ಬೃಹತ್ ಗಾತ್ರದ ಹೆಬ್ಬಾವು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದೆ.
ಕಡಬದ ಹಳೆ ಸ್ಟೇಷನ್ ಬಳಿಯ ಬೆದ್ರಾಳದ ಕುಟ್ಟ ಎಂಬವರ ಮನೆ ಸಮೀಪದಲ್ಲಿ ಹೆಬ್ಬಾವು ಸಿಕ್ಕಿಬಿದ್ದಿದೆ. ಹೆಬ್ಬಾವು ಹಾಗೂ ನರಿ ನಡುವೆ ಕಾಳಗ ನಡೆದು ಬಳಿಕ ಹೆಬ್ಬಾವು ನರಿಯನ್ನು ನುಂಗಲು ಯತ್ನಿಸಿದೆ. ಹೀಗಾಗಿ ನರಿಯನ್ನು ಓಡಿಸಿಕೊಂಡು ಬಂದ ಹೆಬ್ಬಾವು ಕಡಬದ ಬಳಿ ಬಂದಿದೆ. ಇದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.
Advertisement
Advertisement
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹೆಬ್ಬಾವನ್ನು ಹಿಡಿದು ಬಳಿಕ ದೂರದ ಕಾಡಿಗೆ ಬಿಟ್ಟಿದ್ದಾರೆ. ಆದರೆ ನರಿ ಮಾತ್ರ ಹೆಬ್ಬಾವಿನ ಬಂಧನದಿಂದ ತಪ್ಪಿಸಿಕೊಳ್ಳಲು ಆಗದೆ ಸಾವನ್ನಪ್ಪಿದೆ. ಭಾರೀ ಗಾತ್ರದ ಈ ಹೆಬ್ಬಾವು ನೋಡಲು ಗ್ರಾಮಸ್ಥರೆಲ್ಲ ನೆರೆದಿದ್ದರು. ಅಷ್ಟೇ ಅಲ್ಲದೇ ಸೆರೆ ಸಿಕ್ಕ 15 ಅಡಿ ಉದ್ದದ ಹೆಬ್ಬಾವನ್ನು ಹಿಡಿದು ಸ್ಥಳೀಯರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv