ಚಾಮರಾಜನಗರ: ಮುಸ್ಲಿಮ್ ಮೆಕ್ಯಾನಿಕ್ ರಿಪೇರಿ ಮಾಡದಿದ್ದರೆ ಗಾಡಿ ಓಡ್ತವಾ, ಗಾಡಿ ಕೆಟ್ಟರೆ ಅವರೇ ತಾನೇ ಓಡಿ ಬರೋದು. ಅವರೇನು ನಿನ್ನೆ ಮೊನ್ನೆ ಬಂದು ಸೇರ್ಕೊಂಡಿದಾರಾ? ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರದ್ದೂ ಪಾತ್ರ ಇದೆ. ಆರ್‍ಎಸ್‍ಎಸ್ ಹೋರಾಟದಲ್ಲಿ ಭಾಗವಹಿಸಿರಲಿಲ್ಲ ಅಂತಾ ಮಾಜಿ ಸಚಿವ, ಶಾಸಕ ಪುಟ್ಟರಂಗಶೆಟ್ಟಿ ತಿಳಿಸಿದರು.
ರಾಜ್ಯದಲ್ಲಿ ಭುಗಿಲೆದ್ದಿರುವ ಧರ್ಮ ಸಮರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಮಾಂಸಾಹಾರ ತಿನ್ನೋರು ಮಾಂಸ ತಿನ್ನಲಿ, ತರಕಾರಿ ತಿನ್ನೋರು ತಿನ್ನಲಿ. ಇನ್ನೊಬ್ಬರ ಮೇಲೆ ಒತ್ತಡ ಹೇರೋಕೆ ನಾವ್ಯಾರು? ಇದೆಲ್ಲ ಬಿಜೆಪಿಯ ಬಂಡವಾಳವಾಗಿದೆ. ಬಿಜೆಪಿಯ ಒಂದೊಂದು ಮುಖವಾಡ ಈಗ ಬಯಲಾಗುತ್ತಿದೆ. ಆರ್‌ಎಸ್‌ಎಸ್ ಸೇರಿದಂತೆ ಇತರ ಹಿಂದೂ ಸಂಘಟನೆಗಳೆಲ್ಲ ನಿಜವಾದ ಸಂಘಟನೆಗಳಲ್ಲ. ವೋಟಿಗಾಗಿ ಬಿಜೆಪಿ ಹುಟ್ಟು ಹಾಕಿರುವ ಸಂಘಟನೆಗಳು ಇವೆಲ್ಲಾ ಎಂದರು. ಇದನ್ನೂ ಓದಿ: ಈ ನಡುವೆ ಸರ್ಕಾರಗಳು ನ್ಯಾಯಾಂಗವನ್ನು ನಿಂದಿಸುವ ಪ್ರವೃತ್ತಿ ಆರಂಭಿಸಿವೆ: ಸಿಜೆಐ ಆಕ್ರೋಶ
ಸಿದ್ದು ಮುಂದಿನ ಸಿಎಂ ಆಗುತ್ತಾರಾ? ಎನ್ನುವ ಚರ್ಚೆಗೆ ಪ್ರತಿಕ್ರಿಯಿಸಿ, ಅದೆಲ್ಲ ನಂಗೊತ್ತಿಲ್ಲ, ಅದು ವರಿಷ್ಠರಿಗೆ ಬಿಟ್ಟ ವಿಚಾರ. ಕಾಂಗ್ರೆಸ್‍ನಲ್ಲಿ ಯಾವುದೇ ಬಣಗಳಿಲ್ಲ. ಬಿಜೆಪಿಯಲ್ಲಿ 16 ಬಣ ಇವೆ. ಕಾಂಗ್ರೆಸ್‍ನಲ್ಲಿ ಹಂಗೆಲ್ಲ ಇಲ್ಲ. ಯಡಿಯೂರಪ್ಪ ಒಂದು ದಿಕ್ಕು, ಈಶ್ವರಪ್ಪ ಮತ್ತೊಂದು ದಿಕ್ಕು ಇಲ್ವಾ? ಚುನಾವಣೆ ಬಂದಾಗ ಒಗ್ಗಟ್ಟಾಗೋದು ಸಾಮಾನ್ಯ. ಅವರಲ್ಲಿ ಇರುವಷ್ಟು ಭಿನ್ನಮತ ನಮ್ಮಲ್ಲಿ ಇಲ್ಲ. ಬಿಜೆಪಿಯಲ್ಲಿ ಎಲ್ಲರೂ ಮುಸ್ಲಿಮ್‌ರನ್ನ ವಿರೋಧಿಸುತ್ತಿಲ್ಲ. ಸಚಿವ ಡಾ. ಸುಧಾಕರ್ ನೋಡಿ ಹೇಗೆ ತೇಲಿಸಿ ಮಾತನಾಡುತ್ತಾರೆ ಎಂದು ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ, ಯಾವುದೇ ಭಾಷೆಯನ್ನು ಹೇರಲು ಹೊರಟರೆ ಸಹಿಸಲು ಸಾಧ್ಯ ಇಲ್ಲ: ಸಿದ್ದರಾಮಯ್ಯ