ನವದೆಹಲಿ: ಈ ಹಿಂದೆ ನ್ಯಾಯಂಗ ಮತ್ತು ನ್ಯಾಯಾಧೀಶರನ್ನು ಖಾಸಗಿ ವ್ಯಕ್ತಿಗಳು ನಿಂದಿಸುತ್ತಿದ್ದರು. ಈ ನಡುವೆ ಈ ಪ್ರವೃತ್ತಿಯನ್ನು ಸರ್ಕಾರಗಳು ಆರಂಭಿಸಿವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಬೇಸರ ವ್ಯಕ್ತಪಡಿಸಿದ್ದಾರೆ.
ಭ್ರಷ್ಟಾಚಾರ ಕಾಯಿದೆಯಡಿ ದಾಖಲಿಸಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸಿದ ಛತ್ತೀಸ್‌ಗಢ ಹೈಕೋರ್ಟ್ ತೀರ್ಪಿನ ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ ನ್ಯಾ. ಎನ್.ವಿ.ರಮಣ ಕೆಲವು ಸರ್ಕಾರಗಳ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಸುಪ್ರಿಯಾ ಮೆಲು ಧ್ವನಿಯಲ್ಲಿ ಮಾತನಾಡುತ್ತಿದ್ದರು, ಕೇಳಿಸಿಕೊಳ್ಳಲು ನಾನು ಡೆಸ್ಕ್ ಮೇಲೆ ಒರಗಿದೆ
Advertisement
Advertisement
ʻಹಿಂದೆ ನ್ಯಾಯಾಧೀಶರ ವಿರುದ್ಧ ಖಾಸಗಿ ವ್ಯಕ್ತಿಗಳು ಅಪಪ್ರಚಾರ ಮಾಡುತ್ತಿದ್ದರು. ಈ ನಡುವೆ ಇದರಲ್ಲಿ ಸರ್ಕಾರವೂ ಸೇರಿಕೊಂಡಿದೆ. ಇದೊಂದು ಟ್ರೆಂಡ್ ಆಗಿದ್ದು ದುರದೃಷ್ಟಕರ ಬೆಳವಣಿಗೆಯಾಗಿದೆʼ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.