ಮಾಸ್ಕೊ: ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಭಾನುವಾರ ನಡೆದಿದ್ದ ಚುನಾವಣೆಯಲ್ಲಿ 87.8% ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ತಮ್ಮ ಅಧಿಕಾರವನ್ನು ಪುನಃ ಭದ್ರಪಡಿಸಿಕೊಂಡಿದ್ದು, ಮುಂದಿನ ಆರು ವರ್ಷಗಳ ಅವಧಿ ಆಡಳಿತ ನಡೆಸಲಿದ್ದಾರೆ.
ಚುನಾವಣೆ ವೇಳೆ ಪುಟಿನ್ ವಿರುದ್ಧ ಸಾವಿರಾರು ಜನ ಮತದಾನ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಇಷ್ಟಾದರೂ ಪುಟಿನ್ ಬಹುಮತದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು ರಷ್ಯಾ ಅಧ್ಯಕ್ಷರಾಗಿ 1999 ರಲ್ಲಿ ಅಧಿಕಾರಕ್ಕೆ ಏರಿದದ್ದರು. ಅಂದಿನಿಂದ ರಷ್ಯಾ ಮೇಲೆ ಅವರು ಹಿಡಿತ ಸಾಧಿಸಿದ್ದಾರೆ. ಪುಟಿನ್ ಪಡೆದ ಮತಗಳು, ರಷ್ಯಾದ ಸೋವಿಯತ್ ನಂತರದ ಇತಿಹಾಸದಲ್ಲಿ ಅತ್ಯಧಿಕ ಫಲಿತಾಂಶವಾಗಿದೆ. ಇದನ್ನೂ ಓದಿ: ಬಿಜೆಪಿ ನಾಯಕರ ಮನವೊಲಿಕೆಗೆ ಬಗ್ಗದ ಈಶ್ವರಪ್ಪ – ಇಂದಿನ ಮೋದಿ ಕಾರ್ಯಕ್ರಮಕ್ಕೆ ಹೋಗ್ತಾರಾ?
Advertisement
Advertisement
ರಷ್ಯಾ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕದ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರರು, ಚುನಾವಣೆ ಮುಕ್ತ ಮತ್ತು ನ್ಯಾಯಯುತವಾಗಿಲ್ಲ, ವ್ಲಾಡಿಮಿರ್ ಪುಟಿನ್ ಅವರು ತಮ್ಮ ವಿರೋಧಿಗಳನ್ನು ಬಂಧಿಸಿದ್ದಾರೆ. ಅಲ್ಲದೇ ಅವರ ವಿರುದ್ಧ ಸ್ಪರ್ಧಿಸದಂತೆ ತಡೆದಿರುವುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.
Advertisement
Advertisement
ಇತ್ತೀಚೆಗೆ ಆಕ್ರ್ಟಿಕ್ ಜೈಲಿನಲ್ಲಿ ನಿಧನರಾದ ವ್ಲಾಡಿಮಿರ್ ಪುಟಿನ್ ಅವರ ಪ್ರಬಲ ವಿರೋಧಿ ಅಲೆಕ್ಸಿ ನವಲ್ನಿ ಅವರ ಬೆಂಬಲಿಗರು. ಅವರ ಸಾವಿನ ಬಳಿಕ ಪುಟಿನ್ ಅವರನ್ನು ಭ್ರಷ್ಟ ನಿರಂಕುಶಾಧಿಕಾರಿ ಎಂದು ಟೀಕಿಸಿದ್ದರು. ಜೊತೆಗೆ ಅವರ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಲು ಪ್ರತಿಭಟನೆಗೆ ಬರುವಂತೆ ರಷ್ಯನ್ನರಿಗೆ ಕರೆ ನೀಡಿದ್ದರು. ಇದೆಲ್ಲದರ ನಡುವೆ ಪುಟಿನ್ ಸುಲಭವಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡ ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥನ ಮನೆಯಲ್ಲಿ ಕಾಂಗ್ರೆಸ್ ದಾಂಧಲೆ