ಪಾಟ್ನಾ: ಬಿಹಾರದಲ್ಲಿ ʼಮಹಾಘಟಬಂಧನ್ʼ ಮತ್ತೆ ಅಧಿಕಾರಕ್ಕೆ ಬರುತ್ತಿರುವುದು ಕಾಂಗ್ರೆಸ್‌ನಲ್ಲಿ ಮಹತ್ವಾಕಾಂಕ್ಷೆಗಳನ್ನು ಹೆಚ್ಚಿಸಿದೆ ಎಂದು ತೋರುತ್ತಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ನೂತನ ಸಚಿವ ಸಂಪುಟಕ್ಕೆ ಜಾತಿಯ ಆಧಾರದ ಮೇಲೆ ತಮ್ಮನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿ ಖಗರಿಯಾ ಸದರ್ ಕ್ಷೇತ್ರದ ಶಾಸಕ ಛತ್ರಪತಿ ಯಾದವ್ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ಪತ್ರವೊಂದನ್ನು ಬರೆದಿದ್ದಾರೆ. ಇದನ್ನೂ ಓದಿ: ಪ್ರಧಾನಿ ಅಭ್ಯರ್ಥಿ ನಿತೀಶ್? – ದೂರವಾಣಿ ಕರೆಗಳ ಬಗ್ಗೆ ಸಿಎಂ ಹೇಳಿದ್ದೇನು?
Advertisement
Advertisement
ನಾನು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಪತ್ರ ಬರೆದಿದ್ದೇನೆ. ನನ್ನನ್ನು ಸಂಪುಟಕ್ಕೆ ಸೇರಿಸುವುದರಿಂದ ಒಬಿಸಿಗಳಲ್ಲಿ, ವಿಶೇಷವಾಗಿ ಯಾದವರಿಂದ ಬಲವಾದ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ನನ್ನನ್ನು ಪರಿಗಣಿಸುವಂತೆ ಔಪಚಾರಿಕವಾಗಿ ವಿನಂತಿಸಿದ್ದೇನೆ. ಬಿಹಾರದಲ್ಲಿ ನಾನು ಪಕ್ಷದ ಏಕೈಕ ಯಾದವ ಶಾಸಕನಾಗಿದ್ದೇನೆ ಎಂದು ಶಾಸಕ ತಿಳಿಸಿದ್ದಾರೆ.
Advertisement
ಬಿಂದೇಶ್ವರಿ ದುಬೆ, ಭಗವತ್ ಝಾ ಆಜಾದ್ ಮತ್ತು ಜಗನ್ನಾಥ್ ಮಿಶ್ರಾ ಅವರ ಮುಖ್ಯಮಂತ್ರಿಗಳಾಗಿದ್ದಾಗ ಅವರ ಸಂಪುಟದಲ್ಲಿ ನನ್ನ ತಂದೆ ರಾಜೇಂದ್ರ ಪ್ರಸಾದ್ ಯಾದವ್ ಅವರು ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಈಗ ಚುನಾವಣೆ ನಡೆದರೆ ಎನ್‌ಡಿಎಗೆ 286, ಕರ್ನಾಟಕದಲ್ಲಿ ಬಿಜೆಪಿಗೆ 13 ಸ್ಥಾನ
Advertisement
16 ಶಾಸಕರನ್ನು ಹೊಂದಿರುವ ಎಡಪಕ್ಷಗಳು ಹೊರಗಿನಿಂದ ಸರ್ಕಾರವನ್ನು ಬೆಂಬಲಿಸಲು ನಿರ್ಧರಿಸಿರುವುದರಿಂದ, 19 ಶಾಸಕರಿರುವ ಕಾಂಗ್ರೆಸ್‌ಗೆ ನಾಲ್ಕು ಸಚಿವ ಸ್ಥಾನಗಳು ಸಿಗುವ ನಿರೀಕ್ಷೆಯಿದೆ ಎಂದು ಹೊಸ ಆಡಳಿತ ಮೈತ್ರಿಕೂಟದ ಮೂಲಗಳು ತಿಳಿಸಿವೆ.
ನೂತನ ಸರ್ಕಾರದ ಸಂಪುಟದಲ್ಲಿ ಕಾಂಗ್ರೆಸ್‌ನಿಂದ ಎಷ್ಟು ಮಂದಿ ಮತ್ತು ಯಾರು ಇರಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ನಾವು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೂಚನೆಗಾಗಿ ನಾವು ಕಾಯುತ್ತಿದ್ದೇವೆ ಎಂದು ಬಿಹಾರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮದನ್ ಮೋಹನ್ ಝಾ ತಿಳಿಸಿದ್ದಾರೆ.