ನವದೆಹಲಿ: ಈಗ ಚುನಾವಣೆ ನಡೆದರೆ ಕರ್ನಾಟಕದಲ್ಲಿ ಎನ್‌ಡಿಎ 13, ಮಹಾಘಟಬಂಧನ್ 13, ಇತರೇ ಎರಡು ಸ್ಥಾನವನ್ನು ಗೆಲ್ಲಬಹುದು ಎಂದು ಇಂಡಿಯಾ ಟುಡೇಯ ಮೂಡ್ ಆಫ್ ನೇಷನ್ ಸಮೀಕ್ಷೆ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎಗೆ ಒಟ್ಟು 286 ಸ್ಥಾನ ಸಿಕ್ಕಿದರೆ ಯುಪಿಎ, ಘಟಬಂಧನ್‌ಗೆ 146 ಇತರರು 111 ಸ್ಥಾನವನ್ನು ಗಳಿಸಬಹುದು ಎಂದು ಹೇಳಿದೆ.
Advertisement
Advertisement
ಸತತ ಎರಡು ಬಾರಿ ಗೆದ್ದು ಅಧಿಕಾರ ನಡೆಸುತ್ತಿರುವ ಮೋದಿ ಜನಪ್ರಿಯತೆ ಇನ್ನೂ ಕುಸಿದಿಲ್ಲ. ಮುಂದಿನ ಪ್ರಧಾನಿ ಯಾರಾಗಬೇಕು ಎಂಬ ಪ್ರಶ್ನೆಗೆ ಶೇ.53 ರಷ್ಟು ಮಂದಿ ಮೋದಿ ಎಂದಿದ್ದರೆ ಶೇ.9 ಮಂದಿ ರಾಹುಲ್, ಶೇ. 7 ಮಂದಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಬೆಂಬಲಿಸಿದ್ದಾರೆ. ಇದನ್ನೂ ಓದಿ: ಎಫ್‌ಬಿಐ ಕಚೇರಿ ಮೇಲೆ ದಾಳಿಗೆ ಮುಂದಾದ ಬಂದೂಕುಧಾರಿ ಹತ್ಯೆಗೈದ ಪೊಲೀಸರು
Advertisement
ಚುನಾವಣೆಯಲ್ಲಿ ಎನ್‌ಡಿಎಗೆ ಶೇ.41 ರಷ್ಟು ಮತ ಬಿದ್ದರೆ ಘಟಬಂಧನ್‌ಗೆ ಶೇ.28, ಇತರರು ಶೇ.3 ರಷ್ಟು ಮತಗಳನ್ನು ಪಡೆಯಲಿದ್ದಾರೆ. ವಿರೋಧ ಪಕ್ಷವಾಗಿ ಕಾಂಗ್ರೆಸ್ ಕೆಲಸ ಮಾಡುತ್ತಿದೆಯೇ ಎಂಬ ಪ್ರಶ್ನೆಗೆ ಶೇ. 40 ಮಂದಿ ʼಉತ್ತಮʼ ಎಂದರೆ ಶೇ. 34 ರಷ್ಟು ʼಕಳಪೆʼ ಎಂದಿದ್ದಾರೆ.
Advertisement
ಕಾಂಗ್ರೆಸ್‌ನ ಮುಂದಿನ ಅಧ್ಯಕ್ಷರು ಯಾರಾಗಬೇಕು ಎಂಬ ಪ್ರಶ್ನಗೆ ರಾಹುಲ್ ಗಾಂಧಿಗೆ ಶೇ. 23, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಶೇ.16, ಸಚಿನ್ ಪೈಲಟ್ ಶೇ.14, ಪ್ರಿಯಾಂಕಾ ಗಾಂಧಿಗೆ ಶೇ. 9 ಮಂದಿ ಬೆಂಬಲ ಸೂಚಿಸಿದ್ದಾರೆ.