ಟಾಲಿವುಡ್ನ ಸೂಪರ್ ಸ್ಟಾರ್ ಅಲ್ಲು ಅರ್ಜುನ್ಗೆ ಇದೀಗ ಹಾಲಿವುಡ್ನಲ್ಲೂ ಭರ್ಜರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಇದೀಗ ಹಾಲಿವುಡ್ ಚಿತ್ರಗಳತ್ತ ಅಲ್ಲು ಅರ್ಜುನ್ ಮುಖ ಮಾಡಿದ್ದಾರೆ.
ದಕ್ಷಿಣದ ಸಾಕಷ್ಟು ಚಿತ್ರಗಳ ಮೂಲಕ ಮೋಡಿ ಮಾಡಿರುವ ಅಲ್ಲು ಅರ್ಜುನ್ಗೆ ಬಿಗ್ ಬ್ರೇಕ್ ಕೊಟ್ಟಿದ್ದು, `ಪುಷ್ಪ’ ಸಿನಿಮಾ, ಈ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದರು. ಪುಷ್ಪ ರಾಜ್ ಫೈಯರ್ ಆಕ್ಟಿಂಗ್ಗೆ ಫ್ಯಾನ್ಸ್ ಫಿದಾ ಆಗಿದ್ದರು. ಈಗ ಅಲ್ಲು ಅರ್ಜುನ್ ಖಡಕ್ ನಟನೆ ನೋಡಿ ಹಾಲಿವುಡ್ ನಿರ್ದೇಶಕರೊಬ್ಬರು, ತಮ್ಮ ಸಿನಿಮಾದಲ್ಲಿ ನಟಿಸಿ ಎಂದು ಆಫರ್ ಕೊಟ್ಟಿದ್ದಾರೆ.
View this post on Instagram
ಸ್ಟಾರ್ ನಟ ಅಲ್ಲು ಅರ್ಜುನ್ ನಟನೆ ನೋಡಿ ಹಾಲಿವುಡ್ ಮಂದಿ ಕೂಡ ಫಿದಾ ಆಗಿದ್ದಾರೆ. ಅಲ್ಲು ಅರ್ಜುನ್ ದಂಪತಿ ವೆಕೇಶನ್ಗೆ ನ್ಯೂಯಾರ್ಕ್ಗೆ ತೆರಳಿದ್ದ ವೇಳೆ ಹಾಲಿವುಡ್ ನಿರ್ದೇಶಕರೊಬ್ಬರು, ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಿ ಚಿತ್ರದ ಸ್ಕ್ರೀಪ್ಟ್ ಬಗ್ಗೆ ಒಂದು ಹಂತದ ಮಾತುಕತೆ ಮುಗಿಸಿದ್ದಾರಂತೆ. ಪುಷ್ಪ ಸ್ಟಾರ್ಗೂ ಕಥೆ ಕೇಳಿ ಥ್ರಿಲ್ ಆಗಿ ಓಕೆ ಅಂದಿದ್ದಾರೆ. ಹಾಲಿವುಡ್ನ ಸೂಪರ್ ಹೀರೋ ಪ್ರಾಂಚೆಸಿ ಕಥೆಯಲ್ಲಿ ಖಡಕ್ ರೋಲ್ನಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ಹಣದ ಹಿಂದೆ ಬಿದ್ದಿದ್ದ ಆರ್ಯವರ್ಧನ್ ಬಿಗ್ಬಾಸ್ನಿಂದ ಕಲಿತಿದ್ದೇನು ಗೊತ್ತಾ?
View this post on Instagram
ಸದ್ಯ `ಪುಷ್ಪ 2′ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದ ಕಂಪ್ಲೀಟ್ ಆದ ಮೇಲೆ ಹಾಲಿವುಡ್ ಚಿತ್ರಕ್ಕೆ ಅಲ್ಲು ಅರ್ಜುನ್ ಕೈಗೆತ್ತಿಕೊಳ್ಳಲಿದ್ದಾರೆ. `ಪುಷ್ಪ 2′ ಚಿತ್ರದ ಮೇಲೆ ಕಣ್ಣೀಟ್ಟಿರುವ ಫ್ಯಾನ್ಸ್, ಪುಷ್ಪ ರಾಜ್ ನಯಾ ಅವತಾರ ನೋಡಲು ಕಾಯ್ತಿದ್ದಾರೆ.