ಕಠ್ಮಂಡು: ಸಿಪಿಎನ್-ಮಾವೋವಾದಿ ಸೆಂಟರ್ (CPNMC) ಅಧ್ಯಕ್ಷ ಪುಷ್ಪ ಕಮಲ್ ದಹಾಲ್ ಪ್ರಚಂಡ (Pushpa Kamal Dahal Prachanda) ನೇಪಾಳದ (Nepal) ನೂತನ ಪ್ರಧಾನಿಯಾಗಿ (Prime Minister) ನೇಮಕಗೊಂಡಿದ್ದಾರೆ. ಈ ಮೂಲಕ 3 ಬಾರಿ ನೇಪಾಳದ ಪ್ರಧಾನಿ ಪಟ್ಟಕ್ಕೇರಿದಂತಾಗಿದೆ.
Advertisement
ನೇಪಾಳದ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ನೂತನ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಅವರನ್ನು ಇಂದು ನೇಮಕ ಮಾಡಿದ್ದಾರೆ. ಪ್ರಚಂಡ ಅವರು ಪಕ್ಷೇತರ ಸಂಸದರು ಸೇರಿದಂತೆ 169 ಸಂಸದರ ಬೆಂಬಲವಿದೆ ಎಂದು ತಿಳಿಸಿದ ಬಳಿಕ ಪ್ರಧಾನಿಯಾಗಿ ಆಯ್ಕೆ ಮಾಡಲು ಅಧ್ಯಕ್ಷರು ಒಪ್ಪಿದರು. ಇದಕ್ಕೂ ಮೊದಲು ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ನೇತೃತ್ವದಲ್ಲಿ ಸಿಪಿಎನ್-ಯುಎಂಎಲ್, ಸಿಪಿಎನ್-ಎಂಸಿ, ರಾಷ್ಟ್ರೀಯ ಸ್ವತಂತ್ರ ಪಕ್ಷ (RSP) ಮತ್ತು ಇತರ ಪಕ್ಷಗಳೊಂದಿಗೆ ಮಹತ್ವದ ಸಭೆ ನಡೆಯಿತು. ಇದರಲ್ಲಿ ಪ್ರಚಂಡ ನೇತೃತ್ವದಲ್ಲಿ ಸರ್ಕಾರ ರಚಿಸಲು ಒಪ್ಪಿಗೆ ನೀಡಿದ ಬಳಿಕ ಮೈತ್ರಿ ಸರ್ಕಾರ ರಚನೆಯಾಗಿದೆ. ಇದನ್ನೂ ಓದಿ: ಅಟಲ್ ಬಿಹಾರಿ ವಾಜಪೇಯಿ ರೋಲ್ನಲ್ಲಿ ಪಂಕಜ್ ತ್ರಿಪಾಠಿ: ಫಸ್ಟ್ ಲುಕ್ ಔಟ್
Advertisement
Advertisement
ಪ್ರಚಂಡ ನೇತೃತ್ವದಲ್ಲಿ ಸರ್ಕಾರ ರಚನೆಗೂ ಮುನ್ನ ಒಪ್ಪಂದವೊಂದು ನಡೆದಿದೆ. ಮೈತ್ರಿ ಸರ್ಕಾರದ ಒಪ್ಪಂದದ ಪ್ರಕಾರ ಮುಂದಿನ ಎರಡೂವರೆ ವರ್ಷಗಳ ಕಾಲ ಪ್ರಚಂಡ ಪ್ರಧಾನಿಯಾದರೆ, ಮುಂದಿನ ಎರಡೂವರೆ ವರ್ಷ ಸಿಪಿಎನ್-ಯುಎಂಎಲ್ ನಾಯಕ ಮಾಜಿ ಪ್ರಧಾನಿ ಒಲಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಇದನ್ನೂ ಓದಿ: ನಮಗೆ ಜೀವ ನೀಡುವುದೂ ಗೊತ್ತು.. ಜೀವ ತೆಗೆಯುವುದೂ ಗೊತ್ತು – ಪ್ರಜ್ಞಾ ಸಿಂಗ್ ಪ್ರಚೋದನಕಾರಿ ಭಾಷಣ
Advertisement
ಪ್ರಚಂಡ ನೇತೃತ್ವದ ಹೊಸ ಸರ್ಕಾರವು 275 ಸದಸ್ಯರ ಹೌಸ್ ಆಫ್ ರೆಪ್ರೆಸೆಂಟೇಟಿನ್ಸ್ನಲ್ಲಿ 169 ಸದಸ್ಯರ ಬೆಂಬಲವನ್ನು ಹೊಂದಿದೆ. ಇದರಲ್ಲಿ ಸಿಪಿಎನ್-ಯುಎಂಎಲ್ನ 78, ಸಿಪಿಎನ್-ಎಂಸಿಯಿಂದ 32, ಆರ್ಎಸ್ಪಿಯ 20, ಆರ್ಪಿಪಿಯಿಂದ 14, ಜೆಎಸ್ಪಿಯಿಂದ 12, ಆರು ಜನ್ಮತ್ ಮತ್ತು ಸಿವಿಲ್ ಲಿಬರೇಶನ್ ಪಾರ್ಟಿಯ ಮೂವರು ಸದಸ್ಯರೊಂದಿಗೆ ಸ್ವತಂತ್ರ ಸಂಸದರೂ ಸೇರಿದ್ದಾರೆ. ಪ್ರಚಂಡ ಮತ್ತು ಓಲಿ ಇಬ್ಬರು ಸೇರಿ ಮೈತ್ರಿ ಸರ್ಕಾರ ರಚಿಸಿದ್ದು, ಪ್ರಚಂಡ ಅವರನ್ನು ಮೊದಲ ಎರಡೂವರೆ ವರ್ಷಗಳ ಅವಧಿಯಲ್ಲಿ ಪ್ರಧಾನಿ ಮಾಡಲು ಓಲಿ ಒಪ್ಪಿಗೆ ನೀಡಿ ಬಳಿಕ ಮುಂದಿನ ಎರಡೂವರೆ ವರ್ಷಗಳ ಕಾಲ ಪ್ರಧಾನಿಯಾಗಿ ಅಧಿಕಾರಕ್ಕೇರುವ ಇರಾದೆಯಲ್ಲಿದ್ದಾರೆ.
Live Tv
[brid partner=56869869 player=32851 video=960834 autoplay=true]