ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರ ಬಯೋಪಿಕ್ ತೆರೆಗೆ ಬರಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ವಾಜಪೇಯಿ ಪಾತ್ರದಲ್ಲಿ ಪಂಕಜ್ ತ್ರಿಪಾಠಿ (Pankaj Tripathi) ನಟಿಸಿದ್ದಾರೆ. ವಾಜಪೇಯಿ ಅವರ ಜನ್ಮ ದಿನದ ಪ್ರಯುಕ್ತ ಡಿ.25ರಂದು ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡಲಾಗಿದೆ.
- Advertisement 2
ರಾಜಕೀಯ ರಂಗದಲ್ಲಿ ತಮ್ಮದೇ ಶೈಲಿಯಲ್ಲಿ ಮೋಡಿ ಮಾಡಿದವರು ಅಟಲ್ ಬಿಹಾರಿ ವಾಜಪೇಯಿ, ಅವರ ವ್ಯಕ್ತಿತ್ವ ಕೋಟ್ಯಂತರ ಜನರಿಗೆ ಮಾದರಿ. ಹೀಗಿರುವಾಗ ಅವರ ಜೀವನಾಧಾರಿತ ಸಿನಿಮಾ ವಾಜಪೇಯಿ ಪಾತ್ರಕ್ಕೆ ನಟ ಪಂಕಜ್ ತ್ರಿಪಾಠಿ ಜೀವತುಂಬಿದ್ದಾರೆ.
- Advertisement 3
View this post on Instagram
- Advertisement 4
ವಾಜಪೇಯಿ ಅವರು ಕೇವಲ ರಾಜಕಾರಣಿ ಆಗಿರಲಿಲ್ಲ. ಅವರು ಕವಿಯೂ ಹೌದು. ಅದೇ ರೀತಿ ಅವರ ವ್ಯಕ್ತಿತ್ವಕ್ಕೆ ಹಲವು ಆಯಾಮಗಳಿವೆ. ಅದೆಲ್ಲವನ್ನೂ `ಮೈ ಅಟಲ್ ಹು’ (Main Atal Hoon) ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದನ್ನು ತಿಳಿಸುವ ಸಲುವಾಗಿ ಚಿಕ್ಕ ಟೀಸರ್ ರಿಲೀಸ್ ಮಾಡಲಾಗಿದೆ. ಈ ಪಾತ್ರ ಮಾಡುತ್ತಿರುವುದಕ್ಕೆ ಪಂಕಜ್ ತ್ರಿಪಾಠಿ ಸಖತ್ ಖುಷಿ ಆಗಿದ್ದಾರೆ. ಇದನ್ನೂ ಓದಿ: ಅಮೂಲ್ಯ ಅವಳಿ ಮಕ್ಕಳಿಗೆ ಆಶೀರ್ವದಿಸಿದ ಸಾಲು ಮರದ ತಿಮ್ಮಕ್ಕ
View this post on Instagram
`ಮೈ ಅಟಲ್ ಹು’ ಸಿನಿಮಾಗೆ ರವಿ ಜಾಧವ್ ನಿರ್ದೇಶನ ಮಾಡಿದ್ದಾರೆ. ಸದ್ಯ ಚಿತ್ರದಲ್ಲಿನ ಪಂಕಜ್ ತ್ರಿಪಾಠಿ ಲುಕ್ ನೆಟ್ಟಿಗರ ಗಮನ ಸೆಳೆದಿದೆ. ಚಿತ್ರದ ಪೋಸ್ಟರ್ ನೋಡಿದವರು, ವಾಜಪೇಯಿ ಪಾತ್ರಕ್ಕೆ ಸೂಕ್ತ ವ್ಯಕ್ತಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ನಟ ಪಂಕಜ್ ಅವರ ಲುಕ್ ಸದ್ದು ಮಾಡ್ತಿದೆ. ಇನ್ನೂ ಈ ಸಿನಿಮಾ ಮುಂದಿನ ವರ್ಷ ಡಿ.25ಕ್ಕೆ ತೆರೆಗೆ ಅಪ್ಪಳಿಸಲಿದೆ.