ಕನ್ನಡದ ‘ಕಿರಿಕ್ ಪಾರ್ಟಿ’ (Kirik Party) ಬ್ಯೂಟಿ ರಶ್ಮಿಕಾ ಮಂದಣ್ಣಗೆ (Rashmika Mandanna) ಟಾಲಿವುಡ್‌ನಲ್ಲಿ (Tollywood) ಡಿಮ್ಯಾಂಡ್ ಕಮ್ಮಿಯಾಗುತ್ತಿದೆ. ಬಾಲಿವುಡ್‌ನತ್ತ ಮುಖ ಮಾಡಿರೋ ಶ್ರೀವಲ್ಲಿಗೆ ಈಗ ಬಂಪರ್ ಆಫರ್‌ವೊಂದು ಸಿಕ್ಕಿದೆ. ಒಬ್ಬರಲ್ಲ ಸೌತ್‌ನ ಇಬ್ಬರು ಸೂಪರ್ ಸ್ಟಾರ್ ಜೊತೆ ತೆರೆಹಂಚಿಕೊಳ್ಳುವ ಅವಕಾಶವನ್ನ ನಟಿ ಗಿಟ್ಟಿಸಿಕೊಂಡಿದ್ದಾರೆ. ತೆಲುಗಿನ ಸ್ಟಾರ್ ನಿರ್ದೇಶಕ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.
ನಿತಿನ್ ಸಿನಿಮಾದಿಂದ ಹೊರಬಂದ ಮೇಲೆ ಬಾಲಿವುಡ್ ಸಿನಿಮಾಗಳ ಮೇಲೆ ರಶ್ಮಿಕಾ ಮಂದಣ್ಣ (Rashmika Mandanna) ಗಮನ ಹರಿಸುತ್ತಿದ್ದಾರೆ. ರಶ್ಮಿಕಾ ಕೈಬಿಟ್ಟ ಸಿನಿಮಾ ಎಲ್ಲಾ ಶ್ರೀಲೀಲಾ ಪಾಲಾಗುತ್ತಿದೆ. ಹೀಗಿರುವಾಗ ನ್ಯಾಷನಲ್ ಕ್ರಶ್‌ಗೆ ಸೂಪರ್ ಡೂಪರ್ ಆಫರ್‌ವೊಂದು ಸಿಕ್ಕಿದೆ. ಎಂದೂ ನಟಿಸಿರದ ರೋಲ್‌ನಲ್ಲಿ ಪುಷ್ಪ ನಟಿ ಮಿಂಚಲಿದ್ದಾರೆ.
ಫಿದಾ, ಲವ್ ಸ್ಟೋರಿ ಸೇರಿದಂತೆ ಹಲವು ಚಿತ್ರಗಳನ್ನ ಸೂಪರ್-ಡೂಪರ್ ಹಿಟ್ ಕೊಟ್ಟಿರುವ ನಿರ್ದೇಶಕ ಶೇಖರ್ ಕಮ್ಮುಲ ಇದೇ ಮೊದಲ ಬಾರಿಗೆ ತಮಿಳು-ತೆಲುಗು ಬೈಲಿಂಗ್ವಲ್ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಸಿನಿಮಾಕ್ಕೆ ತಮಿಳಿನಿಂದ ಒಬ್ಬರು ಹಾಗೂ ತೆಲುಗು ಇಂದ ಒಬ್ಬರು ಸೂಪರ್ ಸ್ಟಾರ್‌ಗಳನ್ನು ಸೆಲೆಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಪಾರ್ವತಮ್ಮ ರಾಜ್ ಕುಮಾರ್ ಹಾದಿಯಲ್ಲೇ ಸೊಸೆ ಅಶ್ವಿನಿ: ಕಾದಂಬರಿ ಆಧರಿಸಿ ಸಿನಿಮಾ
ಶೇಖರ್ ಕಮ್ಮುಲ ನಿರ್ದೇಶಿಸಲಿರುವ ಹೊಸ ಸಿನಿಮಾದಲ್ಲಿ ತಮಿಳಿನ ಸ್ಟಾರ್ ನಟ ಧನುಷ್ (Dhanush) ನಾಯಕನಾಗಿ ನಟಿಸಲಿದ್ದಾರೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ತೆಲುಗಿನ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಸಹ ನಟಿಸುತ್ತಿದ್ದು, ಈ ಸಿನಿಮಾ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾಕ್ಕೆ ನಾಯಕಿಯಾಗಿ ನಟಿ ರಶ್ಮಿಕಾ ಮಂದಣ್ಣ ಫಿಕ್ಸ್ ಆಗಿದ್ದಾರೆ.
ಸದ್ಯ ರಶ್ಮಿಕಾ ಮಂದಣ್ಣ ಪುಷ್ಪ 2(Pushpa 2) , ಅನಿಮಲ್, ರೈನ್‌ಬೋ, ಟೈಗರ್ ಶ್ರಾಫ್ ಜೊತೆಗಿನ ಸಿನಿಮಾ, ಶಾಹಿದ್ ಕಪೂರ್ ಜೊತೆಗೊಂದು ಸಿನಿಮಾ ಅಂತಾ ಬ್ಯುಸಿಯಾಗಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]