ರಿಲೀಸ್‌ಗೂ ಮುನ್ನವೇ ಬರೋಬ್ಬರಿ 32 ಕೋಟಿಗೆ ಸೇಲ್ ಆಯ್ತು ರಶ್ಮಿಕಾ ಮಂದಣ್ಣ ಸಿನಿಮಾ

Public TV
2 Min Read
rashmika mandanna 6

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸೌತ್- ಬಾಲಿವುಡ್ ಚಿತ್ರರಂಗದಲ್ಲಿ ಬ್ಯುಸಿ ನಟಿಯಾಗಿ ಮಿಂಚ್ತಿದ್ದಾರೆ. ‘ಪುಷ್ಪʼ (Pushpa) ಸಿನಿಮಾ ಹಿಟ್ ಆದ್ಮೇಲಂತೂ ಕೇಳಬೇಕಾ? ಬಂಪರ್ ಆಫರ್ಸ್ ಅರಸಿ ಬರುತ್ತಿದೆ. ಇದೀಗ ಹೊಸ ವಿಚಾರ ಏನಂದರೆ.. ರಿಲೀಸ್‌ಗೂ ಮುನ್ನವೇ ರಶ್ಮಿಕಾ ನಟನೆಯ ಸಿನಿಮಾ ಕೋಟಿ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಸಮಂತಾ ಮಾಡಿದ್ದ ರೆಕಾರ್ಡ್ನ ರಶ್ಮಿಕಾ ಮಂದಣ್ಣ ಬ್ರೇಕ್ ಮಾಡಿದ್ದಾರೆ. ಏನದು? ಇಲ್ಲಿದೆ ಡಿಟೈಲ್ಸ್.

rashmika mandanna

ಸೌತ್ ಸಿನಿ ರಂಗದಲ್ಲಿ ಸಮಂತಾ ಸ್ಟಾರ್ ನಟಿಯಾಗಿ ಬೆಳೆದಿದ್ದಾರೆ. ಹೀರೋ ಇಲ್ಲದೇನೆ ಮಹಿಳಾ ಪ್ರಧಾನ ಸಿನಿಮಾಗಳನ್ನ ಮಾಡಿ ಗೆದ್ದು ಬೀಗಿದ್ದಾರೆ. ಸಮಂತಾ ನಟಿಸಿದ್ದ ‘ಓಹ್ ಬೇಬಿ'(Oh Bay) ಮತ್ತು ‘ಯಶೋದಾ’ (Yashoda) ಚಿತ್ರಗಳು 30 ಕೋಟಿ ರೂಪಾಯಿ ತನಕ ಬಿಸ್ನೆಸ್ ಮಾಡಿತ್ತು. ಅದು ಕೂಡ ರಿಲೀಸ್ ನಂತರ ಮಾತ್ರ. ಆದರೆ ರಶ್ಮಿಕಾ ಮಂದಣ್ಣ ನಟನೆಯ ‘ರೈನ್‌ಬೋ’ (Rainbow) ಸಿನಿಮಾ ಬಿಡುಗಡೆಗೂ ಮುನ್ನವೇ 32 ಕೋಟಿ ರುಪಾಯಿ ವ್ಯವಹಾರ ಮಾಡಿದೆ ಎನ್ನಲಾಗಿದೆ. ಇದರಲ್ಲಿ ಡಿಜಿಟಲ್, ಸ್ಯಾಟಲೈಟ್, ಥಿಯಟ್ರಿಕಲ್ ಹಕ್ಕುಗಳು ಕೂಡ ಸೇರಿವೆ ಎಂದು ಹೇಳಲಾಗುತ್ತಿದೆ.

rashmika mandanna 1 1

ಸ್ಟಾರ್ ಹೀರೋಗಳ ಸಿನಿಮಾ ಮಧ್ಯೆ ನಾಯಕಿಯ ಸಿನಿಮಾ ಪೈಪೋಟಿ ನೀಡೋದು ದೊಡ್ಡ ವಿಚಾರ. ಹೀಗಿರುವಾಗ ಒಂದು ಸಿನಿಮಾ 32 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದರೆ ಅದು ನಿಜಕ್ಕೂ ಗುಡ್ ನ್ಯೂಸ್. ರೈನ್‌ಬೋ ಸಿನಿಮಾ ರಶ್ಮಿಕಾ ಮಂದಣ್ಣ ನಟನೆಯ ಮೊದಲ ಮಹಿಳಾ ಪ್ರಧಾನ ಸಿನಿಮಾ, ಈ ಪ್ರಾಜೆಕ್ಟ್ ಗೆದ್ದರೆ ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಇಂತಹ ಚಿತ್ರಗಳಿಗೆ ನಟಿ ಒತ್ತು ನೀಡೋದು ಗ್ಯಾರೆಂಟಿ. ಇನ್ನೂ ರೈನ್‌ಬೋ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ರಶ್ಮಿಕಾ ಜೊತೆ ನಟ ದೇವ್‌ ಮೋಹನ್‌ ಕೂಡ ಸಿನಿಮಾದಲ್ಲಿ ಸಾಥ್‌ ನೀಡಿದ್ದಾರೆ.

ರಶ್ಮಿಕಾ ನಟನೆಯ ಪುಷ್ಪ 2, ಅನಿಮಲ್, ರೈನ್‌ಬೋ, ಮತ್ತು ಟೈಗರ್ ಶ್ರಾಫ್ ಜೊತೆ ಬಾಲಿವುಡ್ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಿವೆ. ಇತ್ತೀಚಿಗೆ ಭೀಷ್ಮ ನಟ ನಿತಿನ್ (Nithin) ಸಿನಿಮಾದಿಂದ ರಶ್ಮಿಕಾ ಮಂದಣ್ಣ ಹೊರಬಂದಿದ್ದಾರೆ. ರಶ್ಮಿಕಾಗೆ ಸಿಕ್ಕಿದ್ದ ಅವಕಾಶ ಶ್ರೀಲೀಲಾ (Sreeleela) ಇದೀಗ ದಕ್ಕಿದೆ. ಒಟ್ನಲ್ಲಿ ಸೌತ್‌ನಲ್ಲಿ ಕನ್ನಡತಿಯರ ದರ್ಬಾರ್ ಜೋರಾಗಿದೆ.

Share This Article