ಇನ್ಸ್ಟಾಗ್ರಾಂನಲ್ಲೇ ಲಕ್ಷ ಲಕ್ಷ ಸಂಪಾದನೆ ಮಾಡ್ತಿದ್ದಾರೆ ರಶ್ಮಿಕಾ ಮಂದಣ್ಣ

Public TV
2 Min Read
rashmika mandanna 1 3

ಕೊಡಗಿನ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಲಕ್ಕಿ ನಟಿ, ಸಿನಿಮಾ-ಜಾಹಿರಾತು ಜಗತ್ತು ಎಲ್ಲಿ ನೋಡಿದ್ರೂ ರಶ್ಮಿಕಾದೇ ಹವಾ. ಇಂಟರ್‌ನೆಟ್‌ನಲ್ಲೂ ಶ್ರೀವಲ್ಲಿದೇ ದರ್ಬಾರ್. ಹೀಗಿರುವಾಗ ಸೋಷಿಯಲ್ ಮೀಡಿಯಾದ ಒಂದು ಪೋಸ್ಟ್‌ಗೆ ಪಡೆಯುವ ಸಂಭಾವನೇ ಎಷ್ಟು ಗೊತ್ತಾ? ವರ್ಷಕ್ಕೆ ಸೋಷಿಯಲ್ ಮೀಡಿಯಾದಿಂದ ಬರುವ ಆದಾಯ ಎಷ್ಟು ಎಂದು ತಿಳಿದರೆ, ನೀವು ಕೂಡ ಶಾಕ್ ಆಗ್ತೀರಾ. ಹೀಗೂ ಕಮಾಯಿ ಮಾಡಬಹುದಾ ಅಂತೀರಾ.

rashmika mandanna 1 3ಹೆಸರು ಮಾಡಿದ್ರೆ ದುಡ್ಡು ತಾನಾಗಿ ತಾನೇ ಹುಡುಕಿಕೊಂಡು ಬರುತ್ತೆ ಅಂತ ತಿಳಿದವರು ಹೇಳ್ತಾರೆ. ಈ ವಿಚಾರ ನಟಿ ರಶ್ಮಿಕಾ ಜೀವನದಲ್ಲೂ ಸತ್ಯವಾಗಿದೆ. ಮೊದ ಮೊದಲು ಎಷ್ಟು ಸಂಭಾವನೇ ಪಡೆದ್ರು ಅನ್ನೋದಕ್ಕಿಂತ ಈಗ ರಶ್ಮಿಕಾ ಎಷ್ಟು ಸಂಪಾದನೇ ಮಾಡ್ತಿದ್ದಾರೆ ಎಂಬುದರ ಬಗ್ಗೆ ಬಹಳಷ್ಟು ಜನ ಕಣ್ಣು ಬಿಟ್ಟುಕೊಂಡು ನೋಡ್ತಿದ್ದಾರೆ. ಸಿನಿಮಾಗಳಲ್ಲಿ ನಟಿಸಲು ರಶ್ಮಿಕಾ ಪಡೆಯುತ್ತಿರುವ ಸಂಭಾವನೇ ಕೋಟಿಗಳು ದಾಟಿದೆ. ಇನ್ನು ಬಹಳಷ್ಟು ಜಾಹಿರಾತುಗಳಿಗೂ ರಶ್ಮಿಕಾ ಬಣ್ಣ ಹಚ್ಚಿದ್ದಾರೆ ಆ ಕಂಪೆನಿಯವರು ರಶ್ಮಿಕಾ ಅಕೌಂಟ್‌ಗೆ ಒಳ್ಳೆಯ ಕಾಸು ಕೂಡ ಹಾಕಿದ್ದಾರೆ.

rashmika mandanna

ಶ್ರೀವಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಲು ಕೂಡ ಸಂಭಾವನೇ ಪಡಿತಾರಂತೆ. ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾನ 4 ಕೋಟಿ ಜನ ಫಾಲೋ ಮಾಡ್ತಾರೆ. ನಟಿ ಒಂದು ಪೋಸ್ಟ್ ಹಾಕಿದ್ದರೆ 10 ಲಕ್ಷ ಲೈಕ್ಸ್ ಪಕ್ಕಾ. ಇದನ್ನ ಕೆಲವು ಕಂಪನಿಗಳು ಬಂಡವಾಳ ಮಾಡಿಕೊಂಡಿದ್ದಾರೆ. ರಶ್ಮಿಕಾ ಸೋಷಿಯಲ್ ಮೀಡಿಯಾ ಅಕೌಂಟ್‌ನಿಂದ ತಮ್ಮ ಪ್ರಾಡೆಕ್ಟ್‌ಗಳನ್ನ ಪ್ರಮೋಟ್ ಮಾಡಿಸಲು ಮುಂದಾಗಿದ್ದಾರೆ. ಪುಷ್ಪ ನಟಿಗೆ ಒಳ್ಳೆಯ ಕಾಸು ಕೂಡ ಬರುತ್ತಿದೆಯಂತೆ. ಒಂದು ಪೋಸ್ಟ್‌ಗೆ ಲಕ್ಷ ಲಕ್ಷ ಸಂಪಾದನೆ ಮಾಡುತ್ತಾರಂತೆ. ಇದನ್ನೂ ಓದಿ:ಆಹ್ವಾನವಿದ್ರೂ ವರುಣ್ ಮದುವೆಗೆ ಹೋಗಲ್ಲ ಎಂದ ನಟಿ ರೇಣು ದೇಸಾಯಿ

ಕನ್ನಡದ ‘ಕಿರಿಕ್ ಪಾರ್ಟಿ’ (Kirik Party) ಮೂಲಕ ಗಮನ ಸೆಳೆದ ನಟಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಸದ್ಯ ‘ಅನಿಮಲ್’ (Animal) ಚಿತ್ರದ ರಿಲೀಸ್‌ಗೆ ನಟಿ ಎದುರು ನೋಡ್ತಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article