ಕನ್ನಡದ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಟಾಲಿವುಡ್, ಬಾಲಿವುಡ್ (Bollywood) ಗಟ್ಟಿ ನೆಲೆ ಗಿಟ್ಟಿಸಿಕೊಂಡಿದ್ದಾರೆ. ಸಾಲು ಸಾಲು ಸಿನಿಮಾಗಳ ಮೂಲಕ ಮೋಡಿ ಮಾಡ್ತಿದ್ದಾರೆ. ಇದೀಗ ವಿಜಯ್ ದೇವರಕೊಂಡ ತಮ್ಮನ ಸಿನಿಮಾ ನೋಡಿ ರಶ್ಮಿಕಾ ಮಂದಣ್ಣ ಕಣ್ಣೀರಿಟ್ಟಿದ್ದಾರೆ.
Advertisement
ರಶ್ಮಿಕಾ- ವಿಜಯ್ ದೇವರಕೊಂಡ (Vijay Devarakonda) ನಡುವೆ ‘ಗೀತಾ ಗೋವಿಂದಂ’ (Geetha Govindam) ಸಿನಿಮಾ ಸೆಟ್ನಲ್ಲಿ ಪರಿಚಯವಾದ ಸ್ನೇಹ ಇದೀಗ ಅವರ ಕುಟುಂಬ ಜೊತೆ ನಟಿ ಒಳ್ಳೆಯ ಒಡನಾಟ ಹೊಂದಿದ್ದಾರೆ. ವಿಜಯ್ ಮಾತ್ರವಲ್ಲ ಅವರ ತಮ್ಮ ಆನಂದ್ ಜೊತೆಗೂ ಉತ್ತಮ ಸ್ನೇಹವಿದೆ. ವಿಜಯ್- ರಶ್ಮಿಕಾ ಡೇಟಿಂಗ್ ಸುದ್ದಿಯ ನಡುವೆ ಈಗ ಆನಂದ್ ದೇವರಕೊಂಡ ನಟನೆಯ ‘ಬೇಬಿ’ ಸಿನಿಮಾ ಪ್ರಿಮಿಯರ್ಗೆ ಪುಷ್ಪ ಬ್ಯೂಟಿ ಜೊತೆಯಾಗಿದ್ದಾರೆ. ದೇವರಕೊಂಡ ಫ್ಯಾಮಿಲಿ ಜೊತೆ ಬೇಬಿ ಚಿತ್ರ ವೀಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ:ಮಳೆ, ಕೊರೆವ ಚಳಿ ನಡುವೆ ಕಾಶ್ಮೀರದಲ್ಲಿ ಸಾನ್ಯ ಟ್ರೆಕ್ಕಿಂಗ್
Advertisement
Advertisement
ವಿಜಯ್ ರೀತಿಯೇ ಆನಂದ್ ದೇವರಕೊಂಡ ಕೂಡ ನಟನಾಗಿ ಆಗಿ ತೆಲುಗಿನಲ್ಲಿ ಗುರುತಿಸಿಕೊಳ್ತಿದ್ದಾರೆ. ಅವರ ವೃತ್ತಿಜೀವನಕ್ಕೆ ವಿಜಯ್ ಬೆಂಬಲವಾಗಿ ನಿಂತಿದ್ದಾರೆ. ‘ಬೇಬಿ’ ಸಿನಿಮಾ ಇಂದು (ಜುಲೈ 14) ಬಿಡುಗಡೆ ಆಗಿದೆ. ಬಹುತೇಕ ಎಲ್ಲರಿಂದ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗುರುವಾರ (ಜುಲೈ 13) ರಾತ್ರಿಯೇ ಈ ಸಿನಿಮಾದ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಅದರಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಭಾಗವಹಿಸಿದ್ದಾರೆ.
Advertisement
ಬೇಬಿ ಸಿನಿಮಾದಲ್ಲಿ ಲವ್ ಸ್ಟೋರಿ ಇದೆ. ಅದು ರಶ್ಮಿಕಾಗೆ ಅವರಿಗೆ ತುಂಬಾ ಮೆಚ್ಚಿಕೊಂಡಿದ್ದಾರೆ. ಸಿನಿಮಾದ ಕೆಲವು ದೃಶ್ಯಗಳ ತುಂಬಾ ಎಮೋಷನಲ್ ವಿಚಾರಗಳಿವೆ. ಹಾಗಾಗಿ ಸಿನಿಮಾ ನೋಡುವಾಗ ರಶ್ಮಿಕಾ ಅವರು ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ಸಿನಿಮಾ ನೋಡಿ ಹೊರಬಂದ ಅವರು ಖುಷಿಯಿಂದ ಮಾತನಾಡಿದ್ದಾರೆ. ಸ್ಟಾರ್ ನಟಿಯ ಬೆಂಬಲ ಸಿಕ್ಕಿರುವುದರಿಂದ ‘ಬೇಬಿ’ ಸಿನಿಮಾ ತಂಡಕ್ಕೆ ಸಂತೋಷ ಆಗಿದೆ. ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಸಾಯಿ ರಾಜೇಶ್ ಅವರ ನಿರ್ದೇಶನದಲ್ಲಿ ಬೇಬಿ ಸಿನಿಮಾ ಮೂಡಿಬಂದಿದೆ. ಆನಂದ್ ದೇವರಕೊಂಡ ಮತ್ತು ವೈಷ್ಣವಿ ಚೈತನ್ಯ ಅವರು ಜೋಡಿಯಾಗಿ ಅಭಿನಯಿಸಿದ್ದಾರೆ.
Web Stories