ತೆಲುಗಿನ ನಟ ವಿಜಯ್ ದೇವರಕೊಂಡ (Vijay Devarakonda) ಮೇ 9ರಂದು ತಮ್ಮ 35 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ವಿಜಯ್‌ಗೆ ಆಪ್ತರಾಗಿರುವ ರಶ್ಮಿಕಾ ಮಂದಣ್ಣ (Rashmika Mandanna) ಮಾತ್ರ ಅವರಿಗೆ ಬರ್ತ್‌ಡೇ ವಿಶ್ ಮಾಡದೇ ಇರೋದು ಅಭಿಮಾನಿಗಳಿಗೆ ಅನುಮಾನ ಮೂಡಿಸಿದೆ. ಇದನ್ನೂ ಓದಿ:ಕ್ರಿಕೆಟ್ ಬಾಲ್‌ನಂತೆ ಕಾಣುವ ಡ್ರೆಸ್‌ನಲ್ಲಿ ಜಾನ್ವಿ ಕಪೂರ್ ಮಿಂಚಿಂಗ್
2018ರಲ್ಲಿ ‘ಗೀತಾ ಗೋವಿಂದಂ’ (Geetha Govindam) ಸಿನಿಮಾದ ವೇಳೆ ಇಬ್ಬರಿಗೂ ಪರಿಚಯವಾಗಿತ್ತು. ಇಬ್ಬರೂ ಆತ್ಮೀಯತೆಯಿಂದ ಇದ್ದಾರೆ. ವಿಜಯ್ ಕುಟುಂಬದ ಜೊತೆ ರಶ್ಮಿಕಾ ಕೂಡ ಪ್ರವಾಸದಲ್ಲಿ ಭಾಗಿಯಾಗಿದ್ದ ಫೋಟೋ ಹಿಂದೊಮ್ಮೆ ವೈರಲ್ ಆಗಿತ್ತು. ಇತ್ತೀಚೆಗೆ ರಶ್ಮಿಕಾ ಹುಟ್ಟುಹಬ್ಬದಂದು ವಿಜಯ್ ದೇವರಕೊಂಡ ಜೊತೆ ಪ್ರವಾಸದಲ್ಲಿದ್ದರು ಎನ್ನಲಾದ ಫೋಟೋವೊಂದು ವೈರಲ್ ಆಗಿತ್ತು. ಇಷ್ಟೆಲ್ಲಾ ಆತ್ಮೀಯತೇ ಇದ್ರೂ ಕೂಡ ಇದೀಗ ವಿಜಯ್ ಬರ್ತ್‌ಡೇ ರಶ್ಮಿಕಾ ವಿಶ್ ಮಾಡದೇ ಇರುವುದು ಫ್ಯಾನ್ಸ್‌ಗೆ ಅಚ್ಚರಿಯ ಜೊತೆಗೆ ಅನುಮಾನ ಮೂಡಿಸಿದೆ. ವಿಜಯ್‌ಗೆ ಯಾಕೆ ವಿಶ್ ಮಾಡಲಿಲ್ಲ ಎಂದು ಅಭಿಮಾನಿಗಳು ನಟಿಗೆ ಕಾರಣ ಕೇಳ್ತಿದ್ದಾರೆ. ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ಮೇಕಿಂಗ್ ವಿಡಿಯೋ ಔಟ್
ಅಂದಹಾಗೆ, ಇದೀಗ ವಿಜಯ್ ಹೊಸ ಸಿನಿಮಾದ ಬಗ್ಗೆ ಅಪ್‌ಡೇಟ್ ಸಿಕ್ಕಿದೆ. ನಿರ್ಮಾಪಕ ದಿಲ್ ರಾಜು ಜೊತೆ ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಹಾಗೆಯೇ ‘ಶ್ಯಾಮ್ ಸಿಂಗ್ ರಾಯ್’ ಚಿತ್ರದ ಡೈರೆಕ್ಟರ್ ರಾಹುಲ್ ಜೊತೆ ಹೊಸ ಚಿತ್ರಕ್ಕಾಗಿ ವಿಜಯ್ ಕೈಜೋಡಿಸಿದ್ದಾರೆ.
ರಶ್ಮಿಕಾ ಮಂದಣ್ಣ ಇದೀಗ ಸಲ್ಮಾನ್ ಖಾನ್‌ಗೆ (Salman Khan) ‘ಸಿಖಂದರ್’ (Sikandar Film) ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಪುಷ್ಪ 2, ರೈನ್‌ಬೋ, ಅನಿಮಲ್ ಪಾರ್ಕ್ (Animal Park) ಸೇರಿದಂತೆ ಹಲವು ಚಿತ್ರಗಳು ಅವರ ಕೈಯಲ್ಲಿವೆ.