ಟಾಲಿವುಡ್ (Tollywood) ನಟಿ, ನಿರೂಪಕಿ ಅನಸೂಯಾ (Anasuya) ಅವರು ಸದಾ ಒಂದಲ್ಲಾ ಒಂದು ವಿಚಾರವಾಗಿ ಸದ್ದು ಮಾಡುತ್ತಲೇ ಇರುತ್ತಾರೆ. ಸಿನಿಮಾ ವಿಚಾರಕ್ಕಿಂತ ಇತರೆ ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಮತ್ತೆ ಬೋಲ್ಡ್ ಫೋಟೋ ವಿಷ್ಯವಾಗಿ ಸೌಂಡ್ ಮಾಡ್ತಿದ್ದಾರೆ. ನಟಿಯ ನಯಾ ಫೋಟೋಗೆ ನೆಟ್ಟಿಗರಿಂದ ಕಾಮೆಂಟ್ಸ್ ಹರಿದುಬರುತ್ತಿದೆ. ಈ ಅವತಾರ ನಿಮಗೆ ಬೇಕಾ? ಅಂತಾ ಪಾಠ ಮಾಡ್ತಿದ್ದಾರೆ.
‘ಪುಷ್ಪ’ (Pushpa) ನಟಿ ಅನಸೂಯಾ ಅದ್ಯಾವಾಗ ವಿಜಯ್ ದೇವರಕೊಂಡಗೆ ಕ್ಲಾಸ್ ತೆಗೆದುಕೊಳ್ಳುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ್ರೋ ಅಂದಿನಿಂದ ಅವರು ಏನೇ ಮಾಡಿದ್ರು ಸುದ್ದಿಯಾಗುತ್ತಿದ್ದಾರೆ. ಕಳೆದ ಬಾರಿ ಪತಿ ಪ್ರವಾಸಕ್ಕೆ ತೆರಳಿದ್ದ ನಟಿ ಕೊಂಚ ಫೋಟೋ ಶೇರ್ ಮಾಡಿದ್ದಕ್ಕೆ ನೆಟ್ಟಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದರು. ಇದನ್ನೂ ಓದಿ:ರಿಷಬ್ ನಿರ್ಮಾಣದ ‘ಶಿವಮ್ಮ’ನಿಗೆ ಮತ್ತೆ ಅಂತಾರಾಷ್ಟ್ರೀಯ ಪ್ರಶಸ್ತಿ
ಈ ಬೆನ್ನಲ್ಲೇ ಗಾಸಿಪ್ ಪ್ರಿಯರಿಗೆ ಆಹಾರವಾಗುವಂತಹ ಮತ್ತೊಂದು ಫೋಟೋವನ್ನ ಶೇರ್ ಮಾಡಿರೋದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇತ್ತೀಚಿಗೆ ಅನಸೂಯಾ ಅಮೆರಿಕಾಗೆ ಹೋಗಿದ್ದರು. ಆಗ ಕೈಗಳನ್ನು ಮೇಲಕ್ಕೆ ಎತ್ತಿ ಹೊಟ್ಟೆಯ ಭಾಗ ಕಾಣುವಂತೆ ಫೋಟೋಗೆ ಪೋಸ್ ಕೊಟ್ಟಿದ್ದರು. ಈ ಫೋಟೋ ಅವರು ಅಪ್‌ಲೋಡ್ ಮಾಡ್ತಿದ್ದಂತೆ ನೆಗೆಟಿವ್ ಕಾಮೆಂಟ್ ಹರಿದು ಬರುತ್ತಿದೆ.
ನಟಿ ಕೈಗಳನ್ನು ಆಕಾಶದತ್ತ ಎತ್ತಿ ಗಾಗಲ್ಸ್ ಧರಿಸಿಕೊಂಡು ಭರ್ಜರಿಯಾಗಿ ಪೋಸ್ ಕೊಟ್ಟಿದ್ದಾರೆ. ಬ್ಲೂ ರಿಪ್ಡ್ ಶಾರ್ಟ್ಸ್, ಟಾಪ್ ಧರಿಸಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಸಂಸ್ಕಾರದ ಪಾಠ ಮಾಡಿದ್ದಾರೆ. ಈ ವಯಸ್ಸಿನಲ್ಲಿ ಈ ಶೋಕಿ ಎಲ್ಲಾ ಬೇಕಾ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಇನ್ನೂ 2021ರಲ್ಲಿ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ (Allu Arjun) ಎದುರಾಳಿಯಾಗಿ ನಟಿಸಿದ ಮೇಲೆ ಅನಸೂಯಾಗೆ, ನಟನೆಯಲ್ಲಿ ಬಿಗ್ ಬ್ರೇಕ್ ಸಿಕ್ಕಿದೆ. ನಿರೂಪಣೆ ಜೊತೆ ಸಾಕಷ್ಟು ಸಿನಿಮಾಗಳಿಗೆ ಬಂಪರ್ ಆಫರ್ ಗಳಿಸುತ್ತಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]