Pushpa ನಟಿ ಅನಸೂಯಾಗೆ ಅನಾರೋಗ್ಯ- ಆಗಿದ್ದೇನು?

Public TV
1 Min Read
anasuya 1

ಟಾಲಿವುಡ್ ನಟಿ ಅನಸೂಯಾ ಭಾರದ್ವಾಜ್ (Anasuya Bharadwaj) ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ವೈರಲ್ ಫಿವರ್ ಬಳಲುತ್ತಿರೋದಾಗಿ ನಟಿ ಪೋಸ್ಟ್ ಮಾಡಿದ್ದಾರೆ. ಪುಷ್ಪ ನಟಿಯ ಆರೋಗ್ಯದ ಬಗೆಗಿನ ಟ್ವೀಟ್ ಈಗ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ಗೃಹಪ್ರವೇಶದ ಫೋಟೋ ಹಂಚಿಕೊಂಡ ‘ನಾಗಿಣಿ 2’ ನಟಿ

Anasuya Bhardwaj 3

ಪುಷ್ಪ (Pushpa) ನಟಿ ಅನಸೂಯಾ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದಾರೆ. ಇದಕ್ಕೆ ಕಾರಣವಿದೆ. ಕಳೆದ ಐದು ದಿನಗಳಿಂದ ವೈರಲ್ ಫಿವರ್‌ನಿಂದ ಬಳಲುತ್ತಿದ್ದಾರೆ. ಅವರು ಈ ಬಗ್ಗೆ ತಮ್ಮ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ನಾನು ಐದು ದಿನಗಳಿಂದ ಜ್ವರದಿಂದ ಬಳಲುತ್ತಿದ್ದೇನೆ ಎಂದಿದ್ದಾರೆ.

ಹಾಗಾಗಿಯೇ ಸೋಷಿಯಲ್ ಮೀಡಿಯಾದಿಂದ ದೂರವಿದ್ದರೂ ಈ ಐದು ದಿನಗಳಲ್ಲಿ ಸಾಕಷ್ಟು ವಿಷಯಗಳನ್ನು ಅರಿತುಕೊಂಡೆ ಎಂದಿದ್ದಾರೆ. ಅವರಲ್ಲಿ ಕೆಲವರು ಕ್ರೂರವಾಗಿ ವರ್ತಿಸುತ್ತಿದ್ದಾರೆ, ಸಹಜೀವಿಗಳ ಬಗ್ಗೆ ಸಹಾನುಭೂತಿ ಇಲ್ಲ. ಕಿರುಕುಳ ನೀಡುತ್ತಿದ್ದಾರೆ ಎಂದಿದ್ದಾರೆ. ಸದ್ಯ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಮೂಲಕ ಟ್ರೋಲರ್ಸ್‌ ಬಗ್ಗೆ ನಟಿ ಅಸಮಾಧಾನ ಹೊರ ಹಾಕಿದ್ದಾರೆ.

‘ಪುಷ್ಪ’ ಸಕ್ಸಸ್ ನಂತರ ಅಲ್ಲು ಅರ್ಜುನ್(Allu Arjun), ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ನಲ್ಲಿಯೂ ಅನಸೂಯಾ ನಟಿಸುತ್ತಿದ್ದಾರೆ. ಅವರ ಪಾತ್ರಕ್ಕೂ ಚಿತ್ರದಲ್ಲಿ ಪ್ರಾಮುಖ್ಯತೆ ಇದೆ.

Share This Article