ಅಲ್ಲು ಅರ್ಜುನ್ (Allu Arjun) ನಟನೆಯ `ಪುಷ್ಪ ದಿ ರೈಸ್’ ಹಾಗೂ ‘ಪುಷ್ಪ ದಿ ರೂಲ್’ ಸರಣಿ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದ ದಕ್ಷಿಣ ಭಾರತದ ಹೆಸರಾಂತ ಸೀಕ್ವೆಲ್ ಸಿನಿಮಾ. ಈ ಹಿಟ್ ಸರಣಿ ಮುಂದುವರೆಯುವ ಸುಳಿವನ್ನ ಎರಡನೇ ಭಾಗದ ಅಂತ್ಯದಲ್ಲಿ ಚಿತ್ರತಂಡ ತೋರಿಸಿತ್ತು. ಆದರೆ ಯಾವಾಗ ಪುಷ್ಪ 3 ಬರುತ್ತೆ..? ಸ್ಕ್ರೀಪ್ಟ್ ಪ್ರಗತಿಯಲ್ಲಿದೆಯಾ ಇಲ್ವಾ? ಅಥವಾ ಚಮಕ್ ಕೊಟ್ಟಿರೋದಾ..? ಹೀಗೆ ಪುಷ್ಪ ಅಭಿಮಾನಿಗಳ ಯಾವುದೇ ಪ್ರಶ್ನೆಗೂ ಪುಷ್ಪ ರಿಲೀಸ್ ಬಳಿಕ ಚಿತ್ರತಂಡ ಉತ್ತರಿಸಿರಲಿಲ್ಲ. ಆದರೆ ಮೊದಲ ಬಾರಿಗೆ ಪುಷ್ಪ 3 ಸಿನಿಮಾ ಬಗ್ಗೆ ಹಾಗೂ ರೆಡಿಯಾಗುತ್ತಿರುವ ಸ್ಕ್ರೀಪ್ಟ್ ಬಗ್ಗೆ ಅಲ್ಲು ಅರ್ಜುನ್ ಮಾತನಾಡಿದ್ದಾರೆ.
ಪ್ರಸಕ್ತ ಸಾಲಿನ ಸೈಮಾ ಅತ್ಯುತ್ತಮ ತೆಲುಗು ನಟ ಪ್ರಶಸ್ತಿ ಅಲ್ಲು ಅರ್ಜುನ್‌ಗೆ ಲಭಿಸಿದ್ದು, ದುಬೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ‍್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ವೇಳೆ ವೇದಿಕೆಯಲ್ಲೇ `ಪುಷ್ಪ 3′ ಖಂಡಿತ ಬರುತ್ತೆ ಎಂದಿದ್ದಾರೆ ಅಲ್ಲು ಅರ್ಜುನ್. ಈ ಮೂಲಕ ಪುಷ್ಪರಾಜ್ ಅಭಿಮಾನಿಗಳಿಗೆ ಬಿಸಿ ಬಿಸಿ ಸುದ್ದಿ ಪುಷ್ಪ ಕಡೆಯಿಂದಲೇ ಬಂದಿದೆ. ಈ ವೇಳೆ ಚಿತ್ರದ ನರ‍್ದೇಶಕ ಸುಕುಮಾರ್ ಉಪಸ್ಥಿತರಿದ್ದರು. ಇಬ್ಬರೂ ಒಟ್ಟಿಗೆ ಪುಷ್ಪ3 ತಯಾರಾಗ್ತಿರೋ ಬಗ್ಗೆ ಕನ್ಫರ್ಮೇಷನ್ ಕೊಟ್ಟಿದ್ದಾರೆ. `ಪುಷ್ಪ 3′ ಖಂಡಿತವಾಗಲೂ ಬರುತ್ತೆ. ಸ್ಕ್ರೀಪ್ಟ್ ಪ್ರಗತಿಯಲ್ಲಿದೆ ಎಂದು ಅಲ್ಲು ಅರ್ಜುನ್ ಪುಷ್ಪ 3ಗೆ ಅಧಿಕೃತ ಮುದ್ರೆ ಒತ್ತಿದ್ದಾರೆ. ಅಲ್ಲಿಗೆ ಪಾರ್ಟಿ ಇಲ್ವಾ ಪುಷ್ಪ ಎಂದು ಕೇಳುತ್ತಿದ್ದ ಪುಷ್ಪನ ಫ್ಯಾನ್ಸ್‌ಗೆ ಖುಷಿಯೋ ಖುಷಿ.