ಕನ್ನಡದ ನಟಿ ಶ್ರೀಲೀಲಾ (Sreeleela) ಸೌತ್‌ನಲ್ಲಿ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ‘ಕಿಸ್ಸಿಕ್’ (Kissik) ಹೀರೋಯಿನ್ ಆಗಿ ಮಿಂಚಿದ್ಮೇಲೆ ಬಾಲಿವುಡ್‌ನಿಂದಲೂ ಬುಲಾವ್ ಬಂದಿದೆ. ನಟ ಕಾರ್ತಿಕ್ ಆರ್ಯನ್ ನಟನೆಯ ಹೊಸ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿ ಎಂದು ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Advertisement
ಕರಣ್ ಜೋಹರ್ (Karan Johar) ನಿರ್ಮಾಣದ ಹೊಸ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ (Karthik Aryan) ಪ್ರಮುಖ ಪಾತ್ರಕ್ಕೆ ಆಯ್ಕೆಯಾಗಿದ್ದು, ಅವರಿಗೆ ಜೋಡಿಯಾಗಿ ನಟಿಸಲು ಶ್ರೀಲೀಲಾರನ್ನು ಚಿತ್ರತಂಡ ಸಂಪರ್ಕಿಸಿದೆ ಎನ್ನಲಾಗಿದೆ. ಹೀಗೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಹರಿದಾಡುತ್ತಿದೆ. ಈ ವಿಚಾರ ನಿಜನಾ? ಎಂಬುದನ್ನು ಚಿತ್ರತಂಡ ಅಧಿಕೃತವಾಗಿ ತಿಳಿಸುವವರೆಗೂ ಕಾಯಬೇಕಿದೆ.
Advertisement
Advertisement
ಇನ್ನೂ ಬಾಲಿವುಡ್‌ನಲ್ಲಿ ಕಾರ್ತಿಕ್ ಆರ್ಯನ್ ನಟಿಸಿದ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಹಿಟ್ ಆಗಿವೆ. ಇನ್ನೂ ಶ್ರೀಲೀಲಾ ಮೇಲೆ ಫ್ಯಾನ್ಸ್‌ಗೆ ಭಾರೀ ಕ್ರೇಜ್ ಇದೆ. ಹೀಗಾಗಿ ಹಿಂದಿ ಚಿತ್ರದಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದ್ರೆ ಕಾಂಬಿನೇಷನ್ ಚೆನ್ನಾಗಿರುತ್ತದೆ ಎಂಬುದು ಪ್ರೇಕ್ಷಕರ ಲೆಕ್ಕಾಚಾರ. ಇದನ್ನೂ ಓದಿ:‘ಸರಿಗಮಪ’ ಕಾರ್ಯಕ್ರಮದ ಜ್ಯೂರಿ ಎಸ್.ಬಾಲಿ ನಿಧನ
Advertisement
ಅಂದಹಾಗೆ, ಶ್ರೀಲೀಲಾ ಲಿಸ್ಟ್‌ನಲ್ಲಿ 5ಕ್ಕೂ ಹೆಚ್ಚು ಸಿನಿಮಾಗಳಿವೆ. ನಿತಿನ್ ಜೊತೆಗಿನ ರಾಬಿನ್‌ಹುಡ್ ಚಿತ್ರ, ಪವನ್ ಕಲ್ಯಾಣ್ ಜೊತೆ ಉಸ್ತಾದ್ ಭಗತ್ ಸಿಂಗ್, ಧಮಾಕ ಬಳಿಕ ರವಿತೇಜ ಜೊತೆ 2ನೇ ಬಾರಿ ಹೊಸ ಚಿತ್ರಕ್ಕೆ ನಟಿ ಓಕೆ ಎಂದಿದ್ದಾರೆ. ‘ಮಾಸ್ ಜಾತ್ರ’ ಎಂದು ಟೈಟಲ್ ಇಡಲಾಗಿದೆ.
ಶಿವಕಾರ್ತಿಕೇಯನ್ ನಟನೆಯ 25ನೇ ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗಿದ್ದಾರೆ. ಈ ಮೂಲಕ ತಮಿಳಿಗೆ ನಟಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸುಧಾ ಕೊಂಗರ ನಿರ್ದೇಶನ ಮಾಡುತ್ತಿದ್ದಾರೆ. ಇದರೊಂದಿಗೆ ಜನಾರ್ಧನ್ ರೆಡ್ಡಿ ಪುತ್ರನ ಜೊತೆ ಕನ್ನಡದ ಸಿನಿಮಾ ಮಾಡುತ್ತಿದ್ದಾರೆ.
ಇನ್ನೂ ಶ್ರೀಲೀಲಾ ನಟನೆಯ ಮೊದಲ ಬಾಲಿವುಡ್ ಚಿತ್ರವನ್ನು ಸೈಫ್ ಪುತ್ರ ಇಬ್ರಾಹಿಂ ಅಲಿ ಖಾನ್ ಜೊತೆ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಇದಕ್ಕೆ ‘ದಿಲ್ಲರ್’ ಎಂದು ಟೈಟಲ್ ಇಡಲಾಗಿದೆಯಂತೆ. ಸದ್ಯ ನಟಿಯ ಸಿನಿಮಾ ಲಿಸ್ಟ್ ಕೇಳಿ ಫ್ಯಾನ್ಸ್ ಖುಷಿಪಡುತ್ತಿದ್ದಾರೆ.