ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ 2’ (Pushpa 2) ಡಿ.6ರಂದು ರಿಲೀಸ್ ಆಗಲಿದೆ. ಸಿನಿಮಾ ಬಿಡುಗಡೆ ದಿನಗಣನೆ ಶುರುವಾಗಿದೆ. ಹೀಗಿರುವಾಗ ಚಿತ್ರದ ಕುರಿತು ಇಂಟರೆಸ್ಟಿಂಗ್ ಮಾಹಿತಿಯೊಂದು ಸಿಕ್ಕಿದೆ. ಶ್ರದ್ಧಾ ಕಪೂರ್ (Shraddha Kapoor) ಈ ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
‘ಪುಷ್ಪ 1’ರಲ್ಲಿ ಸಮಂತಾ ಡ್ಯಾನ್ಸ್ ಮಾಡಿದ್ದ ಹಾಡು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಚಿತ್ರದ ಗೆಲುವಿಗೆ ಕಥೆಯ ಜೊತೆ ಸಮಂತಾ ಡ್ಯಾನ್ಸ್ ಪ್ಲಸ್ ಆಗಿತ್ತು. ಹಾಗಾಗಿಯೇ ಪುಷ್ಪ 2ರಲ್ಲೂ ಇದನ್ನೇ ಫಾರ್ಮುಲಾ ಬಳಸುತ್ತಿದ್ದಾರೆ. ಈ ಹಿಂದೆ ಐಟಂ ಹಾಡಿಗೆ ಹೆಜ್ಜೆ ಹಾಕಲು ಜಾನ್ವಿ ಕಪೂರ್, ತೃಪ್ತಿ ದಿಮ್ರಿ, ಶ್ರೀಲೀಲಾ ಹೀಗೆ ಅನೇಕರ ಹೆಸರು ಸದ್ದು ಮಾಡಿತ್ತು. ಆದರೆ ಕೂಡ ಫೈನಲ್ ಆಗಿರಲಿಲ್ಲ. ಇದನ್ನೂ ಓದಿ:‘ಮನಸಾರೆ ನಿನ್ನ’ ಎನ್ನುತ್ತಾ ರೊಮ್ಯಾಂಟಿಕ್ ಮೂಡ್‌ಗೆ ಜಾರಿದ ನಿವೇದಿತಾ ಗೌಡ
ಇದೀಗ ‘ಸ್ತ್ರೀ 2’ (Stree 2) ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ಶ್ರದ್ಧಾಗೆ (Shraddha Kapoor) ಚಿತ್ರತಂಡ ಮಣೆ ಹಾಕಿದೆ. ಚಿತ್ರದಲ್ಲಿ ನಟಿಗೆ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಲು ಕೇಳಲಾಗಿದೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ. ಆದರೆ ಇದು ಅದೆಷ್ಟರ ಮಟ್ಟಿಗೆ ನಿಜ? ಕಾದುನೋಡಬೇಕಿದೆ. ಸದ್ಯ ‘ಪುಷ್ಪ 2’ ಚಿತ್ರದ ಜೊತೆ ಶ್ರದ್ಧಾ ಹೆಸರು ತಳುಕು ಹಾಕಿಕೊಂಡು ವಿಚಾರ ಕೇಳಿಯೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.