ಕನ್ನಡದ ನಟ ತಾರಕ್ ಪೊನ್ನಪ್ಪ (Tarak Ponnappa) ‘ಪುಷ್ಪ 2’ (Pushpa 2) ಚಿತ್ರದ ಸಕ್ಸಸ್ ಬಳಿಕ ಸಾಲು ಸಾಲು ಸಿನಿಮಾ ಆಫರ್ಸ್ ಅರಸಿ ಬರುತ್ತಿದೆ. ಅಲ್ಲು ಅರ್ಜುನ್ ಮುಂದೆ ತಾರಕ್ ತೊಡೆ ತಟ್ಟಿ ಗೆದ್ದು ಬೀಗಿದ್ದಾರೆ. ವಿಲನ್ ಆಗಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಇದರ ನಡುವೆ ಪ್ರಭಾಸ್ ಜೊತೆ ತೆರೆ ಹಂಚಿಕೊಳ್ಳುವ ಆಫರ್ ಅವರಿಗೆ ಸಿಕ್ಕಿದೆ. ಇದನ್ನೂ ಓದಿ:1000 ಕೋಟಿ ದಾಟಿದ ‘ಪುಷ್ಪ 2’- ಗಲ್ಲಾಪೆಟ್ಟಿಗೆಯಲ್ಲಿ ಅಲ್ಲು ಅರ್ಜುನ್ ಸಿನಿಮಾ ರಣಕೇಕೆ
Advertisement
1000 ಕೋಟಿ ರೂ. ಕಲೆಕ್ಷನ್ ಮಾಡಿ ಗೆದ್ದಿರುವ ‘ಪುಷ್ಪ 2’ ಸಿನಿಮಾದಲ್ಲಿ ಕನ್ನಡ ಪ್ರತಿಭೆ ಅಬ್ಬರ ಜೋರಾಗಿದೆ. ರಶ್ಮಿಕಾ, ಶ್ರೀಲೀಲಾ ಜೊತೆ ತಾರಕ್ ಪೊನ್ನಪ್ಪ ಕೂಡ ಶೈನ್ ಆಗಿದ್ದಾರೆ. ಈ ಬೆನ್ಲಲ್ಲೇ ಅವರಿಗೆ ಡಾರ್ಲಿಂಗ್ ಪ್ರಭಾಸ್ (Prabhas) ಜೊತೆ ನಟಿಸುವ ಚಾನ್ಸ್ ಸಿಕ್ಕಿದೆ. ‘ಫೌಜಿ’ ಎಂಬ ಚಿತ್ರದಲ್ಲಿ ಕನ್ನಡದ ನಟ ಕೂಡ ಸಾಥ್ ನೀಡಲಿದ್ದಾರೆ.
Advertisement
Advertisement
ಈಗಾಗಲೇ ವಿಲನ್ ಪಾತ್ರಗಳಲ್ಲಿ ಗೆದ್ದಿರುವ ನಟ ಪ್ರಭಾಸ್ ಸಿನಿಮಾದಲ್ಲಿ ಪಾಸಿಟಿವ್ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಜೊತೆಗೆ ಈ ಪಾತ್ರ ವಿಭಿನ್ನವಾಗಿದ್ದು, ನಟನೆಗೆ ಸ್ಕೋಪ್ ಇರುವ ಪಾತ್ರ ಇದಾಗಿದೆ. ಈ ಚಿತ್ರವನ್ನು ‘ಸೀತಾ ರಾಮಂ’ ಡೈರೆಕ್ಟರ್ ಹನು ರಾಘವಪುಡಿ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯದಲ್ಲೇ ತಾರಕ್ ಭಾಗದ ಚಿತ್ರೀಕರಣ ಶುರುವಾಗಲಿದೆ.
Advertisement
ಅಂದಹಾಗೆ, ಕೆಜಿಎಫ್, ಗಿಲ್ಕಿ, ಜ್ಯೂ.ಎನ್‌ಟಿಆಎರ್ ಜೊತೆ ‘ದೇವರ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ತಾರಕ್ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಆ್ಯಕ್ಟೀವ್ ಆಗಿದ್ದಾರೆ.