ಕನ್ನಡದ ನಟಿ ಶ್ರೀಲೀಲಾ (Sreeleela) ತೆಲುಗಿನ ಟಾಪ್ ನಟಿಯರಲ್ಲಿ ಒಬ್ಬರಾಗಿ ಸದ್ದು ಮಾಡುತ್ತಿದ್ದಾರೆ. ‘ಪುಷ್ಪ 2’ (Pushpa 2) ಸಿನಿಮಾದಲ್ಲಿ ಸೊಂಟ ಬಳುಕಿಸಿದ ಮೇಲೆ ಬೇಡಿಕೆ ಹೆಚ್ಚಾಗಿದೆ. ಸದ್ಯ ತೆಲುಗಿನ ಸ್ಟಾರ್ ನಟ ಚಿರಂಜೀವಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:‘ಸಿಕಂದರ್’ ಸಿನಿಮಾ ರಿಮೇಕ್ ಎಂದವರಿಗೆ ತಕ್ಕ ಉತ್ತರ ಕೊಟ್ಟ ನಿರ್ದೇಶಕ
Advertisement
ಮೆಗಾಸ್ಟಾರ್ ಚಿರಂಜೀವಿ (Chiranjeevi) ನಟನೆಯ ‘ವಿಶ್ವಂಭರ’ ಸಿನಿಮಾದ ಸೆಟ್‌ಗೆ ಶ್ರೀಲೀಲಾ ಭೇಟಿ ನೀಡಿದ್ದಾರೆ. ಈ ವೇಳೆ, ಅವರಿಗೆ ದುರ್ಗಾ ದೇವಿಯ ಮುಖವಿರುವ ಬೆಳ್ಳಿ ಶಂಖವನ್ನು ಗಿಫ್ಟ್ ಆಗಿ ಚಿರಂಜೀವಿ ನೀಡಿದ್ದಾರೆ. ಈ ಬೆನ್ನಲ್ಲೇ ಶ್ರೀಲೀಲಾ ಬಗ್ಗೆ ಗುಸು ಗುಸು ಶುರುವಾಗಿದೆ. ಶ್ರೀಲೀಲಾ ಅವರು ‘ವಿಶ್ವಂಭರ’ ಚಿತ್ರದಲ್ಲಿ ನಟಿಸುತ್ತಿದ್ದಾರಾ? ಅಥವಾ ಸ್ಪೆಷಲ್ ಹಾಡಿಗೆ ಏನಾದರೂ ಹೆಜ್ಜೆ ಹಾಕಲಿದ್ದಾರಾ? ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.
Advertisement
Advertisement
ಈಗಾಗಲೇ ಅಲ್ಲು ಅರ್ಜುನ್ ಜೊತೆ ‘ಪುಷ್ಪ 2’ ಸಿನಿಮಾದಲ್ಲಿ ಸೊಂಟ ಬಳುಕಿಸಿ ಸೈ ಎನಿಸಿಕೊಂಡಿದ್ದಾರೆ. ‘ವಿಶ್ವಂಭರ’ ಚಿತ್ರದ ಸೆಟ್‌ನಲ್ಲಿ ಶ್ರೀಲೀಲಾ ಕಾಣಿಸಿಕೊಂಡಿರೋದು ಹಾಟ್ ಟಾಪಿಕ್ ಆಗಿದೆ. ಇನ್ನೂ ಅವರು ಈ ಸಿನಿಮಾದ ಭಾಗವಾಗಿದ್ದಾರಾ? ಎಂಬುದನ್ನು ಚಿತ್ರತಂಡ ತಿಳಿಸುವವರೆಗೂ ಕಾದುನೋಡಬೇಕಿದೆ.
Advertisement
ಇನ್ನೂ ನಿತಿನ್ ಜೊತೆ ‘ರಾಬಿನ್‌ಹುಡ್’, ಪವನ್ ಕಲ್ಯಾಣ್ ಜೊತೆ ‘ಉಸ್ತಾದ್ ಭಗತ್ ಸಿಂಗ್’, ರವಿತೇಜ ಜೊತೆ ‘ಮಾಸ್ ಜಾತ್ರಾ’, ಬಾಲಿವುಡ್‌ನಲ್ಲಿ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂಗೆ ನಾಯಕಿಯಾಗಿ ಹೊಸ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ಶ್ರೀಲೀಲಾ ಕೈಯಲ್ಲಿವೆ.