‘ಪುಷ್ಪ 2′ (Pushpa 2) ಸಿನಿಮಾದಲ್ಲಿ ಸೊಂಟ ಬಳುಕಿಸಿದ ಕನ್ನಡತಿ ಶ್ರೀಲೀಲಾಗೆ (Sreeleela) ಬೇಡಿಕೆ ಹೆಚ್ಚಾಗಿದೆ. ಸಿನಿಮಾ ಮಾತ್ರವಲ್ಲದೇ ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇನ್ಸ್ಟಾಗ್ರಾಂನಲ್ಲಿ ನಟಿ ಸಂಚಲನ ಮೂಡಿಸಿದ್ದಾರೆ. ಇದು ಫ್ಯಾನ್ಸ್‌ಗೆ ಖುಷಿಯ ಜೊತೆ ಅಚ್ಚರಿ ಮೂಡಿಸಿದೆ.
ಅಲ್ಲು ಅರ್ಜುನ್ ಜೊತೆ ‘ಕಿಸ್ಸಿಕ್’ ಎಂದು ಶ್ರೀಲೀಲಾ ಹೆಜ್ಜೆ ಹಾಕಿದ್ಮೇಲೆ ಡ್ಯಾನ್ಸಿಂಗ್ ಕ್ವೀನ್ ಎಂದೇ ಟಾಲಿವುಡ್‌ನಲ್ಲಿ ಟಾಕ್ ಆಗಿದ್ದಾರೆ. ಸೌತ್ ಮತ್ತು ಬಾಲಿವುಡ್‌ನಲ್ಲಿ ನಟಿಗೆ ಬೇಡಿಕೆ ಹೆಚ್ಚಾಗಿದೆ. ಕಿಸ್ಸಿಕ್ ಸಾಂಗ್‌ನ ಕಿಕ್‌ನಿಂದ ಇನ್ಸ್ಟಾಗ್ರಾಂನಲ್ಲಿ ಎರಡೇ ತಿಂಗಳಲ್ಲಿ 9 ಮಿಲಿಯನ್ ಇದ್ದ ಫಾಲೋವರ್ಸ್ ಈಗ 11 ಮಿಲಿಯನ್‌ಗೆ ಏರಿಕೆ ಆಗಿದೆ. ಇದನ್ನೂ ಓದಿ:ನಮ್ಮಿಬ್ಬರನ್ನು ದೂರ ಮಾಡಲು ಸಾಧ್ಯವೇ ಇಲ್ಲ: ಗೋವಿಂದ ಪತ್ನಿ ಸುನೀತಾ ಸ್ಪಷ್ಟನೆ
2024 ಸೆಪ್ಟಂಬರ್‌ನಲ್ಲಿ ನಟಿ 6 ಮಿಲಿಯನ್ (60 ಲಕ್ಷ) ಫಾಲೋವರ್ಸ್ ಹೊಂದಿದ್ದರು. ಡಿಸೆಂಬರ್ 2024ರಲ್ಲಿ 9 ಮಿಲಿಯನ್ (90 ಲಕ್ಷ) ಫಾಲೋವರ್ಸ್ ಇತ್ತು. ಎರಡೇ ತಿಂಗಳಲ್ಲಿ ಇದೀಗ 11 ಮಿಲಿಯನ್ ( 1 ಕೋಟಿ, 10 ಲಕ್ಷ) ಫಾಲೋವರ್ಸ್ ಅನ್ನು ಶ್ರೀಲೀಲಾ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಂದಿದ್ದಾರೆ. ಅಷ್ಟರ ಮಟ್ಟಿಗೆ ಶ್ರೀಲೀಲಾ ಮೇಲಿನ ಕ್ರೇಜ್ ಫ್ಯಾನ್ಸ್‌ಗೆ ಹೆಚ್ಚಾಗಿದೆ.
ಇನ್ನೂ ನಿತಿನ್ ಜೊತೆ ‘ರಾಬಿನ್‌ಹುಡ್’, ಪವನ್ ಕಲ್ಯಾಣ್ ಜೊತೆ ‘ಉಸ್ತಾದ್ ಭಗತ್ ಸಿಂಗ್’, ರವಿತೇಜ ಜೊತೆ ‘ಮಾಸ್ ಜಾತ್ರಾ’, ಬಾಲಿವುಡ್‌ನಲ್ಲಿ ಸೈಫ್ ಅಲಿ ಖಾನ್‌ಗೆ ನಾಯಕಿಯಾಗಿ ಹೊಸ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ಶ್ರೀಲೀಲಾ ಕೈಯಲ್ಲಿವೆ.