ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸದ್ಯ ‘ಛಾವಾ’ (Chhaava) ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ತಾವು ರಿಲೇಷನ್‌ಶಿಪ್‌ನಲ್ಲಿ ಸುಳಿವು ನೀಡಿದ್ದಾರೆ. ನಟಿ ಕೊಟ್ಟಿರುವ ಹಿಂಟ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಇದನ್ನೂ ಓದಿ:ಯಶ್ ನನ್ನ ಗೆಳೆಯ – ದುಬೈ ಅಭಿಮಾನಿಗಳ ಮುಂದೆ ಶಾರುಖ್ ಖಾನ್ ಮಾತು
ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ ಮಾತನಾಡಿ, ನನಗೆ ನನ್ನ ಮನೆಯೇ ಖುಷಿಯ ಸ್ಥಳ. ಯಶಸ್ಸು ಇಂದು ಬಂದು ಮುಂದೊಂದು ದಿನ ಹೋಗಬಹುದು. ಅದು ಎಂದಿಗೂ ಶಾಶ್ವತವಲ್ಲ. ಎಷ್ಟೇ ಸಿಕ್ಕರೂ ಕೂಡ ನಾನು ನಟಿ ಮಾತ್ರವಲ್ಲದೇ ಮಗಳು, ಸಹೋದರಿ, ಓರ್ವ ಪಾರ್ಟ್ನರ್ ಕೂಡ ಹೌದು ಎಂದು ಹೇಳಿದ್ದಾರೆ. ಎಲ್ಲೂ ಕೂಡ ಸಂಗಾತಿ ಯಾರು ಎಂದು ಹೆಸರನ್ನು ಅವರು ರಿವೀಲ್ ಮಾಡಿಲ್ಲ. ಪಾರ್ಟ್ನರ್ ಎಂದು ಪದ ಬಳಸಿದ ರಶ್ಮಿಕಾ, ತಾವು ರಿಲೇಷನ್‌ಶಿಪ್‌ನಲ್ಲಿರೋದಾಗಿ ಅಧಿಕೃತಪಡಿಸಿದರೇ? ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.
ಇನ್ನೂ ಇನ್ನೂ ಸಾಕಷ್ಟು ವರ್ಷಗಳಿಂದ ರಶ್ಮಿಕಾ ಹೆಸರು ವಿಜಯ್ ದೇವರಕೊಂಡ (Vijay Devarakonda) ಜೊತೆ ತಳುಕು ಹಾಕಿಕೊಂಡಿದೆ. ಆದರೆ ಇದುವರೆಗೂ ಇಬ್ಬರೂ ರಿಲೇಷನ್‌ಶಿಪ್ ಇದ್ದಾರಾ? ಇಲ್ವಾ? ಎಂಬುದರ ಬಗ್ಗೆ ಕ್ಲ್ಯಾರಿಟಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಗುಡ್ ನ್ಯೂಸ್ ಸಿಗುತ್ತಾ? ಎಂದು ಕಾದುನೋಡಬೇಕಿದೆ.
‘ಅನಿಮಲ್’ ಹಾಗೂ ‘ಪುಷ್ಪ 2’ ಸಿನಿಮಾದ ಸಕ್ಸಸ್ ನಂತರ ‘ಛಾವಾ’ ಚಿತ್ರದ ಬಿಡುಗಡೆಗಾಗಿ ಅವರು ಎದುರು ನೋಡುತ್ತಿದ್ದಾರೆ. ಮೊದಲ ಬಾರಿಗೆ ಐತಿಹಾಸಿಕ ಚಿತ್ರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಮಹಾರಾಣಿಯ ಪಾತ್ರಕ್ಕೆ ನಟಿ ಜೀವತುಂಬಿದ್ದಾರೆ. ಛಾವಾ ಇದೇ ಫೆ.14ರಂದು ರಿಲೀಸ್ ಆಗಲಿದೆ.