ಮಾಲಿವುಡ್ (Mollywood) ನಟ ಫಯಾದ್ ಫಾಸಿಲ್‌ಗೆ (Fahadh Faasil) ಇಂದು (ಆಗಸ್ಟ್ 8) ಹುಟ್ಟುಹಬ್ಬದ ಸಂಭ್ರಮವಾಗಿದೆ. ಫಯಾದ್ 41ನೇ ಹುಟ್ಟುಹಬ್ಬದ ಸಂಭ್ರಮಕ್ಕೆ ಪುಷ್ಪ 2 ಟೀಮ್ ಕಡೆಯಿಂದ ಫ್ಯಾನ್ಸ್‌ಗೆ ಸೂಪರ್ ಗಿಫ್ಟ್ ಸಿಕ್ಕಿದೆ. ಪುಷ್ಪರಾಜ್ (Pushparaj) ಎದುರು ಅಬ್ಬರಿಸೋ ಫಯಾದ್ ಅಲಿಯಾಸ್ ಬನ್ವರ್ ಸಿಂಗ್ ಶೆಖಾವತ್ ಅವರ ಪುಷ್ಪ 2 ಸಿನಿಮಾದಲ್ಲಿನ ಲುಕ್ ರಿವೀಲ್ ಆಗಿದೆ. ಈ ಮೂಲಕ ನಟನಿಗೆ ಚಿತ್ರತಂಡ ಶುಭಕೋರಿದೆ.
‘ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಮುಂದೆ ವಿಲನ್ ಆಗಿ ಫಯಾದ್ ಅಬ್ಬರಿಸಿದ್ದರು. ಸುಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಪ್ರತಿಯೊಂದು ಪಾತ್ರಕ್ಕೂ ಸ್ಕೋಪ್ ಕೊಟ್ಟಿದ್ದರು. ಅಷ್ಟರ ಮಟ್ಟಿಗೆ ಸಿನಿಮಾ ತೆರೆಯ ಮೇಲೆ ಕಮಾಲ್ ಮಾಡಿತ್ತು. ಪುಷ್ಪ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಫಹಾದ್ ಫಾಸಿಲ್ ಕಾಣಿಸಿಕೊಂಡಿದ್ದರು. ಪುಷ್ಪರಾಜ್‌ನಿಂದ ಅವಮಾನ ಎದುರಿಸುವ ಬನ್ವರ್ ಸಿಂಗ್ ಶೆಖಾವತ್ ಎಂಬ ಅರಣ್ಯಾಧಿಕಾರಿಯಾಗಿ ಅವರು ನಟಿಸಿದ್ದರು. ಬನ್ವರ್ ಸಿಂಗ್ ಶೆಖಾವತ್ ಅಂದು ಅನುಭವಿಸಿದ ಅವಮಾನಕ್ಕೆ ಸೀಕ್ವೆಲ್‌ನಲ್ಲಿ ಸೇಡು ತೀರಿಸಿಕೊಳ್ಳುತ್ತಾನಾ ಎಂಬುದನ್ನು ಪುಷ್ಪ ಪಾರ್ಟ್ 2ನಲ್ಲಿ ನೋಡಬೇಕಿದೆ. ಹೊಸ ಪೋಸ್ಟರ್‌ನಲ್ಲಿ ಇದೇ ಅಂಶವನ್ನು ಹೈಲೈಟ್ ಮಾಡಲಾಗಿದೆ.
ಫಹಾದ್ ಫಾಸಿಲ್ ಅವರಿಗೆ ಪುಷ್ಪ 2 ಟೀಮ್ ಕಡೆಯಿಂದ ಜನ್ಮದಿನದ ಶುಭಾಶಯಗಳನ್ನ ಕೋರಿದ್ದಾರೆ. ಬನ್ವರ್ ಸಿಂಗ್ ಶೆಖಾವತ್ ಸರ್ ಅವರು ಸೇಡಿನೊಂದಿಗೆ ಮತ್ತೆ ದೊಡ್ಡ ಪರದೆ ಮೇಲೆ ಬರಲಿದ್ದಾರೆ ಎಂದು ಈ ಪೋಸ್ಟರ್‌ಗೆ ಕ್ಯಾಪ್ಷನ್ ನೀಡಲಾಗಿದೆ. ಇದನ್ನೂ ಓದಿ:ಖ್ಯಾತ ನಿರ್ದೇಶಕ ಸಿದ್ದಿಕಿಗೆ ಹೃದಯಾಘಾತ, ಆರೋಗ್ಯ ಸ್ಥಿತಿ ಗಂಭೀರ
ಅಲ್ಲು ಅರ್ಜುನ್ ಜೊತೆ ಡಾಲಿ, ರಶ್ಮಿಕಾ ಮಂದಣ್ಣ (Rashmika Mandanna) ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಇದರ ಚಿತ್ರೀಕರಣ ಭರಿದಿಂದ ನಡೆಯುತ್ತಿದೆ. ಮೈತ್ರಿ ಮೂವೀ ಮೇಕರ್ಸ್ ಮೂಲಕ ಅದ್ದೂರಿಯಾಗಿ ‘ಪುಷ್ಪ 2’ ಚಿತ್ರ ನಿರ್ಮಾಣ ಆಗುತ್ತಿದೆ.