‘ಪುಷ್ಪ 2′ ಸಕ್ಸಸ್ ಖುಷಿಯಲ್ಲಿದ್ದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಗಾಯಗೊಂಡಿದ್ದಾರೆ. ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ರಶ್ಮಿಕಾಗೆ ಪೆಟ್ಟಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ರಗಡ್ ಅವತಾರದಲ್ಲಿ ನೀನಾಸಂ ಸತೀಶ್-‘ದಿ ರೈಸ್ ಆಫ್ ಅಶೋಕ’ ಮೋಷನ್ ಪೋಸ್ಟರ್ ಔಟ್
Advertisement
ಮೂಲಗಳ ಪ್ರಕಾರ, ನಟಿ ರಶ್ಮಿಕಾಗೆ ಸಣ್ಣದಾಗಿ ಪೆಟ್ಟಾಗಿದೆ ಎನ್ನಲಾಗಿದೆ. ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ನಟಿ ಗಾಯಗೊಂಡಿದ್ದಾರೆ. ಆತಂತಪಡುವಂತಹದ್ದು ಏನಿಲ್ಲ. ಕೆಲ ದಿನಗಳ ಕಾಲ ಅವರು ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಸದ್ಯ ಒಪ್ಪಿಕೊಂಡಿದ್ದ ಸಲ್ಮಾನ್ ಖಾನ್ ಜೊತೆಗಿನ ‘ಸಿಖಂದರ್’ ಚಿತ್ರದ ಶೂಟಿಂಗ್ ಕೂಡ ನಿಲ್ಲಿಸಲಾಗಿದೆ. ಸಂಪೂರ್ಣವಾಗಿ ಚೇತರಿಸಿಕೊಂಡ ನಂತರವೇ ಅವರು ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಇನ್ನೂ ನಟಿಯ ಕಡೆಯಿಂದ ಆರೋಗ್ಯದ ಬಗ್ಗೆ ಮಾಹಿತಿ ಸಿಗುತ್ತಾ? ಕಾಯಬೇಕಿದೆ. ಈ ವಿಚಾರ ತಿಳಿದು ಫ್ಯಾನ್ಸ್ ನಟಿಗೆ ಏನಾಯ್ತು ಎಂದು ಚರ್ಚಿಸುತ್ತಿದ್ದಾರೆ.
Advertisement
Advertisement
ಅಂದಹಾಗೆ, ಅಲ್ಲು ಅರ್ಜುನ್ ಜೊತೆ ರಶ್ಮಿಕಾ ನಟಿಸಿದ್ದ ‘ಪುಷ್ಪ 2’ ಡಿ.5ರಂದು ರಿಲೀಸ್ ಆಗಿ ಭರ್ಜರಿ ಕಲೆಕ್ಷನ್ ಮಾಡಿದೆ. 1800 ಕೋಟಿ.ರೂಗೂ ಅಧಿಕ ಗಳಿಕೆ ಮಾಡಿ ಸಿನಿಮಾ ಗೆದ್ದು ಬೀಗಿದೆ.
Advertisement