ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ (Casting Couch) ಹೆಚ್ಚಾಗಿದೆ. ಆಗಾಗ ಈ ಬಗ್ಗೆ ಅಪಸ್ಪರ ಕೇಳಿ ಬರುತ್ತಲೇ ಇದೆ. ಸಾಕಷ್ಟು ನಾಯಕಿಯರು ತಮಗಾದ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮಾತನಾಡಿದ್ದು ಇದೆ. ಇದೀಗ ‘ಪುಷ್ಪ 2’ ನಟಿ ಅನಸೂಯ ಭಾರಧ್ವಾಜ್ ಹೀರೋ ಹಾಗೂ ನಿರ್ದೇಶಕರೊಬ್ಬರು ಕಮಿಟ್‌ಮೆಂಟ್ ಕೇಳಿದ ಕರಾಳ ಘಟನೆಯೊಂದನ್ನು ನಟಿ ಹಂಚಿಕೊಂಡಿದ್ದಾರೆ.
Advertisement
ಸಂದರ್ಶನವೊಂದರಲ್ಲಿ ಮಾತನಾಡಿದ, ಚಿತ್ರರಂಗದ ಸ್ಟಾರ್ ನಾಯಕನೊಬ್ಬ ತನ್ನಿಂದ ಕಮಿಟ್‌ಮೆಂಟ್ ಕೇಳಿದ್ದರ ಬಗ್ಗೆ ಹಂಚಿಕೊಂಡಿದ್ದಾರೆ. ಜೊತೆಗೆ ನಿರ್ದೇಶಕನೊಬ್ಬ ಕಮಿಟ್‌ಮೆಂಟ್ ಒಪ್ಪಿದರೆ ಸಿನಿಮಾ ಅವಕಾಶ ಕೊಡೊದಾಗಿ ಹೇಳಿದ್ದರು. ಅದನ್ನು ನಾನು ತಿರಸ್ಕಾರ ಮಾಡಿದಕ್ಕೆ ನನಗೆ ಸಿನಿಮಾ ಅವಕಾಶಗಳು ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಈ ಕ್ಷೇತ್ರದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ. ಕಮಿಟ್‌ಮೆಂಟ್‌ಗೆ ನೋ ಎಂದು ಹೇಳುವ ಧೈರ್ಯವಿರಬೇಕು ಎಂದು ನಟಿ ಮಾತನಾಡಿದ್ದಾರೆ. ತಮಗೆ ಕಮಿಟ್‌ಮೆಂಟ್‌ಗೆ ಕರೆದ ಆ ಹೀರೋ ಮತ್ತು ನಿರ್ದೇಶಕ ಯಾರು ಎಂಬುದು ನಟಿ ರಿವೀಲ್ ಮಾಡಿಲ್ಲ. ಇದನ್ನೂ ಓದಿ:ಬಾಲಿವುಡ್ ನಟ ಸೂರಜ್ ಪಾಂಚೋಲಿಗೆ ಸುಟ್ಟ ಗಾಯ- ಆಸ್ಪತ್ರೆಗೆ ದಾಖಲು
Advertisement
ಅಂದಹಾಗೆ, ಅನಸೂಯ ಅವರು ನಿರೂಪಕಿಯಾಗಿ ಸೈ ಎನಿಸಿಕೊಂಡಿದ್ದಾರೆ. ‘ಪುಷ್ಪ’, ‘ಪುಷ್ಪ 2’ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿ ಅವರು ಪ್ರೇಕ್ಷಕರ ಮನಗೆದ್ದಿದ್ದಾರೆ.