‘ಪುಷ್ಪ 2′ ನಟಿ ಅನಸೂಯ ಭಾರಧ್ವಜ್ (Anasuya Bharadwaj) ಅವರು ಅದ್ಧೂರಿಯಾಗಿ ಗೃಹಪ್ರವೇಶ (House Warming) ಮಾಡಿ ಹೊಸ ಮನೆಗೆ ಕಾಲಿಟ್ಟಿದ್ದಾರೆ. ಈ ಕುರಿತು ನಟಿಯೇ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಂಗೊಳಿಸಿದ KGF ನಟಿ ಮೌನಿ
ಹೊಸ ಮನೆ ಖರೀದಿಸೋದು ನಟಿಯ ಹಲವು ವರ್ಷಗಳ ಕನಸಾಗಿತ್ತು. ಅದರಂತೆ ಐಷಾರಾಮಿ ಮನೆ ಖರೀದಿಸಿ ಕುಟುಂಬ ಸಮೇತ ಹೊಸ ಮನೆಗೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ‘ಸೂರ್ಯ 46’ ಅದ್ಧೂರಿ ಚಾಲನೆ- ‘ರೆಟ್ರೋ’ ಹೀರೋಗೆ ‘ಪ್ರೇಮಲು’ ನಟಿ ಜೋಡಿ
ಸತ್ಯನಾರಾಯಣ ವ್ರತ, ಹೋಮಗಳನ್ನು ಮಾಡಿಸಿದ್ದಾರೆ. ಮನೆಗೆ ‘ಶ್ರೀರಾಮ ಸಂಜೀವಿನಿ’ ಎಂದು ಮನೆಗೆ ಹೆಸರಿಟ್ಟಿದ್ದಾರೆ. ಗೃಹಪ್ರವೇಶದ ಖುಷಿಯಲ್ಲಿರುವ ನಟಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ.
ರಂಗಸ್ಥಳಂ, ಕ್ಷಣಂ, ವಿಮಾನಂ, ಪುಷ್ಪ, ಪುಷ್ಪ 2 ಸಿನಿಮಾಗಳಲ್ಲಿ ಅನಸೂಯ ನಟಿಸಿದ್ದಾರೆ. ನಟಿ, ನಿರೂಪಕಿಯಾಗಿ ಅನಸೂಯ ಮೋಡಿ ಮಾಡಿದ್ದಾರೆ.