`ಲೈಗರ್’ (Liger Film) ಚಿತ್ರದ ಸೋಲಿನ ಬಳಿಕ ನಿರ್ದೇಶಕ ಪುರಿ ಜಗನ್ನಾಥ್‌ಗೆ (Puri Jagannadh) ಇದೀಗ ಮತ್ತೆ ಶಾಕಿಂಗ್ ಸುದ್ದಿಯೊಂದು ಎದುರಾಗಿದೆ. ಪುರಿ ಜಗನ್ನಾಥ್ ಅವರ ಆಪ್ತ ಸಾಯಿ ಕುಮಾರ್ ದುರ್ಗಂ ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಟಾಲಿವುಡ್ (Tollywood) ಸ್ಟಾರ್ ನಿರ್ದೇಶಕನಾಗಿ ಗುರುತಿಸಿಕೊಂಡ ಪುರಿ ಜಗನ್ನಾಥ್‌ಗೆ ಅದೃಷ್ಟ ಕೈ ಕೊಟ್ಟಿದೆ. `ಲೈಗರ್’ (Liger Film) ಚಿತ್ರದ ಸೋಲಿನ ನಂತರ ಮತ್ತೊಂದು ಶಾಕಿಂಗ್ ಸುದ್ದಿ ಬಂದಿದೆ. ನಿರ್ದೇಶಕ ಪುರಿ ಬಳಿ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಸಾಯಿ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುರಿ ಅವರ ಬಳಿ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿ, ಸಾಯಿ ಕುಮಾರ್ ಸೈ ಎನಿಸಿಕೊಂಡಿದ್ದರು.
ಸಾಯಿಕುಮಾರ್ ಸಾವಿಗೆ ಅವರು ಮಾಡಿಕೊಂಡಿದ್ದ ಸಾಲವೇ ಕಾರಣ ಎನ್ನಲಾಗುತ್ತಿದೆ. ಮಾಡಿರುವ ಸಾಲ ತೀರಿಸಲಾಗದೇ ಅಸಿಸ್ಟೆಂಟ್ ಸಾಯಿ ಸಾವಿಗೆ ಶರಣಾಗಿದ್ದಾರೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನು ಸಹಾಯಕನ ಸಾವಿನ ಸುದ್ದಿ ಕೇಳಿ ಪುರಿ ಜಗನ್ನಾಥ್ ಶಾಕ್ ಆಗಿದ್ದಾರೆ. ಇದನ್ನೂ ಓದಿ:ರಕ್ತದಿಂದ ತನ್ನ ಪೇಂಟಿಂಗ್ ಮಾಡಿದ ಅಭಿಮಾನಿಗೆ ಖಡಕ್ ವಾರ್ನಿಂಗ್ ಕೊಟ್ಟ ಸೋನು ಸೂದ್
ಇನ್ನು `ಲೈಗರ್’ ನಂತರ ವಿಜಯ್ ದೇವರಕೊಂಡ (Vijay Devarakonda) ಮತ್ತು ಪುರಿ ಜಗನ್ನಾಥ್ ಕಾಂಬಿನೇಷನ್‌ನ `ಜನಗಣಮನ’ ಹೊಸ ಚಿತ್ರವಾಗಿದ್ದು, ಈ ಸಿನಿಮಾ ಬಜೆಟ್ ಕೊರತೆಯಿಂದ ನಿಂತು ಹೋಗಿದೆ ಎನ್ನಲಾಗುತ್ತಿದೆ.