ಬೆಂಗಳೂರು: ಅಪ್ಪು ನನಗೆ ಕೋ ಸ್ಟಾರ್ ಅನ್ನೋದಕ್ಕಿಂತ ಒಬ್ಬ ಒಳ್ಳೆಯ ಫ್ರೆಂಡ್ ಆಗಿದ್ದರು ಎಂದು ನಟಿ ರಮ್ಯಾ ಹೇಳಿದ್ದಾರೆ.
ಅಪ್ಪು ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿರುವ ರಮ್ಯಾ ಅವರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಾವಿಬ್ಬರು ತುಂಬಾ ಕ್ಲೋಸ್ ಫ್ರೆಂಡ್ಸ್ ಆಗಿದ್ದೆವು. ಇಂದು ಅವರು ಇಲ್ಲ ಅಂದ್ರೆ ನಂಬೋಕೆ ಸಾಧ್ಯವಾಗುತ್ತಿಲ್ಲ. ತುಂಬಾ ಬೇಸರ ಆಗುತ್ತದೆ ಎಂದರು.
ಪುನೀತ್ ಜೊತೆಗಿನ ಸ್ನೇಹದಲ್ಲಿ ಸಾಕಷ್ಟು ನೆನಪುಗಳಿವೆ. ತುಂಬಾನೆ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಮೂರು ವಾರಗಳ ಹಿಂದೆ ನಾನು ಅವರೊಂದಿಗೆ ಮಾತನಾಡಿದ್ದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಂದಲ್ಲ, ನಾಳೆ ಪುನೀತ್ ಅಂತ್ಯಕ್ರಿಯೆ: ಸಿಎಂ ಬೊಮ್ಮಾಯಿ
ಅಪ್ಪು ಇನ್ನಿಲ್ಲ ಎಂಬ ಸುದ್ದಿಯಾಗುತ್ತಿದ್ದಂತೆಯೇ ರಮ್ಯಾ ಅವರು ಇನ್ ಸ್ಟಾದಲ್ಲಿ ಪೋಸ್ಟ್ ಹಾಕಿದ್ದರು. ಭಾವನೆಗಳು ಕೆಲವು ವೈಯಕ್ತಿಕ ಅವುಗಳನ್ನು ಪದಗಳಲ್ಲಿ ಹೇಳಲಾಗುವುದಿಲ್ಲ. ರಿಪ್ ಎಂದು ಹೇಳಿ ಮುಗಿಸಲಾಗದು. ದೇಹ ಮನಸ್ಸಿಗೂ ಮೀರಿದ್ದು ಭಾವನೆಯಾಗಿದೆ. ಕೆಲವು ಬಾಂಧವ್ಯ ವರ್ಣನೆಗೂ ಮೀರಿದ್ದಾಗಿದೆ. ಬೇರೆ ಏನನ್ನು ಹೇಳಲಾಗದ ಸಂದರ್ಭ ಇದು. ಈ ವಿಚಾರದ ಬಗ್ಗೆ ಸಧ್ಯದ ಸಂದರ್ಭದಲ್ಲಿ ಹೆಚ್ಚೇನೂ ಕೆಳದಿರಲು ಮಾಧ್ಯಮದವರಲ್ಲಿ ವಿನಂತಿ ಮಾಡುತ್ತೇನೆ. ಸಿನಿಮಾ ರಂಗದಲ್ಲಿ ಆತ ನನಗೆ ಅತ್ಯಂತ ಆಪ್ತ ಸ್ನೇಹಿತ. ಅವರಿಗೂ ಹಾಗೂ ಅವರ ಪರಿವಾರದವರಿಗೂ ಎಂದೆಂದಿಗೂ ನನ್ನ ಅತ್ಯಂತ ಪ್ರೀತಿಪೂರ್ವಕ ಹಾಗೂ ಹೃದಯದಾಳದ ಗೌರವ ನಮನಗಳು ಎಂದಿದ್ದರು. ಇದನ್ನೂ ಓದಿ: ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ