– ಪ್ರತಿಯೊಬ್ಬ ನಾಗರಿಕನೂ ನಮ್ಮ ಪಕ್ಷ ಸೇರಿಕೊಳ್ಳಬಹುದು
ನವದೆಹಲಿ: ಗೆಲುವಿಗೆ ಕಾರಣರಾದ ನನ್ನ ಎಲ್ಲ ಕಾರ್ಯಕರ್ತರಿಗೂ ಧನ್ಯವಾದಗಳು. ನಾನು ಆತಂಕವಾದಿಯಲ್ಲ ಎಂದು ಮತದಾರರು ಸಾಬೀತು ಮಾಡಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಂತೋಷ ವ್ಯಕ್ತಪಡಿಸಿದರು.
ಪಂಜಾಬ್‍ನಲ್ಲಿ ಎಎಪಿ ಪಕ್ಷದ ಅಭೂತಪೂರ್ವ ಗೆಲುವಿನಿಂದ ಕೇಜ್ರಿವಾಲ್ ಖುಷಿಯಾಗಿದ್ದಾರೆ. ಈ ಗೆಲುವಿನ ಖುಷಿಯಲ್ಲಿ ಕೇಜ್ರಿವಾಲ್ ಕಾರ್ಯಕರ್ತರನ್ನು ಮತ್ತು ಪಂಜಾಬ್ ಜನರನ್ನು ಉದ್ದೇಶಿಸಿ ಮಾತನಾಡಿದ್ದು, ರಾಜ್ಯದ ಜನರೆ ನಮಗೆ ಮತ ಹಾಕುವುದರ ಮೂಲಕ ನಾನು ಆತಂಕವಾದಿ ಅಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ. ಕೇಜ್ರಿವಾಲ್ ದೇಶದ ಸಜ್ಜನ ವ್ಯಕ್ತಿ, ದೇಶಭಕ್ತ ಎಂದು ನಿರೂಪಿಸಿದ್ದಾರೆ ಎಂದು ಹೇಳಿ ಆಪ್ ಪರ ಮತ ಹಾಕಿದ ಮತದಾರರಿಗೆ ಜನರಿಗೆ ಧನ್ಯವಾದ ಅರ್ಪಿಸಿದರು. ಇದನ್ನೂ ಓದಿ: ಮೌನವಾಗಿರುವ ಬಿಜೆಪಿ ಮತದಾರರು ದೊಡ್ಡ ಸಂದೇಶ ಕೊಟ್ಟಿದ್ದಾರೆ: ತೇಜಸ್ವಿ ಸೂರ್ಯ
Advertisement
Advertisement
ನಮಗೆ ಮತಹಾಕುವ ಮೂಲಕ ಜನರು ಕೇಜ್ರಿವಾಲ್ ಆತಂಕವಾದಿಯಲ್ಲ. ಯಾರು ಜನರನ್ನು ಲೂಟಿ ಮಾಡುತ್ತಿದ್ದಾರೆ ಅವರು ನಿಜವಾದ ಆತಂಕವಾದಿಗಳು ಎಂದು ನಿರೂಪಿಸಿದ್ದಾರೆ. ಸ್ನೇಹಿತರೇ, ಇಂದು ನಾವು ನಮ್ಮ ಭಾರತವನ್ನು ನವಭಾರತವನ್ನಾಗಿ ಮಾಡಲು ಸಂಕಲ್ಪ ಮಾಡೋಣ ಎಂದು ಜನರಿಗೆ ಕರೆಕೊಟ್ಟರು.
Advertisement
ನಾವು ನಿರ್ಮಾಣ ಮಾಡುವ ಭಾರತದಲ್ಲಿ ಯಾರು ಯಾರನ್ನು ದ್ವೇಷ ಮಾಡದೆ ಎಲ್ಲರನ್ನು ಪ್ರೀತಿ ಮಾಡಬೇಕು. ಯಾರು ಯಾರ ಮೇಲೆ ಕೋಪ ಮಾಡಿಕೊಳ್ಳದಂತಹ ದೇಶವನ್ನು ನಾವು ಕಟ್ಟಬೇಕು. ನಮ್ಮ ದೇಶದ ಒಬ್ಬರೂ ಹಸಿವಿನಿಂದ ಮಲಗದಂತೆ ಸಂಕಲ್ಪ ಮಾಡೋಣ. ನಮ್ಮ ದೇಶದ ಶ್ರೀಮಂತರಿಗೆ ಸರಿಸಮನಾಗಿ ಬಡ ಮಕ್ಕಳಿಗೂ ಶಿಕ್ಷಣ ಸಿಗುವಂತೆ ಮಾಡಬೇಕು ಎಂದರು.
Advertisement
ನನಗೆ ಈ ವಿಷಯ ಹೇಳಲು ದುಃಖವಾಗುತ್ತೆ. ನಮಗೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಮೆಡಿಕಲ್ ಶಿಕ್ಷಣ ಪಡೆಯಲು ಉಕ್ರೇನ್‍ನಂತಹ ಚಿಕ್ಕ ದೇಶಕ್ಕೆ ಹೋಗುವಂತಹ ಪರಿಸ್ಥಿತಿ ಇದೆ. ಇದು ಮತ್ತೆ ನಿರ್ಮಾಣವಾಗದಂತೆ ನೋಡಿಕೊಳ್ಳಬೇಕು. ನಾವು ನಮ್ಮ ಮಕ್ಕಳನ್ನು ನಮ್ಮ ದೇಶವನ್ನು ಬಿಟ್ಟು ಬೇರೆ ದೇಶಕ್ಕೆ ಹೋಗದಂತೆ ನೋಡಿಕೊಳ್ಳಬೇಕು. ಇಲ್ಲಿ ಸಾಕಷ್ಟು ಮೆಡಿಕಲ್ ಕಾಲೇಜ್ ಮತ್ತು ಎಂಜಿನಿಯರ್ ಕಾಲೇಜುಗಳನ್ನು ತೆರೆಯೋಣ. ಬೇರೆ ದೇಶದ ಮಕ್ಕಳು ನಮ್ಮ ದೇಶಕ್ಕೆ ಬರುವಂತೆ ಮಾಡಬೇಕು ಎಂದು ಭರವಸೆಯನ್ನು ಕೊಟ್ಟರು.
ನನ್ನನ್ನು ಟಿವಿಯಲ್ಲಿ ಮಹಿಳೆಯರು, ರೈತರು, ಮಕ್ಕಳು, ಇಂಡಸ್ಟ್ರಿಯವರು, ಯುವಕರು, ವ್ಯಾಪಾರಿಗಳು ನೋಡುತ್ತಿದ್ದಾರೆ. ಇವರೆಲ್ಲರಿಗೂ ದೇಶಕ್ಕಾಗಿ ಏನಾದರೂ ಮಾಡಬೇಕು ಎಂದುಕೊಳ್ಳುತ್ತಿರುತ್ತಾರೆ. ಅವರೆಲ್ಲರಿಗೂ ಈ ಮೂಲಕ ಒಂದು ಕರೆಕೊಡುತ್ತಿದ್ದೇನೆ. ನೀವು ನೋಡಿದ್ದಿರಾ ಹೇಗೆ ಪ್ರತಿಪಕ್ಷಗಳು ನಮ್ಮ ದೇಶವನ್ನು ಲೂಟಿ ಮಾಡುತ್ತಿದೆ ಎಂದು. ನಿಮಗೂ ಇವರನ್ನು ನೋಡಿ ದುಃಖವಾಗುತ್ತೆ ಮತ್ತು ಇವರನ್ನು ನೋಡಿ ಕೋಪ ಬರುತ್ತೆ ಎಂದು ನನಗೆ ಗೊತ್ತು ಎಂದು ಹೇಳಿದರು.
ಇದನ್ನು ನೋಡಿ ನಿಮಗೂ ಏನಾದರೂ ಮಾಡಬೇಕು ಎನಿಸುತ್ತೆ. ಮೊದಲು ನಮ್ಮ ಗೆಲುವು ದೆಹಲಿಯಲ್ಲಿ ಆಯ್ತು, ಈಗ ಪಂಜಾಬ್ ನಲ್ಲಿ ನಾವು ಗೆಲುವನ್ನು ಸಾಧಿಸಿದ್ದೇವೆ. ಈಗ ಈ ಗೆಲುವನ್ನು ಇಡೀ ಭಾರತದಲ್ಲಿ ಹಬ್ಬಿಸಬೇಕು. ಯಾರು ಟಿವಿ ನೋಡುತ್ತಿದ್ದಾರೆ ಎಲ್ಲ ಯುವಕರು, ಉದ್ಯೋಗಿಗಳು, ಮಹಿಳೆಯರು, ರೈತರು, ಎಲ್ಲರೂ ನಮ್ಮ ಪಕ್ಷವನ್ನು ಸೇರಿಕೊಳ್ಳಬಹುದು ಎಂದು ಕರೆಕೊಟ್ಟರು. ಇದನ್ನೂ ಓದಿ: ಈ ಕ್ರಾಂತಿಗಾಗಿ ಪಂಜಾಬ್ ಜನತೆಗೆ ಧನ್ಯವಾದಗಳು: ಕೇಜ್ರಿವಾಲ್
ನಿಮಗೆ ಅನಿಸುತ್ತೆ ನಾವು ಏನೂ ಮಾಡಬಹುದು ಎಂದು, ನೀವು ಯೋಚನೆ ಮಾಡಬೇಡಿ. ಮಾಬೈಲ್ ರಿಪೇರಿ ಮಾಡುವ ಕೆಲಸ ಮಾಡುವವನೂ ಸಹ ನಮ್ಮ ಪಕ್ಷಕ್ಕೆ ಬರಬಹುದು. ಸಿಧುವನ್ನು ಸೋಲಿಸಿದ್ದು, ಒಬ್ಬ ಮಹಿಳೆ. ಎಲ್ಲರಿಗೂ ನಿಮ್ಮದೇ ಶಕ್ತಿ ಇದೆ. ನಮ್ಮ ಭಾರತದಲ್ಲಿ ಬದಲಾವಣೆಯ ಹೆಜ್ಜೆ ಇದಾಗಿದೆ. ಈ ಮೂಲಕ ನವಭಾರತವನ್ನು ಕಟ್ಟೋಣ. ಇಷ್ಟು ದೊಡ್ಡ ಬಹುಮತವನ್ನು ನಾವು ನಿರೀಕ್ಷೆಯನ್ನು ಮಾಡಿರಲಿಲ್ಲ. ಇನ್ನೊಮುಂದೆ ನಮ್ಮ ಸಮಯವನ್ನು ವ್ಯಾರ್ಥ ಮಾಡುವುದಿಲ್ಲ ಎಂದು ತಿಳಿಸಿದರು.