ಭಗವಂತ್ ಮಾನ್ ಭೇಟಿಯಾದ ನಂತರ ಊಟದ ತಟ್ಟೆಗೆ ಕಿತ್ತಾಡಿದ ಶಿಕ್ಷಕರು, ಪ್ರಾಂಶುಪಾಲರು

Public TV
1 Min Read
Bhagwant Mann Teachers Principals Meals 1

ಚಂಡೀಗಢ: ಮನುಷ್ಯ ಜೀವನ ನಡೆಸಲು ಶಿಸ್ತು ತುಂಬಾ ಮುಖ್ಯ. ಶಿಸ್ತಿನ ಪಾಠ ಮಾಡಬೇಕಾದವರು ಶಿಕ್ಷಕರು. ಆದರೆ ಶಿಕ್ಷಕರೇ ಶಿಸ್ತು ಮೀರಿ ನಡೆದುಕೊಳ್ಳುತ್ತಿರುವ ದೃಶ್ಯ ಪಂಜಾಬ್‍ನಲ್ಲಿ ನಡೆದಿದೆ.

Bhagwant Mann Teachers Principals Meals

ಆಮ್ ಆದ್ಮಿ ಪಕ್ಷದ(ಎಎಪಿ) ಪಂಜಾಬ್ ಸಿಎಂ ಭಗವಂತ್ ಮಾನ್ ಅವರ ಅಧ್ಯಕ್ಷತೆಯಲ್ಲಿ ಸರ್ಕಾರಿ ಶಾಲೆಯ ಮುಖ್ಯಸ್ಥರು ಮತ್ತು ಶಿಕ್ಷಕರೊಂದಿಗೆ ಸಭೆ ನಡೆಸಲಾಯಿತು. ಈ ಸಭೆಯನ್ನು ಲೂಧಿಯಾನದ ಐಷಾರಾಮಿ ರೆಸಾರ್ಟ್‍ನಲ್ಲಿ ಮಾಡಲಾಯಿತು. ಸಭೆ ಮುಗಿದ ನಂತರ ಎಲ್ಲ ಶಿಕ್ಷಕರು ಮತ್ತು ಪ್ರಾಂಶುಪಾಲರಿಗೆ ಉಚಿತ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಹಿನ್ನೆಲೆ ಶಿಕ್ಷಕರು ಸರದಿ ಸಾಲಿನಲ್ಲಿ ನಿಂತುಕೊಳ್ಳದೆ ಊಟಕ್ಕಾಗಿ ಕಿತ್ತಾಡಿದ್ದಾರೆ ಇದನ್ನೂ ಓದಿ:  ಎಮ್ಮೆಗೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸಲು ಬಸ್ ಪಲ್ಟಿ

ಶಿಕ್ಷಣ ಇಲಾಖೆಯು ಶಿಕ್ಷಣದ ಗುಣಮಟ್ಟದ ಕುರಿತು ಚರ್ಚಿಸಲು ರಾಜ್ಯದಾದ್ಯಂತ 2,600 ಕ್ಕೂ ಹೆಚ್ಚು ಶಾಲಾ ಮುಖ್ಯಸ್ಥರು ಮತ್ತು ಜಿಲ್ಲಾ ಶಿಕ್ಷಣಾಧಿಕಾರಿಗಳ ಸಭೆಯನ್ನು ಕರೆದಿದೆ. ಈ ಸಭೆಯಲ್ಲಿ ಶೈಕ್ಷಣಿಕ ಸುಧಾರಣೆಗಳ ಬಗ್ಗೆ ಸಲಹೆಗಳನ್ನು ಚರ್ಚೆ ನಡೆಸಲಾಯಿತು. ನಂತರ ಮಧ್ಯಾಹ್ನದ ಊಟಕ್ಕೆಂದು ಶಿಕ್ಷಕರು ಹೋದಾಗ ತಟ್ಟೆಗಾಗಿ ಗಲಾಟೆ ನಡೆದಿದ್ದು, ಕ್ಯಾಮೆರಾದಲ್ಲಿ ಸೆರೆಯಾಗಿದೆ.

Bhagwant Mann Teachers Principals Meals 2

ಈ ವೀಡಿಯೋವನ್ನು ಟ್ವಿಟ್ಟರ್‍ನಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಪಂಜಾಬ್‍ನ ಲುಧಿಯಾನಾದಲ್ಲಿ ಸಿಎಂ ಭಗವಂತ್ ಮಾನ್ ಮತ್ತು ಶಿಕ್ಷಣ ಸಚಿವರನ್ನು ಭೇಟಿ ಮಾಡಿದ ನಂತರ ಪ್ರಾಂಶುಪಾಲರು ಮತ್ತು ಶಿಕ್ಷಕರ ಊಟದ ದೃಶ್ಯ. ಅವರು ಅನೇಕ ದಿನಗಳಿಂದ ಹಸಿವಿನಿಂದ ಬಳಲುತ್ತಿರುವಂತೆ ತೋರುತ್ತಿದೆ. ಅಥವಾ ಅವರಿಗೆ ಉಚಿತ ಊಟವನ್ನು ಕಳೆದುಕೊಳ್ಳಲು ಇಷ್ಟವಿಲ್ಲ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಹಿಳೆ ಕತ್ತು ಹಿಸುಕಿ ಸಮಾಧಿ ಮಾಡಲು ಹೋಗಿ ತಾನೇ ಸತ್ತ 

ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದ್ದು, ತಮಾಷೆ ಜೊತೆಗೆ ಶಿಕ್ಷಣ ವ್ಯವಸ್ಥೆಯನ್ನು ನೆಟ್ಟಿಗರು ಟೀಕಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *