ಚಂಡೀಗಢ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ತಿಂಗಳ ಬಳಿಕ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೊಸ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಅನುಮತಿ ನೀಡಿದ ಬಳಿಕ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಬಹಿರಂಗಗೊಳಿಸುವುದಾಗಿ ಅವರು ಹೇಳಿದ್ದಾರೆ.
Yes, I will be forming a new party. The name will be announced once the Election Commission clears it, along with the symbol. My lawyers are working on it: Captain Amarinder Singh, in Chandigarh pic.twitter.com/H2gCwFfRwM
— ANI (@ANI) October 27, 2021
Advertisement
ಹೊಸ ಪಕ್ಷ ಸ್ಥಾಪಿಸುವ ಬಗ್ಗೆ ಇಂದು ಅಮರೀಂದರ್ ಸಿಂಗ್ ಚಂಡಿಗಢದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 117 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಬಿಜೆಪಿ ಜೊತೆಗೆ ಸೀಟು ಹಂಚಿಕೆಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.
Advertisement
As far as Sidhu (Navjot Singh Sidhu) is concerned, wherever he fights from we will fight him: Captain Amarinder Singh, in Chandigarh pic.twitter.com/kSW64DNQGv
— ANI (@ANI) October 27, 2021
Advertisement
ಅಕಾಲಿದಳ ಜೊತೆಗೆ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳಲ್ಲ ಎಂದ ಅವರು, ಚುನಾವಣಾ ಹೊಸ್ತಿಲಲ್ಲಿ ಬಹಳಷ್ಟು ಕಾಂಗ್ರೆಸ್ ನಾಯಕರು ತಮ್ಮ ಪಾರ್ಟಿ ಸೇರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನನ್ನನ್ನು ಅವಮಾನ ಮಾಡಲಾಗಿದೆ – ಸಿಎಂ ಸ್ಥಾನಕ್ಕೆ ಅಮರೀಂದರ್ ಸಿಂಗ್ ರಾಜೀನಾಮೆ
Advertisement
When the time comes we will fight all 117 seats, whether adjustment seats or we contest on our own: Former Punjab CM Captain Amarinder Singh pic.twitter.com/0Foi9kmTO7
— ANI (@ANI) October 27, 2021
ಇದೇ ವೇಳೆ ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ಚಾಟಿ ಬೀಸಿದ ಅವರು, ನನ್ನ ಬೆಂಬಲಿಗರಿಗೆ ಬೆದರಿಕೆ ಹಾಕಲಾಗುತ್ತಿದೆ. ಅನಗತ್ಯ ಕಿರುಕುಳ ನೀಡಲಾಗುತ್ತಿದೆ. ಆದರೆ ಇಂತಹ ಕೀಳು ಮಟ್ಟದ ರಾಜಕೀಯದಿಂದ ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಗುಡುಗಿದರು. ಇದನ್ನೂ ಓದಿ: ಕಾಂಗ್ರೆಸ್ಸಿನಿಂದ ಅಸಂಬದ್ಧ ಸುಳ್ಳು ಹೇಳಿಕೆ- ಅಮರೀಂದರ್ ಸಿಂಗ್
Tomorrow we are taking some people with us, around 25-30 people, and we will be meeting the Home Minister on this issue: Captain Amarinder Singh, in Chandigarh over Centre's three farm laws pic.twitter.com/hHx5l4gD5k
— ANI (@ANI) October 27, 2021
ಅಮರೀಂದರ್ ಸಿಂಗ್ ಸುದ್ದಿಗೋಷ್ಠಿ ನಡೆಸುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ನವಜೋತ್ ಸಿಧು, ಕಾಂಗ್ರೆಸ್‍ನ 78 ಶಾಸಕರು ಪಕ್ಷದ ಜೊತೆಗಿದ್ದಾರೆ. ನೀವು ಪಂಜಾಬ್‍ನ ನ್ಯಾಯ ಮತ್ತು ಅಭಿವೃದ್ಧಿಯನ್ನು ತಡೆಯುವ ನಕಾರಾತ್ಮಕ ಶಕ್ತಿಯಾಗಿದ್ದಿರಿ ಎಂದು ಟೀಕಿಸಿದ್ದಾರೆ. ಅಲ್ಲದೆ ನಾನು ಜನರ ಪರ ಧ್ವನಿ ಎತ್ತುತ್ತಿದ್ದಂತೆ, ಸತ್ಯವನ್ನು ಹೇಳುತ್ತಿದ್ದಂತೆ ನೀವು ನನ್ನನ್ನು ಮುಗಿಸಲು ಬಯಸಿದ್ದೀರಿ, ಪಂಜಾಬ್‍ನ ಹಿತಾಸಕ್ತಿಗಳಲ್ಲಿ ರಾಜಿ ಮಾಡಿಕೊಂಡಿದ್ದಕ್ಕಾಗಿ ಪಂಜಾಬ್‍ನ ಜನರು ಮತ್ತೆ ನಿಮ್ಮನ್ನು ಶಿಕ್ಷಿಸಲು ಕಾಯುತ್ತಿದ್ದಾರೆ ಎಂದು ಸಿಧು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪಂಜಾಬ್‍ನಲ್ಲಿ ಹೊಸ ಪಕ್ಷ ಸ್ಥಾಪಿಸಲು ಹೊರಟ್ರಾ ಅಮರೀಂದರ್ ಸಿಂಗ್?
#WATCH | Capt Amarinder Singh speaks on Sidhu's tweet on him, "He knows nothing, talks too much, doesn't have brains. I never spoke to Amit Shah or Dhindsa over this, but I'll. I want to be strong to fight Cong,SAD,AAP. I'll talk to them,we'll put up united front to defeat these" pic.twitter.com/gCZbggRivK
— ANI (@ANI) October 27, 2021