ಚಂಡೀಗಢ: ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟು ತೀವ್ರಗೊಂಡಿದೆ. ತಮ್ಮನ್ನು ಹೈಕಮಾಂಡ್ ನಡೆಸಿಕೊಳ್ಳುತ್ತಿರುವ ರೀತಿಗೆ ಬೇಸತ್ತು ಇತ್ತೀಚೆಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್, ನಾನು ಕಾಂಗ್ರೆಸ್‍ನಲ್ಲಿ ಉಳಿಯುವುದಿಲ್ಲ, ಬಿಜೆಪಿಗೆ ಸೇರುವುದಿಲ್ಲ ಎನ್ನುವ ಮೂಲಕ ಹೊಸ ಪಕ್ಷ ಸ್ಥಾಪನೆಯತ್ತ ದೃಷ್ಟಿ ನೆಟ್ಟಿದ್ದಾರೆ ಎಂದು ಆಪ್ತಮೂಲಗಳಿಂದ ವರದಿಯಾಗಿದೆ.
Advertisement
ಅಮರೀಂದರ್ ಸಿಂಗ್ ಕಾಂಗ್ರೆಸ್‍ಗೆ ಗುಡ್‍ಬೈ ಹೇಳುವ ಕ್ಷಣಗಳು ಹತ್ತಿರವಾಗುತ್ತಿದೆ. ಈ ನಡುವೆ ಕಾಂಗ್ರೆಸ್‍ನಲ್ಲಿ ಉಳಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಅಮರೀಂದರ್ ಸಿಂಗ್, ಟ್ವಿಟ್ಟರ್ ಅಕೌಂಟ್‍ನಿಂದ ಕಾಂಗ್ರೆಸ್‍ಮ್ಯಾನ್ ಎಂಬ ಪದನಾಮವನ್ನು ತೆಗೆದುಹಾಕಿದ್ದಾರೆ. ಯಾವುದೇ ಕ್ಷಣದಲ್ಲಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಪತ್ರವನ್ನು ಸೋನಿಯಾ ಗಾಂಧಿಗೆ ಕಳುಹಿಸಲು ಸನ್ನದ್ಧರಾಗಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಈ ಮೂಲಕ ಬಿಜೆಪಿ ಸೇರದೇ ಆಯ್ಕೆಗಳನ್ನು ಮುಕ್ತವಾಗಿರಿಸಲು ತೀರ್ಮಾನಿಸಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಭೇಟಿ ಮಾಡಿದ ಅಮರೀಂದರ್ ಸಿಂಗ್- ಬಿಜೆಪಿ ಸೇರುವ ವದಂತಿ?
Advertisement
Advertisement
79 ವರ್ಷದ ಹಿರಿಯ ನೇತಾರ ಅಮರೀಂದರ್ ಸಿಂಗ್ ಶೀಘ್ರವೇ ಹೊಸ ಪಕ್ಷ ಸ್ಥಾಪಿಸುವ ಸಂಭವವೂ ಇದೆ ಎಂದು ಆಪ್ತಮೂಲಗಳಿಂದ ಕೇಳಿಬರುತ್ತಿದೆ. ಈ ಮಧ್ಯೆ ಯುದ್ಧಕಾಲೆ ಶಸ್ತ್ರಾಭ್ಯಾಸ ಎನ್ನುವ ರೀತಿಯಲ್ಲಿ ಇವತ್ತು ಫಿಲ್ಡಿಗೆ ಇಳಿದಿರುವ ರಾಹುಲ್ ಗಾಂಧಿ ಸಭೆ ಮೇಲೆ ಸಭೆ ನಡೆಸಿದ್ದಾರೆ. ಕಮಲ್‍ನಾಥ್, ಅಂಬಿಕಾ ಸೋನಿ ಮೂಲಕ ಸಂಧಾನ ಯತ್ನ ನಡೆಸಿದ್ದಾರೆ. ಆದರೆ ಇದು ಫಲ ಕೊಟ್ಟಿಲ್ಲ. ಇನ್ನೊಂದೆಡೆ, ಅಸಮಾಧಾನಿತ ನವಜೋತ್ ಸಿಂಗ್ ಸಿಧು, ಮುಖ್ಯಮಂತ್ರಿ ಛನ್ನಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇಬ್ಬರ ಮಧ್ಯೆ ಸಂಧಾನ ಸೂತ್ರ ಸಿದ್ಧವಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬಿಜೆಪಿ ಸೇರಲ್ಲ, ಕಾಂಗ್ರೆಸ್‍ನಲ್ಲಿ ಇರಲ್ಲ: ಕ್ಯಾ.ಅಮರೀಂದರ್ ಸಿಂಗ್
Advertisement
#WATCH | "…I had said it before also that Navjot Singh Sidhu is not the right man for Punjab, and if he contests, I will not let him win…," says former Punjab CM Captain Amarinder Singh pic.twitter.com/msURZAlalR
— ANI (@ANI) September 30, 2021
ಅಮಿತ್ ಶಾ ಭೇಟಿ:
ನಿನ್ನೆ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅಮರೀಂದರ್ ಸಿಂಗ್ ಸುಧೀರ್ಘ 1ಗಂಟೆಗಳ ಮಾತುಕತೆ ನಡೆಸಿದ್ದರು. ಇದನ್ನು ಗಮನಿಸುತ್ತಿದ್ದಂತೆ ಅವರು ಬಿಜೆಪಿ ಸೇರುವುದು ಖಚಿತ ಎಂದು ವದಂತಿ ಹರಡಿತ್ತು.