ಪಿಎನ್‍ಬಿಯಲ್ಲಿ 11,300 ಕೋಟಿ ರೂ. ಭಾರೀ ಅಕ್ರಮ!

Public TV
1 Min Read
punjab national bank

ಮುಂಬೈ: ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಭಾರೀ ಅಕ್ರಮಗಳು ನಡೆಯುತ್ತಿದ್ದರೂ ಅದು ಬೆಳಕಿಗೆ ಬರುವುದಿಲ್ಲ ಎನ್ನುವ ಆರೋಪಕ್ಕೆ ಪುಷ್ಠಿ ಎನ್ನುವಂತೆ ಮುಂಬೈನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ(ಪಿಎನ್‍ಬಿ) 11,300 ಕೋಟಿ ರೂ. ಅಕ್ರಮ ನಡೆದಿರುವುದು ಪತ್ತೆಯಾಗಿದೆ.

ಮುಂಬೈ ಶಾಖೆಯಲ್ಲಿ 11,300 ಕೋಟಿ ರೂ. ಅಕ್ರಮ ವಹಿವಾಟು ನಡೆದಿರುವುದು ತನಿಖೆ ವೇಳೆ ಪತ್ತೆಯಾಗಿದೆ. ತಮಗೇ ಬೇಕಾದ ಗ್ರಾಹಕರ ಜೊತೆ ವ್ಯವಹಾರ ನಡೆಸಿ ಈ ಅಕ್ರಮ ಎಸಗಲಾಗಿದೆ ಎಂದು ಪಿಎನ್‍ಬಿ ಮುಂಬೈ ಶೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ್ದ ಲೆಕ್ಕಪತ್ರದಲ್ಲಿ ತಿಳಿಸಿದೆ.

ಈ ಸಂಬಂಧ ಪಿಎನ್‍ಬಿ ಸಿಬಿಐಗೆ ಎರಡು ಪ್ರತ್ಯೇಕ ದೂರನ್ನು ದಾಖಲಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿಂತೆ ಪಿಎನ್‍ಬಿ 10 ಮಂದಿ ಉದ್ಯೋಗಿಗಳನ್ನು ಅಮಾನತುಗೊಳಿಸಿದೆ. ಯಾರ ಜೊತೆ ಈ ಅವ್ಯವಹಾರ ನಡೆದಿದೆ ಎನ್ನುವುದನ್ನು ಬ್ಯಾಂಕ್ ತಿಳಿಸಿಲ್ಲ.

PNB 2

ಜ್ಯುವೆಲ್ಲರಿ ವಿನ್ಯಾಸಕ ಶತಕೋಟಿ ಸಂಪತ್ತಿನ ಒಡೆಯ ನಿರಾಜ್ ಮೋದಿ ಮತ್ತು ಜ್ಯುವೆಲ್ಲರಿ ಕಂಪೆನಿಯೊಂದು ಬ್ಯಾಂಕಿಗೆ ಭಾರೀ ಹಣವನ್ನು ವಂಚಿಸಿರುವ ಸಾಧ್ಯತೆ ಇದೆ ಎಂದು ಮೂಲಗಳನ್ನು ಆಧಾರಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಗೊಂಡ ಬಳಿಕ ಪಿಎನ್‍ಬಿ ಷೇರು 5.7% ಕುಸಿತ ಕಂಡು ಬಂದಿದೆ. ಪಿಎನ್‍ಬಿ ಗ್ರಾಹಕರಿಗೆ ಬೃಹತ್ ಪ್ರಮಾಣದಲ್ಲಿ ಸಾಲ ನೀಡುವ ದೇಶದ ಎರಡನೇ ಅತೀ ದೊಡ್ಡ ರಾಷ್ಟ್ರೀಕೃತ ಬ್ಯಾಂಕ್ ಆಗಿದೆ. ಅಷ್ಟೇ ಅಲ್ಲದೇ ತನ್ನ ಆಸ್ತಿಯಿಂದಾಗಿ ದೇಶದ ನಾಲ್ಕನೇ ಅತೀ ದೊಡ್ಡ ಬ್ಯಾಂಕ್ ಎನಿಸಿಕೊಂಡಿದೆ.

ಪಿಎನ್‍ಬಿ 2016-17ರ ಅವಧಿಯಲ್ಲಿ ವಸೂಲಾಗದ 9,205 ಕೋಟಿ ರೂ. ಸಾಲದ ಮೊತ್ತವನ್ನು ವಜಾ ಮಾಡಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಳಿಕ ಅತಿ ಹೆಚ್ಚು ಸಾಲದ ಮೊತ್ತವನ್ನು ವಜಾಗೊಳಿಸಿದ ಎರಡನೇ ಬ್ಯಾಂಕ್ ಪಿಎನ್‍ಬಿ ಆಗಿದೆ. ಎಸ್‍ಬಿಐ ವಸೂಲಾಗದ 20,339 ಕೋಟಿ ರೂ. ಸಾಲದ ಮೊತ್ತವನ್ನು ವಜಾಗೊಳಿಸಿತ್ತು.

PNB

Share This Article
Leave a Comment

Leave a Reply

Your email address will not be published. Required fields are marked *