ಚಂಡೀಗಢ: ಪಂಜಾಬ್ ಚುನಾವಣೆಯ ಮತಗಟ್ಟೆ ಸಮೀಕ್ಷೆಯಲ್ಲಿ ಆಮ್ ಆದ್ಮಿ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ತಿಳಿಸಲಾಗಿದೆ. ಈ ಕುರಿತು ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಪ್ರತಿಕ್ರಿಯಿಸಿದ್ದಾರೆ.
ಪಂಜಾಬ್ ಮಾಫಿಯಾಗಳಿಂದ ಕೂಡಿದೆ. ಒಂದು ವೇಳೆ ನಾನು ಮುಖ್ಯಮಂತ್ರಿಯಾದರೆ ಮಾಫಿಯಾ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಅವರು (ಕಾಂಗ್ರೆಸ್) ಏನನ್ನೂ ಬಿಟ್ಟಿಲ್ಲ. ಮರಳು ಮಾಫಿಯಾ, ಭೂ ಮಾಫಿಯ, ಕೇಬಲ್ ಮಾಫಿಯಾ, ಟ್ರಾನ್ಸ್‌ಪೋರ್ಟ್ ಮಾಫಿಯಾ, ಅಬಕಾರಿ ಮಾಫಿಯಾ ಕೂಡ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: UPಯಲ್ಲಿ ಮತ ಎಣಿಕೆಗೂ ಮುನ್ನ ಚುನಾವಣಾ ಆಯೋಗಕ್ಕೆ ಎಸ್‌ಪಿ ಪತ್ರ
Advertisement
Advertisement
ಸಿಎಂ ಅಂದರೆ ಕಾಮನ್ ಮ್ಯಾನ್. ಖ್ಯಾತಿ ಯಾವಾಗಲೂ ನನ್ನ ಜೀವನದ ಭಾಗವಾಗಿದೆ. ಈಗಲೂ ಜನರ ಮಧ್ಯೆ ಹೋಗಿ ಅವರಿಗಾಗಿ ಕೆಲಸ ಮಾಡುತ್ತೇನೆ. ಜನರು ಹಳೆಯ ಪಂಜಾಬ್ ಅನ್ನು ಮರಳಿ ಬಯಸುತ್ತಾರೆ ಎಂದು ತಿಳಿಸಿದ್ದಾರೆ.
Advertisement
ಪಂಜಾಬ್ ಅನ್ನು ಮತ್ತೆ ಪಂಜಾಬ್ ಆಗಿ ಮಾಡುತ್ತೇವೆ. ಅದನ್ನು ಪ್ಯಾರಿಸ್, ಲಂಡನ್ ಅಥವಾ ಕ್ಯಾಲಿಫೋರ್ನಿಯಾ ಆಗಿ ಪರಿವರ್ತಿಸುವ ಅಗತ್ಯವಿಲ್ಲ ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: EVM ಪ್ರೋಟೋಕಾಲ್‍ನಲ್ಲಿ ಲೋಪ: ಚುನಾವಣಾಧಿಕಾರಿಯ ವೀಡಿಯೋ ಹಂಚಿಕೊಂಡ ಎಸ್‍ಪಿ
Advertisement
ಪಂಜಾಬ್ ವಿಧಾನಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ವರದಿಗಳು ಬಿಡುಗಡೆಯಾಗಿವೆ. ಪಂಜಾಬ್‌ನಲ್ಲಿ ಎಎಪಿ ಪಕ್ಷ ಬಹುಮತ ಪಡೆಯಲಿದೆ ಎಂದು ಸಮೀಕ್ಷೆ ವರದಿಗಳು ತಿಳಿಸಿವೆ.