ಇಂದಿನಿಂದ ಪಂಜಾಬ್ ಪ್ರತಿಮನೆಗೂ 300 ಯೂನಿಟ್ ಉಚಿತ ವಿದ್ಯುತ್ ಪೂರೈಕೆ: ಭಗವಂತ್ ಮಾನ್

Public TV
1 Min Read
Bhagwant Mann

ಚಂಡೀಗಢ: ಪಂಜಾಬ್‍ನಲ್ಲಿ ಜುಲೈ 1ರಿಂದ ಗೃಹ ಬಳಕೆಗಾಗಿ ತಿಂಗಳಿಗೆ 300 ಯೂನಿಟ್‍ಗಳ ಉಚಿತ ವಿದ್ಯುತ್ ಪೂರೈಸುವುದಾಗಿ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಸರ್ಕಾರ ಘೋಷಿಸಿತ್ತು. ಅದರಂತೆ ಇಂದಿನಿಂದ ಪಂಜಾಬ್‍ನ ಪ್ರತಿ ಮನೆಗೂ 300 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ಪೂರೈಸುತ್ತಿದೆ.

Electricity

2022 ರ ಪಂಜಾಬ್ ವಿಧಾನಸಭಾ ಚುನಾವಣೆ ವೇಳೆ ಆಮ್ ಆದ್ಮಿ ಪಕ್ಷ ನೀಡಿದ ಪ್ರಮುಖ ಭರವಸೆಗಳಲ್ಲಿ ಪ್ರತಿ ಮನೆಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುವುದು ಕೂಡ ಒಂದಾಗಿತ್ತು. ಅದರಂತೆ ಜುಲೈ 1 ರಿಂದ ಪ್ರತಿ ಮನೆಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಎಎಪಿ ಸರ್ಕಾರ ಸೋಮವಾರ ಘೋಷಿಸಿತ್ತು. ಇದನ್ನೂ ಓದಿ : ಹೋಂ ವರ್ಕ್ ಮಾಡಿಲ್ಲವೆಂದು ವಿದ್ಯಾರ್ಥಿ ಕಿವಿಯಲ್ಲಿ ರಕ್ತ ಬರುವಂತೆ ಹೊಡೆದ – ಶಿಕ್ಷಕನ ವಿರುದ್ಧ ಪೋಷಕರ ಆಕ್ರೋಶ

bhagwant mann 5

ಈ ಕುರಿತಂತೆ ಟ್ವೀಟ್ ಮಾಡಿರುವ ಭಗವಂತ ಮಾನ್ ಅವರು, ಹಿಂದಿನ ಸರ್ಕಾರಗಳು ಚುನಾವಣೆಯ ಸಮಯದಲ್ಲಿ ಭರವಸೆಗಳನ್ನು ನೀಡುತ್ತಿದ್ದವು. ಅವರು ನೀಡಿದ ಭರವಸೆಗಳನ್ನು ಈಡೇರಿಸುವಷ್ಟರಲ್ಲಿ 5 ವರ್ಷ ಕಳೆದೆ ಹೋಗುತ್ತಿತ್ತು. ಆದರೆ ನಮ್ಮ ಸರ್ಕಾರ ಪಂಜಾಬ್ ಇತಿಹಾಸದಲ್ಲಿಯೇ ಹೊಸ ಮಾದರಿಯನ್ನು ಸ್ಥಾಪಿಸಿದೆ. ನಾವು ಪಂಜಾಬ್ ಜನತೆಗೆ ನೀಡಿದ ಭರವಸೆಯನ್ನು ಇಂದು ಈಡೇರಿಸುತ್ತಿದ್ದೇವೆ. ಇಂದಿನಿಂದ ಪಂಜಾಬ್‍ನ ಪ್ರತಿ ಕುಟುಂಬಗೂ ತಿಂಗಳಿಗೆ 300 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ : ಕೇವಲ 40ರೂ.ನಲ್ಲಿ ಧೋನಿ ಮಂಡಿ ನೋವು ಗುಣಪಡಿಸಿದ ಹಳ್ಳಿ ವೈದ್ಯ!

ಮತ್ತೊಂದೆಡೆ ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಎಎಪಿ ನಾಯಕ ಮತ್ತು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು, ಇಂದು ಐತಿಹಾಸಿಕ ದಿನವಾಗಿದ್ದು, ದೆಹಲಿಯ ನಂತರ ಜನರಿಗೆ ಉಚಿತ ವಿದ್ಯುತ್ ಒದಗಿಸುತ್ತಿರುವ ಎರಡನೇ ರಾಜ್ಯ ಪಂಜಾಬ್ ಆಗಿದೆ. ಪಂಜಾಬ್ ಜನತೆಗೆ ಕೇಜ್ರಿವಾಲ್ ನೀಡಿದ ಗ್ಯಾರಂಟಿ ನಿಜವಾಗುತ್ತಿದೆ ಎಂದು ಹೇಳಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *