ಚಂಡೀಗಢ: ವಿಭಜಕ ಮನಸ್ಥಿತಿಯ ಜನರಿಗೆ ಒಂದು ಕ್ಷಣವೂ ಪಂಜಾಬ್ ಅನ್ನು ಆಳಲು ಬಿಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಪಂಜಾಬ್‍ನಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, ಉತ್ತರಪ್ರದೇಶ ಹಾಗೂ ಬಿಹಾರದ ಜನರನ್ನು ಪಂಜಾಬ್‍ನಿಂದ ಹೊರಹಾಕಿ ಎಂದ ಪಂಜಾಬ್ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಅವರ ಹೇಳಿಕೆಗೆ ದಿಲ್ಲಿಯ ಕುಟುಂಬವು ಚಪ್ಪಾಳೆ ತಟ್ಟಿದ್ದನ್ನು ಇಡೀ ದೇಶವೇ ನೋಡಿದೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಗುರು ಗೋವಿಂದ್ ಸಿಂಗ್ ಹುಟ್ಟಿದ್ದು ಬಿಹಾರದ ಪಾಟ್ನಾ ಸಾಹಿಬ್‍ನಲ್ಲಿ. ಗುರು ಗೋವಿಂದ್ ಸಿಂಗ್ ಅವರನ್ನು ಪಂಜಾಬ್‍ನಿಂದ ಹೊರಹಾಕುತ್ತೀರಾ? ಎಂದ ಅವರು, ನಿನ್ನೆ ಗುರು ರವಿದಾಸ್ ಜನ್ಮ ವಾರ್ಷಿಕೋತ್ಸವಕ್ಕೆ ವಿವಿಧ ರಾಜಕೀಯ ನಾಯಕರು ದೇವಾಲಯಗಳಿಗೆ ಭೇಟಿ ನೀಡುದ್ದಾರೆ. ನಿನ್ನೆ ನಾವು ಸಂತ ರವಿದಾಸ್ ಜಯಂತಿ ಆಚರಿಸಿದ್ದೆವು. ಅವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜನಿಸಿದ್ದರು. ನೀವು ಸಂತ ರವಿದಾಸ್ ಅವರನ್ನು ಪಂಜಾಬ್‍ನಿಂದ ತೆಗೆದುಹಾಕುತ್ತೀರಾ ಎಂದು ಕಿಡಿಕಾರಿದರು. ಇದನ್ನೂ ಓದಿ: ಮತಕ್ಕಾಗಿ ಕಾಂಗ್ರೆಸ್, ಪಂಜಾಬ್ ಸಿಎಂ ದೇಶವನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ: ಯೋಗಿ ಆದಿತ್ಯನಾಥ್
Advertisement
Advertisement
ನಿನ್ನೆ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಉತ್ತರಪ್ರದೇಶ, ಬಿಹಾರದ ಜನರನ್ನು ಪಂಜಾಬ್ ಪ್ರವೇಶಿಸಲು ಬಿಡಬೇಡಿ ಎಂದು ಹೇಳಿದ್ದರು. ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ನಗುತ್ತಾ ಚಪ್ಪಾಳೆ ತಟ್ಟಿ ಹೇಳಿಕೆಯನ್ನು ಬೆಂಬಲಿಸಿದ್ದರು. ಇದನ್ನೂ ಓದಿ: ಪಂಜಾಬ್‍ನಲ್ಲಿ ಬಿಹಾರದ ಜನತೆ ಎಷ್ಟಿದ್ದಾರೆ ಎನ್ನುವುದು ಕಾಂಗ್ರೆಸ್‍ಗೆ ತಿಳಿದಿದೆಯೇ: ನಿತೀಶ್ ಕುಮಾರ್ ಕಿಡಿ
ಪಂಜಾಬ್‍ನಲ್ಲಿ ಫೆಬ್ರವರಿ 20 ರಂದು 117 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಹಾಗೂ ಆಪ್ ಪಕ್ಷಗಳು ಪ್ರಬಲ ಸ್ಪರ್ಧೆಯಲ್ಲಿದೆ.