ಚಂಡೀಗಢ: ಪಂಜಾಬ್‍ನಲ್ಲಿ ಆಡಳಿತ ನಡೆಸುತ್ತಿರುವ ನೂತನ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಛನ್ನಿ ನಾನೊಬ್ಬ ಎಲ್ಲರಂತೆ ಸಾಮಾನ್ಯ ಮನುಷ್ಯ ನನಗೆ ಸೆಕ್ಯೂರಿಟಿ ಬೇಡವೆಂದು ಭದ್ರತಾ ವ್ಯವಸ್ಥೆಯನ್ನು ನಿರಾಕರಿಸಿದ್ದಾರೆ.
Advertisement
ಈ ಬಗ್ಗೆ ಘೋಷಣೆ ಹೊರಡಿಸಿರುವ ಚರಣ್‍ಜಿತ್ ಸಿಂಗ್, ನಾನೊಬ್ಬ ನಿಮ್ಮಂತೆ ಸಾಮಾನ್ಯ ಮನುಷ್ಯ ಹಾಗಾಗಿ ನನಗೆ 1000 ಭದ್ರತಾ ಸಿಬ್ಬಂದಿ ಮತ್ತು 300 ಕಾರ್ ಗಳ ರಕ್ಷಣಾ ವ್ಯವಸ್ಥೆ ಬೇಡವೆಂದು ನಯವಾಗಿಯೇ ತಿರಸ್ಕರಿಸಿದ್ದಾರೆ. ದೊಡ್ಡದಾದ ಭದ್ರತಾ ಪಡೆಯನ್ನು ಇಟ್ಟುಕೊಂಡು ಆಡಳಿತ ನಡೆಸುವುದು ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತದೆ. ಇದಲ್ಲದೆ ನನ್ನೊಂದಿಗೆ ಬರುವ ವಾಹನಗಳ ಸಂಖ್ಯೆ ಕೂಡ ಕಡಿತಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಚರಣ್‍ಜಿತ್ ಸಿಂಗ್ ಛನ್ನಿ ಮೇಲೆ 2018ರಲ್ಲಿ ಬಂದಿತ್ತು #MeToo ಆರೋಪ!
Advertisement
Advertisement
ಪಂಜಾಬ್‍ನ ಮುಖ್ಯಮಂತ್ರಿಯಾಗಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ಬಳಿಕ ಚರಣ್‍ಜಿತ್ ಸಿಂಗ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ನೂತನ ಸಿಎಂ ಆಗಿ ಆಯ್ಕೆಮಾಡಿತ್ತು. ಚರಣ್‍ಜಿತ್ ಸಿಂಗ್ ದಲಿತಸಮುದಾಯದವರಾಗಿದ್ದು, ಸಿಖ್ಖರಲ್ಲಿ ಅತ್ಯಂತ ಕೆಳ ವರ್ಗ ಚಮ್ಮಾರ ಸಮುದಾಯಕ್ಕೆ ಸೇರಿದವರು. 2007ರಿಂದ ಸತತವಾಗಿ ಚಾಮ್‍ಕೌರ್ ಸಾಹೀಬ್ ಕ್ಷೇತ್ರದಿಂದ ವಿಧಾನಸಭೆಗೆ ಆರಿಸಿ ಹೋಗಿದ್ದರು. 2015ರಲ್ಲಿ ವಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದರು. ಅಮರೀಂದರ್ ಸಿಂಗ್ ಸರ್ಕಾರದಲ್ಲಿ ತಾಂತ್ರಿಕಶಿಕ್ಷಣ ಸಚಿವರಾಗಿದ್ದ ಚರಣ್‍ಜಿತ್ ಸಿಂಗ್ ಇದೀಗ ಪಂಜಾಬ್ ಸಿಎಂ ಆಗಿ ಅಧಿಕಾರ ನಿರ್ವಹಿಸುತ್ತಿದ್ದಾರೆ.
Advertisement
Asserting that he is a common man and brother of every Punjabi, CM @CHARANJITCHANNI mentioned that he has set the wheels in motion to end the VIP culture in government functioning thereby facilitating the common masses.
???????? Read in Detail..https://t.co/ioluLcIDnI
— CMO Punjab (@CMOPb) September 23, 2021
ನಾನು ಸಾಮಾನ್ಯ ಮನುಷ್ಯ ಎಂದು ಹೇಳಿಕೊಂಡಿರುವ ಚರಣ್‍ಜಿತ್ ಸಿಂಗ್ ಸಿಎಂ ಆದ ಬಳಿಕ ಕೇವಲ 240 ಕಿ.ಮೀ ದೂರವಿರುವ ದೆಹಲಿಗೆ ಪ್ರೈವೇಟ್ ಜೆಟ್‍ನಲ್ಲಿ ಪ್ರಮಾಣ ಬೆಳೆಸಿದ್ದರು ಈ ಬಗ್ಗೆ ಇದೀಗ ವಿಪಕ್ಷಗಳು ವ್ಯಂಗ್ಯವಾಡುತ್ತಿವೆ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ 8 ತಿಂಗಳಿಂದ ಸಾಮೂಹಿಕ ಅತ್ಯಾಚಾರ – 26 ಆರೋಪಿಗಳ ಬಂಧನ!