ಚಂಡೀಗಢ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಪಠಾಣ್‍ಕೋಟ್ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಪಂಜಾಬ್ ಅಧ್ಯಕ್ಷ ಅಶ್ವನಿ ಕುಮಾರ್ ಶರ್ಮಾ ನಾಮಪತ್ರ ಸಲ್ಲಿಸಿದ್ದಾರೆ.
ರಾಜ್ಯದ ಭವಿಷ್ಯವನ್ನು ಬದಲಾಯಿಸಲು ಪಂಜಾಬ್ ಸ್ಥಿರ ಸರ್ಕಾರವನ್ನು ಬಯಸುತ್ತದೆ. ಬಿಜೆಪಿ ಪಂಜಾಬ್‍ನಲ್ಲಿ ಸರ್ಕಾರವನ್ನು ರಚಿಸಲಿದೆ. ಮತದಾನಕ್ಕೂ ಮುನ್ನ ಜನರು ಪ್ರಸ್ತುತ ಸರ್ಕಾರದ ಕಾರ್ಯಕ್ಷಮತೆಯನ್ನು ನಿರ್ಧರಿಸುತ್ತಾರೆ ಎಂದು ನನಗೆ ಖಾತ್ರಿಯಿದೆ. ಉದ್ಯೋಗ ಮತ್ತು ಭ್ರಷ್ಟಾಚಾರ ಸೇರಿದಂತೆ 2017 ರಲ್ಲಿ ಅವರು ನೀಡಿದ ಎಲ್ಲಾ ಭರವಸೆಗಳನ್ನು ಕಾಂಗ್ರೆಸ್ ವಿಫಲಗೊಳಿಸಿದೆ ಎಂದು ಅಶ್ವನಿ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಇಂದು ಕೇಂದ್ರ ಬಜೆಟ್ – ಆರ್ಥಿಕತೆಗೆ ಸಿಗುತ್ತಾ ‘ಬೂಸ್ಟರ್ ಡೋಸ್’..?
Advertisement
BJP party state chief Ashwani Kumar Sharma filed his nomination from Pathankot Assembly for the upcoming #PunjabElections2022
“People in Punjab want a stable government to change the future of the state. BJP is going to form government in Punjab,” he said (31.01) https://t.co/5Q81F5Q0zL pic.twitter.com/dhORHIrwX3
— ANI (@ANI) January 31, 2022
Advertisement
ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳ (ಸಂಯುಕ್ತ) ಜೊತೆ ಮೈತ್ರಿ ಮಾಡಿಕೊಂಡು ಬಿಜೆಪಿ ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಫೆಬ್ರವರಿ 20ರಂದು ಪಂಜಾಬ್‍ನಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.
Advertisement
Advertisement
2017ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ 77 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಸಂಪೂರ್ಣ ಬಹುಮತವನ್ನು ಗಳಿಸಿತು ಮತ್ತು 10 ವರ್ಷಗಳ ನಂತರ ಎಸ್‍ಎಡಿ-ಬಿಜೆಪಿ ಸರ್ಕಾರವನ್ನು ಹೊರಹಾಕಿತು. ಇದನ್ನೂ ಓದಿ: ಕೇಂದ್ರ ಹಣಕಾಸು ಸಚಿವಾಲಯ ತಲುಪಿದ ವಿತ್ತ ಸಚಿವೆ
117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷ 20 ಸ್ಥಾನಗಳನ್ನು ಗೆದ್ದು ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಎಸ್‍ಎಡಿ ಕೇವಲ 15 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೆ, ಬಿಜೆಪಿ 3 ಸ್ಥಾನಗಳನ್ನು ಪಡೆದುಕೊಂಡಿದೆ.