ನವದೆಹಲಿ: ಪಂಜಾಬ್‍ನಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನವಜೋತ್ ಸಿಂಗ್ ಸಿಧು ಅವರು ಆಮ್ ಆದ್ಮಿ ಪಕ್ಷವನ್ನು ಹಾಡಿ ಹೊಗಳಿದ್ದಾರೆ. ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ಭಗವಂತ್ ಮಾನ್‍ಗೆ ಟ್ವೀಟ್ ಮಾಡಿ ಶುಭ ಕೋರಿದ್ದಾರೆ.
Advertisement
ಮಾನ್ ಅವರು `ಮಾಫಿಯಾ ಮುಕ್ತ ಯುಗ ಆರಂಭಿಸಿದ್ದಾರೆ’ ಎಂಬ ಹೇಳಿಕೆ ನೀಡಿರುವುದು ಮತ್ತೊಮ್ಮೆ ಕಾಂಗ್ರೆಸ್ ಮುಖಭಂಗಕ್ಕೆ ಕಾರಣವಾಗಿದೆ. ತನ್ನ ಪಕ್ಷದ ಸೋಲಿನ ನಂತರ, ಆಪ್ ಅನ್ನು ಆಯ್ಕೆ ಮಾಡುವ ಅತ್ಯುತ್ತಮ ನಿರ್ಧಾರ ತೆಗೆದುಕೊಂಡಿದ್ದಕ್ಕಾಗಿ ಪಂಜಾಬ್‍ನ ಜನರನ್ನು ಅಭಿನಂದಿಸುತ್ತೇನೆ ಎಂದೂ ಅವರು ಶ್ಲಾಘಿಸಿದ್ದಾರೆ. ಭಗವಂತ್ ಮಾನ್ ಪಂಜಾಬ್‍ನ್ನು ಮಾಫಿಯಾ ಮುಕ್ತ ಮಾಡುತ್ತಾರೆ ಎಂಬ ನಿರೀಕ್ಷೆಯಿದೆ. ಜೊತೆಗೆ ಪಂಜಾಬ್ ಅನ್ನು ಪುನರುಜ್ಜೀವನ ಹಾದಿಯಲ್ಲಿ ಮುನ್ನಡೆಸಲಿದ್ದು, ಜನರ ನಿರ್ಧಾರ ಯಾವಾಗಲೂ ಉತ್ತಮವಾಗಿಯೇ ಇರುತ್ತದೆ ಎಂದು ಅವರು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಯರ್ ಕಿಡ್ನಾಪ್ ಮಾಡಿದ ರಷ್ಯಾ ಸೇನೆ
Advertisement
The happiest man is the one from whom no one expects … Bhagwant Mann unfurls a new anti – Mafia era in Punjab with a mountain of expectations …hope he rises to the occasion , brings back Punjab on the revival path with pro – people policies … best always
— Navjot Singh Sidhu (@sherryontopp) March 17, 2022
Advertisement
ಪಂಜಾಬ್‍ನಲ್ಲಿ ತಮ್ಮದೇ ಸರ್ಕಾರ ಇದ್ದರೂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿತು. 2017ರ ಚುನಾವಣೆಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದ ಎಎಪಿಗೆ ಕಾಂಗ್ರೆಸ್ ನಾಯಕರ ಒಳಜಗಳ, ಕಾಂಗ್ರೆಸ್ ಮೇಲಿನ ಜನರ ನಿರಾಸಕ್ತಿ, ದೆಹಲಿ ಮಾದರಿಯೆಡೆಗೆ ಜನರ ಆಕರ್ಷಣೆ ಮೊದಲಾದ ವಿಚಾರಗಳು ವರದಾನವಾಗಿ ಪರಿಣಮಿಸಿತು. ಇದನ್ನೂ ಓದಿ: ರಷ್ಯಾದ ಪಡೆಯಿಂದ ಕಿಡ್ನಾಪ್ ಆಗಿದ್ದ ಉಕ್ರೇನ್ ಮೇಯರ್ ಬಿಡುಗಡೆ
Advertisement
ಸಿಧು ಅವರು ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರೊಂದಿಗೆ ಮುಖಾಮುಖಿಯಾಗಿದ್ದರು. ಅವರು ಡ್ರಗ್ ಮಾಫಿಯಾವನ್ನು ರಕ್ಷಿಸುತ್ತಿದ್ದಾರೆ. ಸೂಕ್ಷ್ಮವಾದ ಪ್ರಕರಣದಲ್ಲಿ ಆರೋಪಿತರಾದ ರಾಜಕೀಯ ಪ್ರತಿಸ್ಪರ್ಧಿಗಳ ಬಗ್ಗೆ ಮೃದು ಸ್ವಭಾವದಿಂದ ವರ್ತಿಸುತ್ತಿದ್ದು, ಕ್ರಮ ಕೈಗೊಳ್ಳುವಲ್ಲಿಯೂ ಹಿಂದೇಟು ಹಾಕುತ್ತಿದ್ದಾರೆ ಎಂದು ಕ್ಯಾಪ್ಟನ್ ವಿರುದ್ಧ ಆರೋಪಿಸಿದ್ದರು. ಈ ಒಳಜಗಳ ಅಮರೀಂದರ್ ರಾಜೀನಾಮೆಗೆ ಕಾರಣವಾಯಿತು. ನಂತರ ಕ್ಯಾಪ್ಟನ್ ಕಾಂಗ್ರೆಸ್ ತೊರೆದು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರು. ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳ ಮುಂಚಿತವಾಗಿ ಚರಣ್‍ಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಅಮರೀಂದರ್ ಸಿಂಗ್ ಅವರ ಪದಚ್ಯುತಿಯ ನಂತರ ಮುಖ್ಯಮಂತ್ರಿ ಸ್ಥಾನ ಗಳಿಸುವಲ್ಲಿಯೂ ವಿಫಲರಾಗಿದ್ದ ಸಿಧು ಅವರು ತಮ್ಮದೇ ಪಕ್ಷದ ಮುಖ್ಯಮಂತ್ರಿಗಳ ವಿರುದ್ಧ ವಾಗ್ದಾಳಿ ಪ್ರಾರಂಭಿಸಿದ್ದರು.
ಪಕ್ಷದ ಸೋಲಿನ ನಂತರ ಮಾಧ್ಯಮಗಳೊಂದಿಗೆ ನಡೆಸಿದ ಮೊದಲ ಸಂವಾದದಲ್ಲಿ, `ಆಮ್ ಆದ್ಮಿ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಜನರು ಬದಲಾವಣೆ ಬಯಸಿದ್ದಾರೆ. ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಜನರ ನಿರ್ಧಾರ ದೇವರ ನಿರ್ಧಾರ. ಅದನ್ನು ವಿನಯದಿಂದ ಸ್ವಾಗತಿಸುತ್ತೇನೆ ಎಂದು ಸಿಧು ಹೇಳಿದ್ದರು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ಪಕ್ಷ ಎಎಪಿ ವಿರುದ್ಧ ಹೀನಾಯ ಸೋಲನುಭವಿಸಿತು. 117 ಕ್ಷೇತ್ರಗಳಲ್ಲಿ 98 ಸ್ಥಾನಗಳನ್ನು ಆಪ್ ಗೆದ್ದಿದ್ದು, ಕಾಂಗ್ರೆಸ್‍ಗೆ ತೀವ್ರ ಮುಖಭಂಗವಾಯಿತು.