ಬೆಂಗಳೂರು: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸ್ಯಾಂಡಲ್‍ವುಡ್‍ನ ರಾಜರತ್ನ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಗೆ ವಿಶೇಷವಾದ ಉಡುಗರೆಯೊಂದನ್ನ ನೀಡಿದ್ದಾರೆ.
ತಂದೆ ಡಾ.ರಾಜ್‍ಕುಮಾರ್ ಅವರು ಹಾಡಿರುವ `ಚಲಿಸುವ ಮೋಡಗಳು’ ಚಿತ್ರದ “ಜೇನಿನ ಹೊಳೆಯೋ ಹಾಲಿನ ಮಳೆಯೋ” ಹಾಡನ್ನ ಭಾವತುಂಬಿ ಹಾಡುವ ಮೂಲಕ ಶುಭಾಶಯ ಕೋರಿದ್ದಾರೆ. ಪುನೀತ್ ಈ ಸಂದರ್ಭದಲ್ಲಿ ತಮ್ಮ ತಂದೆಯನ್ನ ನೆನೆದಿದ್ದಾರೆ. ಸದ್ಯದಲ್ಲಿಯೇ `ಅಂಜನಿಪುತ್ರ’ ಚಿತ್ರದ ಹಾಡುಗಳು ನಿಮಗೆ ತಲುಪಲಿವೆ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಅಂಜನಿಪುತ್ರದಲ್ಲಿ ಅಪ್ಪುಗೆ ನಾಯಕಿಯಾಗಿ ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ ಜೊತೆಯಾಗಿದ್ದಾರೆ. ಸಿನಿಮಾಗೆ ಹರ್ಷ ನಿರ್ದೇಶನವಿದ್ದು, ಎಂ.ಎನ್.ಕುಮಾರ್ ಬಂಡವಾಳ ಹೂಡಿದ್ದಾರೆ. ಇನ್ನು ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿದ್ದು ಸ್ವಾಮಿ ಅವರ ಛಾಯಾಗ್ರಹಣವಿದೆ. ಚಿತ್ರವು ರಮ್ಯಾಕೃಷ್ಣ, ರವಿಶಂಕರ್, ಮುಖೇಶ್ ತಿವಾರಿ, ಚಿಕ್ಕಣ್ಣ, ಹರಿಪ್ರಿಯಾ ಸೇರಿದಂತೆ ದೊಡ್ಡ ತಾರಾಬಳಗವನ್ನು ಹೊಂದಿದೆ.